ಶ್ರೀನಿವಾಸಪುರ: ವಿಶ್ವ ಪ್ರಸಿದ್ಧ ಮಾವಿನ ಹಣ್ಣನ ನಗರ ಪ್ರಮುಖ ತಾಲೂಕು ಮುಖ್ಯಕೇಂದ್ರ ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರವೆಂದೇ ಹೆಸರಾಗಿರುವ ಶ್ರೀನಿವಾಸಪುರ ಪಟ್ಟಣದಲ್ಲಿ ಬಹುತೇಕ ರಸ್ತೆಗಳಿಗೆ ಪುಟ್ ಪಾತ್ ಇಲ್ಲ ಹಾಗಾಗಿ ಇಲ್ಲಿನ ಜನ ರಸ್ತೆಯಲ್ಲೆ ಸಂಚರಿಸುತಿದ್ದು ಇಲ್ಲಿ ಎಲ್ಲವೂ ಆಯೋಮಯವಾಗಿದೆ.
ಸದಾ ಗಿಜಗುಟ್ಟುವ ರಸ್ತೆಗಳಿಗೆ ಪುಟ್ ಪಾತ್ ಮಾಡಬೇಕು ಎಂಬ ಆಲೋಚನೆ ರಸ್ತೆ ಮಾಡುವಂತ ಇಂಜನಿಯರ್ ಗಳಿಗೆ ಇಲ್ಲ ಎನ್ನುವುದಾದರೆ ಅವರು ಒದಿದ್ದಾರು ಏನನ್ನು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವಂತ ಮಾತುಗಳು.
ಸಂಚಾರ ವ್ಯವಸ್ಥೆ ಸುಗಮವಾಗಿಲ್ಲ,ಪಟ್ಟಣದ ಹೃದಯ ಭಾಗದಲ್ಲಿನ ಮಾರುಕಟ್ಟೆ ಮುಂಬಾಗ ಹಾಗೂ ಪುಂಗನೂರು ರಸ್ತೆ ಎನ್ನುವ ಎಂ.ಜಿ.ರಸ್ತೆಯಲ್ಲಿ ಫುಟ್ ಪಾತ್ಗಳು ಅತಿಕ್ರಮಣಗೊಂಡಿವೆ,ಇದರಿಂದ ಪಾದಚಾರಿಗಳು ರಸ್ತೆ ಮಧ್ಯೆ ಸಾಗುವಂತಾಗಿದ್ದು, ವಾಹನಗಳ ಸಂಚಾರ ಸಹ ಅಸ್ತವ್ಯಸ್ತಗೊಂಡಿದೆ.ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಫುಟ್ ಪಾತ್ ಸೇರಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಪಾದಚಾರಿಗಳು,ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ.ಇದರಿಂದ ನಗರದ ಅಂದವೂ ಹಾಳಾಗುತ್ತಿದೆ.
ಇಲ್ಲಿ ಯಾವ ನಿಯಮಗಳು ಅಚ್ಚುಕಟ್ಟಾಗಿ ಪಾಲನೆಯಾಗುವುದಿಲ್ಲ.ಇದಕ್ಕೆಲ್ಲ ಕಾರಣ ಆಡಳಿತದಲ್ಲಿ ಸ್ಥಳೀಯ ರಾಜಕಾರಣಿಗಳು ನಂದೆಲ್ಲಿಡಲಿ ಎಂದು ಸಣ್ಣ ಸಣ್ಣ ವಿಚಾರಕ್ಕೂ ಮೂಗು ತೂರುಸುವಿಕೆ ಹಾಗು ಹಸ್ತಕ್ಷೇಪ ಮಾಡುವುದು ಇಲ್ಲಿ ಕಾಮನ್, ಇದು ಅಧಿಕಾರಿಗಳ ಮಟ್ಟದಲ್ಲಿ ನಿರ್ಲಕ್ಷ್ಯ ಮನೋಭಾವಕ್ಕೆ ಏಡೆ ಮಾಡಿಕೊಟ್ಟಿದ್ದು ಪಟ್ಟಣ ಅಭಿವೃದ್ಧಿಗೆ ಅಡ್ಡಗಾಲು ಹಾಕಿದಂತಾಗಿದೆ. ಸಂಚಾರ ನಿಯಮಗಳೂ ಸಮರ್ಪಕವಾಗಿ ಪಾಲನೆಯಾಗುವುದಿಲ್ಲ ಎನ್ನುವ ಕಡೆ ಮನುಷ್ಯರ ಜೀವಕ್ಕೂ ಬೆಲೆಯೇ ಇಲ್ಲದಂತಾಗಿ ಪಾದಚಾರಿಗಳ ಸುರಕ್ಷತೆಗೆ ಕವಡೆ ಕಾಸಿನ ಬೆಲೆ ಇರುವುದಿಲ್ಲ.
