- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ
- ರಾಜ್ಯದಿಂದ ಬಿಜೆಪಿ ತೊಲಗುತ್ತದೆ
- ಕೆ.ಸಿ ವ್ಯಾಲಿ ಯೋಜನೆ ನಮ್ಮದೆ
- ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡುತ್ತೇನೆ
ಕೋಲಾರ:ಕೋಲಾರ ಕ್ಷೇತ್ರದ ಮುಖಂಡರು,ಕಾರ್ಯಕರ್ತರ ಪ್ರೀತಿ ಅಭಿಮಾನವನ್ನು ತಿರಸ್ಕರಿಸಲು ಸಾಧ್ಯವಿಲ್ಲ,ಹಾಗಾಗಿ ನಾನು ಮುಂಬರುವಂತ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧೆಮಾಡುತ್ತೇನೆ,ಈ ಕುರಿತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅನುಮೋದನೆ ತೆಗೆದುಕೊಳ್ಳಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ದೆ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದರು.
ಅವರು ಕೋಲಾರ ನಗರದ ಜೂನಿಯರ್ ಕಾಲೇಜು ಮಿನಿ ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ,ರಮೇಶ್ ಕುಮಾರ್, ಕೋಲಾರದ ಹಾಲಿ ಶಾಸಕ ಶ್ರೀನಿವಾಸಗೌಡ, ಕೃಷ್ಣಬೈರೇಗೌಡ ಸೇರಿದಂತೆ ಹಲವಾರು ಶಾಸಕರು ಮುಖಂಡರು ಸೇರಿದಂತೆ ಬಹುತೇಕ ಎಲ್ಲರೂ ಇಲ್ಲಿಯೇ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಕ್ಷೇತ್ರದ ಜನರು ಮುಖ್ಯ ನಂತರ ನಾಯಕರುಗಳು ಜನರ ಆಶೀರ್ವಾದ ಇದ್ದರೆ ನಾವು ಉಳಿಯಬಹುದು. ನಾನು ಕೆಲ ದಿನಗಳ ಹಿಂದೆ ಕೋಲಾರದ ದೇವಸ್ಥಾನ ಮಸೀದಿ ಚರ್ಚ್ಗೆ ಭೇಟಿ ಮಾಡಿದ್ದಾಗ ಇಲ್ಲಿನ ಜನತೆ ಸಹ ಇಲ್ಲಿಯೇ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದರು ಆವರೆಲ್ಲರ ಆಶಯದಂತೆ ಸ್ಪರ್ದೆಮಾಡುತ್ತೇನೆ ಎಂದ ಅವರು ಯಾವುದೆ ತಪ್ಪು ಮಾಹಿತಿ ಹೈಕಮಾಂಡ್ ಗೆ ರವಾನೆಯಾಗಬಾರದು subject approval by the high command ಎಂದ ಅವರು ಪಕ್ಷದ ಪ್ರತಿವಾರ್ಡಗೂ ನಾನು ಬರ್ತಿನಿ ಯಾವುದೆ ಕಾರ್ಯಕರ್ತನನ್ನು ನಿರ್ಲಕ್ಷ್ಯ ಮಾಡಲ್ಲ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡುತ್ತೆನೆ ಮಾಜಿ ಸಭಾಪತಿ ಸುದರ್ಶನ್ ಅವರ ನೀಡುರುವ ಸಲಹೆಯನ್ನು ವಿಶ್ವಾಸಕ್ಕೆ ತಗೆದುಕೊಳ್ಳುತ್ತೇನೆ ಎಂದರು.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ದೆ ಮಾಡುವ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಸಭೆಯಲ್ಲಿದ್ದ ಜನರ ಚಪ್ಪಾಳೆ, ಹರ್ಷೋದ್ಗಾರ, ಪಟಾಕಿ ಸಿಡಿತ, ಸಂಭ್ರಮ ಮುಗಿಲು ಮುಟ್ಟಿತು
