ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕುರಿತಂತೆ ಇಲ್ಲಿನ ಜನ ಕರ್ಮ ಕರ್ಮ ಎನ್ನುತ್ತಾರೆ ತಮಿಳುನಾಡು ಆಂಧ್ರಪ್ರದೇಶ ಕರ್ನಾಟಕ ಮೂರು ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 69 ಪಟ್ಟಣದಲ್ಲಿ ಹಾದು ಹೋಗಿದೆ ರಸ್ತೆ ಹೇಗಿದೆ ಅಂದರೆ ಇತ್ತ ಗುಣಮಟ್ಟದ ರಸ್ತೆನೂ ಮಾದಲಿಲ್ಲ ಅಗಲೀಕರಣವೂ ಆಗಿಲ್ಲ ರಾಷ್ಟ್ರೀಯ ಹೆದ್ದಾರಿ ಎನ್ನಲು ನಾಚಿಕೆಯಾಗುವಂತೆ ರಸ್ತೆ ಇದೆ.
ತಾಲೂಕು ಕೇಂದ್ರವಾಗಿರುವ ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ ಹಿನ್ನಲೆಯಲ್ಲಿ ಊರು ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ಇಲ್ಲಿನ ಜನರ ನಂಬಿದ್ದರು ಆದರೆ ಕನಿಷ್ಠ ಗುಣಮಟ್ಟದ ರಸ್ತೆ ಮಾಡುವಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ವಿಫಲವಾಗಿದೆ ಎಂದು ಜನರು ವಿಷಾದ ವ್ಯಕ್ತಪಡಿಸುತ್ತಾರೆ.
ರಸ್ತೆಗಳ ಅಭಿವೃದ್ಧಿಯಿಂದ ಊರ ಅಭಿವೃದ್ಧಿ
ಮೂಲಭೂತ ಸೌಕರ್ಯಗಳಲ್ಲಿ ಪ್ರಮುಖವಾದದ್ದು ರಸ್ತೆ ಇದನ್ನು ಅಭಿವೃದ್ಧಿ ಪಡಿಸಿದರೆ ಊರು ತಾನಾಗೆ ಅಭಿವೃದ್ಧಿಯಾಗುತ್ತದೆ,ರಸ್ತೆ ಹಾಗು ಸಾರ್ವಜನಿಕ ಸಾರಿಗೆ ಅನಕೂಲವಾಗಿರುವಂತ ಊರಿನಲ್ಲಿ ವಸತಿಗೆ ಯೋಗ್ಯ ಎಂದು ಜನತೆ ನೆಲೆಸುತ್ತಾರೆ ಜನಸಂದಣಿ ಹೆಚ್ಚಾದ ಪ್ರದೇಸದಲ್ಲಿ ವ್ಯಾಪಾರ ವ್ಯವಹಾರ ನಡೆಸಬಹುದು ಎಂಬ ನಂಬಿಕೆ ಏರ್ಪಟ್ಟು ವಾಣಿಜ್ಯ ಸಂಸ್ಥೆಗಳು ಕೈಗಾರಿಕ ಸಂಸ್ಥೆಗಳು ಬಂಡವಾಳ ಹೂಡಿಕೆಮಾಡುತ್ತಾರೆ ಊರು ಆರ್ಥಿಕವಾಗಿ ಅಭಿವೃದ್ಧಿಯಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.
ಮಾವಿಗೆ ವರ್ಲ್ದ್ ಫೇಮಸ್ಸು ರಸ್ತೆ ಮಾತ್ರ ಇಲ್ಲ
ಇಲ್ಲಿನ ಮಾವಿನ ಬೆಳೆ ಪ್ರಪಂಚಕ್ಕೆ ಫೇಮಸ್ಸು ಮಾವಿನ ಫಸಲಿನ ಸಮಯದಲ್ಲಿ,ಭಾರತದ ನಾನಾ ಭಾಗಗಳಿಂದ ಇಲ್ಲಿಗೆ ನ್ಯಾಷನಲ್ ಪರ್ಮಿಟ್ ಲಾರಿಗಳು ಬರುತ್ತದೆ ಇಂತಹ ಊರಿನಲ್ಲಿ ಸರಿಯಾದ ರಸ್ತೆ ಇಲ್ಲ ರಾಜಧಾನಿ ಬೆಂಗಳೂರಿನಿಂದ ನೂರು ಕೀ.ಮಿ ದೂರದಲ್ಲಿ ಇದೆ ಆದರೂ ನೇರಮಾರ್ಗ ಇಲ್ಲ ಎಂದು ದೂರದ ಡೆಲ್ಲಿಯವರಿಗೆ ಮಾತು ಕೇಳಿ ಬಂದಿದೆ ಆದರೂ ಇಲ್ಲಿ ಆಳುವಂತ ಜನಕ್ಕೆ ಇದ್ಯಾವುದರ ಅರಿವೆ ಇಲ್ಲದಿರುವುದು ದುರಂತ.
ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ, ಇನ್ನು ಊರು ಉದ್ಧಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿದರೆ ಕೇಳುವರು ಯಾರು ಇಂತಹ ಪರಿಸ್ಥಿತಿ ಶ್ರೀನಿವಾಸಪುರ ಪಟ್ಟಣದ ಜನರನ್ನು ಕಾಡುತ್ತಿದೆ.
ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 69 ಸಂಪೂರ್ಣವಾಗಿ ಹಳ್ಳಕೊಳ್ಳಗಳಿಂದ ತುಂಬಿ ಹೋಗಿದೆ ಇತ್ತಿಚೆಗೆ ಬಿದ್ದ ಸಣ್ಣ ಮಳೆ ರಸ್ತೆಯನ್ನು ಇನ್ನಷ್ಟು ಹಾಳು ಮಾಡಿದೆ ಈಗ ಹಳ್ಳಕೊಳ್ಳಕ್ಕೆ ಹೆದ್ದಾರಿ ಇಲಾಖೆ ವತಿಯಿಂದ ಪ್ಯಾಚ್ ವರ್ಕ್ ಕೆಲಸ ಆರಂಭಿಸಿದ್ದಾರೆ, ಆರಂಭ ಎನ್ನುವಂತೆ ಹಳ್ಳಕೊಳ್ಳಕ್ಕೆ ಜಲ್ಲಿ ತುಂಬಿಸಿದ್ದಾರೆ ಜಲ್ಲಿ ತುಂಬಿಸಿ ಮೂರ್ನಾಲ್ಕು ದಿನವಾದರು ಜಲ್ಲಿ ಮೇಲೆ ಡಾಂಬರು ಹಾಕಿಲ್ಲ,ಅಲ್ಲಿ ಓಡಾಡುವ ವಾಹನಗಳ ಟೈರಿನಿಂದ ಸಿಡಿಯುವ ಜಲ್ಲಿಕಲ್ಲು ಜನರಿಗೆ ತಗುಲಿದರೆ ಜನರ ಪ್ರಾಣಕ್ಕೆ ಹಾನಿಯಾಗಲಿದೆ ಈ ಅನಾಹುತಕ್ಕೆ ಹೊಣೆಯಾರು ಎಂದು ಜನತೆ ಪ್ರಶ್ನಿಸುತ್ತಾರೆ