ಫುಟ್ ಪಾತ್ ಅತಿಕ್ರಮಣ:
ಸದಾ ಜನರಿಂದ ಗಿಜುಗುಟ್ಟುವ ಪಟ್ಟಣದ ಪ್ರಮುಖ ರಸ್ತೆಯಾದ ಹಳೆ ಬಸ್ ನಿಲ್ದಾಣದಿಂದ ಪುಂಗನೂರು ಕಡೆಗೆ ತೆರಳುವ ಎಂ.ಜಿ.ರಸ್ತೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಗತ್ಯವಾದ ಪಾದಚಾರಿ ಮಾರ್ಗವೇ ಇಲ್ಲ.ಎಲ್ಲಾ ಸರ್ಕಾರಿ ಕಾಲೇಜುಗಳು,ಬ್ಯಾಂಕುಗಳು ಈ ಭಾಗದಲ್ಲಿಯೇ ಇದೆ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಇದೆ ರಸ್ತೆಯಲ್ಲೆ ಓಡಾಡಬೇಕು,ತಹಶೀಲ್ದಾರ್ ಕಚೇರಿ ಆವರಣಕ್ಕೆ ಹೊಂದಿಕೊಂಡು ಬಾಡಿಗೆ ಕಾರು ಮಾಲಿಕರು ತಮ್ಮ ವಾಹನಗಳನ್ನು ತಂದು ದಿನಗಟ್ಟಲೆ ನಿಲ್ಲಿಸಿಕೊಂಡಿರುತ್ತಾರೆ, ನಂತರದಲ್ಲಿ ಗೂಡಂಗಡಿಗಳ ಸಾಲು ಸಾಲು ಇದೆ ಕೆಲವು ಅಂಗಡಿ ಮಾಲೀಕರೂ ರಸ್ತೆಯ ವರಿಗೂ ಶೀಟ್ ಹಾಕಿಕೊಂಡು ತಮ್ಮ ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದಾರೆ. ತಾಲೂಕಿನ ಉತ್ತರ ಭಾಗದ ಗ್ರಾಮಗಳಿಗೆ ಹಾಗು ಆಂಧ್ರ ಪ್ರದೇಶಕ್ಕೆ ಹೋಗುವ ಎಲ್ಲಾ ಬಸ್ಸುಗಳು ವಾಹನಗಳು ಇದೇ ಮಾರ್ಗವಾಗಿ ಓಡಾಡುತ್ತವೆ ಇಲ್ಲಿ ಫುಟ್ ಪಾತ್ ಅತಿಕ್ರಮಣವಾಗಿರುವ ಕಾರಣ ಸಂಜೆ ವೇಳೆ ಜನ ದಟ್ಟಣೆ ಹೆಚ್ಚಾಗಿರುತ್ತವೆ ಜನರು ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸುವ ಬಸ್ಸುಗಳು ವಾಹನಗಳ ನಡುವೆ ಆತಂಕದ ಒಡಾಡುವ ಅನಿವಾರ್ಯತೆ ಇರುತ್ತದೆ.
ಗೂಡಂಗಂಡಿ ಬೆನ್ನಿಗೆ ಲೋಕಲ್ ರಾಜಕಾರಣಿಗಳು
ಪುರಸಭೆ ಕಚೇರಿ ಮುಂಬಾಗದಲ್ಲಿ ಸೇರಿದಂತೆ ಪಟ್ಟಣದ ಬಹುತೇಕ ಫುಟ್ ಪಾತ್ ಅತಿಕ್ರಮಣದ ಗೂಡಂಗಂಡಿ ವ್ಯಾಪಾರಸ್ಥರಿಗೆ ಸ್ಥಳೀಯ ರಾಜಕಾರಣಿಗಳ ಬೆಂಬಲ ಇದ್ದು ಇದರಿಂದಾಗಿ ಅತಿಕ್ರಮ ತೆರವಿಗೆ ತಾಲೂಕು ಆಡಳಿತ ಹೆದರಿಕೊಂಡು ಸಾರ್ವಜನಿಕರ ಹಿತವನ್ನು ಬಲಿಕೊಡುತ್ತಿದೆ ಎಂದು ಸಾರ್ವಜನಿಕರ ಆರೋಪ. ಅಪರೂಪದ ವಿನ್ಯಾಸದಲ್ಲಿ ರಸ್ತೆ
ರಸ್ತೆಗಳಿಗೆ ಪುಟ್ ಬಾತ್ ಇಲ್ಲದಿರುವುದು ಇರಲಿ ಇಲ್ಲಿನ ರಸ್ತೆಗಳನ್ನು ಆಪರೂಪವಾಗಿ ವಿನ್ಯಾಸ ಮಾಡಲಾಗಿದೆ ಅಂಕುಡೊಂಕಿನ ರಸ್ತೆಗಳನ್ನು ನಿರ್ಮಾಣ ಮಾಡಿರುವ ಲೋಕೋಪಯೋಗಿ ಇಲಾಖೆ ಇಂಜನಿಯರ್ ಗಳ ನೈಪುಣ್ಯಕ್ಕೆ ಪಟ್ಟಣದ ಜನತೆ ಕೃತಾರ್ಥರಾಗಿದ್ದಾರೆ.