ಶ್ರೀನಿವಾಸಪುರ:ಅಹಿಂದ ವರ್ಗಗಳ ಸಮಾಜದವರು ಸರ್ಕಾರದ ಹಿಂದುಳಿದ ಸಮಾಜಗಳಿಗೆ ನೀಡುವಂತ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ದಿ ಯಾಗಬೇಕು ಎಂದು ಕೋಲಾರ ಜಿಲ್ಲಾ ಅಹಿಂದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಸಾದ್ ಬಾಬು ತಿಳಿಸಿದರು.
ಶ್ರೀನಿವಾಸಪುರದ ಕನಕಭವನದಲ್ಲಿ ತಾಲ್ಲೂಕು ಅಹಿಂದ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನರಿಗೆ ಸರ್ಕಾರದಿಂದ ಬರುವಂತ ಸೌಲಭ್ಯಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕಿದೆ. ಹಿಂದುಳಿದ ಸಮಾಜಗಳ ಕಟ್ಟೆಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕೆಂಬುದು ಒಕ್ಕೊಟ್ಟದ ಉದ್ದೇಶವಾಗಿದೆ ಎಂದರು.
ಜಿಲ್ಲೆಯಲ್ಲಿ ಗಟ್ಟಿತಳಪಾಯದಿಂದ ಬೆಳೆದಿರುವ ಒಕ್ಕೂಟವನ್ನು ತಾಲೂಕಿನಲ್ಲೂ ಬಲಿಷ್ಠವಾಗಿ ಬೆಳೆಸುವ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ದಲಿತ ಮತ್ತು ಅಹಿಂದ ವರ್ಗಗಳು ಈ ದೇಶದ ಬೆನ್ನೆಲಬು ರಾಜಕೀಯವಾಗಿ ನಮ್ಮ ಸಮಾಜಗಳು ಪ್ರಬುದ್ದರಾಗಬೇಕು ಇದಕ್ಕಾಗಿ ಒಗ್ಗಟನ್ನು ಕಾಪಾಡಿಕೊಂಡು ಸಕ್ರಿಯವಾಗಿರಬೇಕು ಮುಂದಿನ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆ ಬರುತ್ತಿದ್ದು, ನಮ್ಮ ಅಹಿಂದ ವರ್ಗಗಳ ಸಮಾಜಗಳು ಸಿದ್ದರಾಗಬೇಕೆಂದು ಹೇಳಿದರು.
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅಹಿಂದ ಸಮಾಜಗಳ ಸಮುದಾಯಭವನ ನಿರ್ಮಾಣವಾಗಬೇಕು ೧ ವರ್ಷದ ಒಳಗೆ ಜಾಗವನ್ನು ಗುರುತಿಸುವುದರ ಜೊತೆಗೆ ಸುಜ್ಜಿತ ಭವನ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು ಎಂದರು.
ಕೋಲಾರದ ನಗರದಲ್ಲಿ ಶ್ರೀದೇವರಾಜು ಅರಸು ಭವನದಲ್ಲಿ ಅಹಿಂದ ಸಮಾಜಗಳ ಒಳತಿಗಾಗಿ ಕಛೇರಿ ಪ್ರಾರಂಭಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಮಾಡಲಾಯಿತು.
ತಾಲ್ಲೂಕು ಅಹಿಂದ ಒಕ್ಕೂಟದ ಅಧ್ಯಕ್ಷರಾಗಿ ಕುಂಬಾರ ಸಮುದಾಯದ ವೇಣುಗೋಪಾಲ್, ಉಪಾಧ್ಯಕ್ಷರಾಗಿ ಸವಿತಾ ಸಮಾಜದ ನರಸಿಂಹಮೂರ್ತಿ,ದರ್ಜಿ ಸಮುದಾಯದ ಅಮರನಾಥ್, ತೊಗಟವೀರ ಸಮುದಾಯದ ಮಂಜುನಾಥ್ ವಿಶ್ವಕರ್ಮ ಸಮುದಾಯದ ಹರ್ಷವರ್ಧನ್, ಕಾರ್ಯದರ್ಶರಾಗಿ ಗಂಗ ಮತಸ್ಥರ ಸಮುದಾಯದ ಸತ್ಯನಾರಾಯಣ, ಗಾಣಿಗ ಸಮುದಾಯದ ಎಲ್.ಐ.ಸಿ. ಶ್ರೀನಿವಾಸ್. ನಾಮಧಾರಿ ನಗರ್ತ ಸಮುದಾಯದ ಪಾಳ್ಯಂಶ್ರೀನಿವಾಸ್ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾಗಿ ಎನ್. ಕೃಷ್ಣಮೂರ್ತಿ,ಅಪ್ಪುರೊಳ್ಳ ವೆಂಕಟೇಶ್, ನಾರಾಯಣಸ್ವಾಮಿ, ಕಾರ್ಯದರ್ಶಿಯಾಗಿ ಕುರುಬ ಸಮುದಾಯದ ಕೆ.ವಿ. ಮಂಜುನಾಥ್ ಸಂಘಟನಾ ಕಾರ್ಯದರ್ಶಿಯಾಗಿ ಸವಿತ ಸಮುದಾಯದ ವೆಲ್ಡಿಂಗ್ ಶ್ರೀನಿವಾಸ್, ಶ್ರೀರಾಮ.ಆರ್. ಮಂಜುನಾಥ್, ಶಂಕರ್, ಬಾಬು, ವೆಂಕಟರವಣಪ್ಪ, ರಮೇಶ್, ಮಾಧ್ಯಮ ಕಾರ್ಯದರ್ಶಿಗಳಾಗಿ ಮಡಿವಾಳ ಸಮಾಜದ ಎನ್. ಮುರಳಿ ಮೋಹನ್, ನಾಗೇಂದ್ರ, ಘೋಷಿಸಲಾಯಿತು.
ಸಭೆಯಲ್ಲಿ ಅಹಿಂದ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ನಂದೀಶ್, ಕುರುಬರ ಸಂಘದ ಅಧ್ಯಕ್ಷ ವೇಮಣ್ಣ, ಬೆಸ್ತರ ಸಮಾಜ ಮುಖಂಡರಾದ ಜಮಾಕಾಯಿಲು ವೆಂಕಟೇಶ್, ಲಷ್ಮೀಪುರ ಜಗದೀಶ್, ಗಾಣಿಗ ಸಮುದಾಯದ ಕೃಷ್ಣಪ್ಪ, ರಜುಪುತ ಸಮುದಾಯದ ರಾಜೇಶ್ಸಿಂಗ್,ಉಪ್ಪರಸಮಾಜದ ಶ್ರೀನಿವಾಸಪ್ಪ, ಗೊಂದಳ ಸಮಾಜದ ಶಂಕರ್ಕೊಂಡೆ, ಸವಿತ ಸಮಾಜದ ಮಂಜುನಾಥ್, ಮರಾಠ ಸಮುದಾಯದ ವೇಣುಗೋಪಾಲರಾವ್,ಪರ್ವತರಾಜು ನಟರಾಜು,ತಾಲ್ಲೂಕಿನ ಅಹಿಂದ ವರ್ಗಗಳ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.