ಹೋರಗಡೆಯವ ಎಂಬ ಅಪಪ್ರಚಾರಕ್ಕೆ ಅವಕಾಶ ಬೇಡ
ನಾನು ಕೋಲಾರಕ್ಕೆ ಹೊರಗಡೆ ಅಭ್ಯರ್ಥಿ,ಗೆದ್ದರೆ ಕೈಗೆ ಸಿಗುವುದಿಲ್ಲವೆಂಬ ಅಪಪ್ರಚಾರ ಶುರುವಾಗಿದೆ ಆದರೆ, ಕ್ಷೇತ್ರದ ಯಾವುದೇ ಮತದಾರ ತಮ್ಮನ್ನು ಭೇಟಿಯಾಗಲು ನಾಯಕರ ಅನುಮತಿ ಬೇಕಿಲ್ಲ ಚೆಡ್ಡಿ ಹಾಕಿದ ಶ್ರೀಸಾಮಾನ್ಯನಿಗೂ ನನ್ನನ್ನು ನೇರವಾಗಿ ಬಂದು ಕಾಣಬಹುದು,ಪ್ರತಿ ವಾರ ಕೋಲಾರಕ್ಕೆ ಬರುವೆ ಇಲ್ಲಿನ ಮತದಾರರ ಕಷ್ಟ ಸುಖದಲ್ಲಿ ಭಾಗವಹಿಸುವೆ,ಶಕ್ತಿ ಮೀರಿ ಕ್ಷೇತ್ರದ ಮತದಾರರ ಸಮಸ್ಯೆಗಳನ್ನು ಪ್ರಮಾಣಿಕವಾಗಿ ಭಗೆಹರಿಸುವೆ ಎಂದರು.
ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಜನಪರವಾದ ಕೆಲಸಮಾಡಿಕೊಂಡೇ ಬಂದಿದ್ದೇನೆ, ಅಭಿವೃದ್ಧಿಯ ವಿಚಾರದಲ್ಲಿ ಎಂದೂ ಹಿಂದೆ ಬಿದ್ದಿಲ್ಲ, ಹಿಂದೆ ತಾವು ಗೆದ್ದಿರುವ ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ್ದೇನೆ, ಹಾಗೆಯೇ ಕೋಲಾರವನ್ನು ಸರ್ವತೋಮುಖ ಅಭಿವೃದ್ಧಿಪಡಿಸುತ್ತೇನೆ ಎಂದು ಘೋಷಿಸಿದರು.ಚುನಾವಣೆ ಹೊತ್ತಿಗೆ ಕೋಲಾರ ಕ್ಷೇತ್ರದ ಪ್ರತಿ ಹೋಬಳಿ ಕೇಂದ್ರಗಳಿಗೂ ಆಗಮಿಸುತ್ತೇನೆ, ನಂತರ ನಾಮಪತ್ರ ಸಲ್ಲಿಸಿ ಹೋಗಿ ರಾಜ್ಯ ಪ್ರವಾಸ ಮಾಡುತ್ತೇನೆ ಎಂದರು.
ಬಿಜೆಪಿಯದು ಸುಳ್ಳಿನ ಕಾರ್ಖಾನೆ
ಬಿಜೆಪಿ ಸುಳ್ಳಿನ ಕಾರ್ಖಾನೆಯಾಗಿದೆ, ಬಿಜೆಪಿ ವಿಚಾರದಲ್ಲಿ ಜನತೆ ಎಚ್ಚರವಾಗಿರಬೇಕು ಎಂದ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ದಿಸುವುದಾಗಿ ಘೋಷಿಸಿದ ನಂತರ ಬಿಜೆಪಿ ಇಲ್ಲ ಸಲ್ಲದ ಅಪಪ್ರಚಾರ ನಡೆಸುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಅವರು, ಕೋಲಾರದಲ್ಲಿ ಬಿಜೆಪಿ ಇಲ್ಲ ಆದರೂ,ಜನತೆ ಎಚ್ಚರವಾಗಿರಬೇಕೆಂದರು.ಮುಂದಿನ ಚುನಾವಣೆಯಲ್ಲಿ ಶೇ.100 ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತದೆ, ಮಾನ ಮರ್ಯಾದೆ ಇಲ್ಲದ ಬಿಜೆಪಿಯ ಪೀಡೆ ತೊಲಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿ ಯೋಜನೆಗಳನ್ನು ನಿಗದಿತ ಸಮಯದಲ್ಲಿ 2ಲಕ್ಷ ಕೋಟಿ ವೆಚ್ಛ ಮಾಡಿ ಪೂರ್ಣಗೊಳಿಸಿ ