ಶ್ರೀನಿವಾಸಪುರ: ಕೇಂಪೇಗೌಡ ವಿಮಾನ ನಿಲ್ದಾಣದಲ್ಲಿ 108 ಅಡಿಗಳ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣ ಮಾಡಲಿದ್ದು ಈ ಸಂಬಂದ ವಕ್ಕಲಿಗ ಸಮಾಜದಲ್ಲಿ ಜಾಗೃತಿ ಮೂಡಿಸಿ ನಾಡಿನ ಪ್ರಖ್ಯಾತ ಸ್ಥಳಗಳಲ್ಲಿ ಮೃತಿಕೆ ಮಣ್ಣು ಸಂಗ್ರಹಣೆ ಕುರಿತಾಗಿ ರಾಜ್ಯಾದ್ಯಂತ ಕೇಂಪೇಗೌಡರ ರಥಯಾತ್ರೆ ಸಂಚರಿಸುತ್ತಿದ್ದು ಅದರಂತೆ ಇಂದು ತಾಲೂಕಿಗೆ ರಥಯಾತ್ರೆ ಪ್ರವೇಶ ಮಾಡಿದೆ ಈ ಸಂಬಂದ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದ ಶ್ರೀ ಬಾಲಂಜನೇಯ ದೇವಾಲಯದ ಆವರಣಕ್ಕೆ ರಥಯಾತ್ರೆಯ ವಾಹನ ಆಗಮಿಸುತ್ತಿದ್ದಂತೆ ವಕ್ಕಲಿಗ ಸಮುದಾಯದ ಸ್ವಾಮಿಜಿಗಳ ಫೋಟೋ ಬಳಸದೆ ಪ್ರಧಾನಿ, ಮುಖ್ಯಮಂತ್ರಿ ಇತರೆ ಮಂತ್ರಿಗಳ ಫೋಟೋಗಳನ್ನು ಇರಿಸಿ ರಥಯಾತ್ರೆ ಮಾಡುವ ಮೂಲಕ ಸರ್ಕಾರ ರಾಜಕೀಯ ಮಾಡಲು ಹೋರಟಿದೆ ಎಂದು ಸ್ಥಳೀಯ ವಕ್ಕಲಿಗ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ತಾಲೂಕು ವಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ನಿಲಟೂರ್ ಚಿನ್ನಪ್ಪರೆಡ್ಡಿ,ಆನಂದರೆಡ್ಡಿ,ಕೊಳತೂರುಪ್ರಶಾಂತ್,ಬೆಲ್ಲಂಶ್ರೀನಿವಾಸರೆಡ್ಡಿ,ಬಸ್ ಶ್ರೀನಿವಾಸರೆಡ್ಡಿ ಮುಂತಾದವರು ತೀವ್ರಧಾಟಿಯಲ್ಲಿ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.ವಕ್ಕಲಿಗ ಮುಖಂಡರ ವರ್ತನೆಯಿಂದ ಗಲಿಬಿಲಿಗೊಂಡ ಕಾರ್ಯಕ್ರಮದ ಆಯೋಜಕರು ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ.ನಾರಯಣಸ್ವಾಮಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಸೇರಿದಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಮತ್ತು ಮುಖಂಡರು ಅಸಮಧಾನಗೊಂಡಿದ್ದ ವಕ್ಕಲಿಗ ಮುಖಂಡರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು.
ತೇಪೆ ಹಾಕಿದ ವೈ.ಎ.ಎನ್
ವಕ್ಕಲಿಗ ಸಮುದಾಯದ ಸ್ವಾಮಿಜಿಗಳಾಗಿದ್ದ ಬಾಲಗಂಗಾಧರನಾಥಸ್ವಾಮಿಜಿ ಹಾಗೇ ಶ್ರೀನಿರ್ಮಲಾನಂದ ಸ್ವಾಮಿಜಿ ಭಾವ ಚಿತ್ರ ಕೇಂಪೇಗೌಡ ರಥಯಾತ್ರೆ ಸಂದರ್ಭದಲ್ಲಿ ಪರಗಣೆಗೆ ತಗೆದುಕೊಂಡಿಲ್ಲ ಎಂದು ಕೂಗು ಎದ್ದಿರುವ ಹಿನ್ನಲೆಯಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ.ನಾರಯಣಸ್ವಾಮಿ ಪರಿಹಾರವಾಗಿ ಬಾಲಗಂಗಾಧರನಾಥಸ್ವಾಮಿಜಿ ಹಾಗು ಶ್ರೀನಿರ್ಮಲಾನಂದ ಸ್ವಾಮಿಜಿ ಭಾವ ಚಿತ್ರಗಳನ್ನು ಟ್ರಾಕ್ಟರ್ ನಲ್ಲಿ ಅಳವಡಿಸುವ ಮೂಲಕ ಅಸಮಧಾನಕ್ಕೆ ತೇಪೆಹಾಕಿದ್ದರು.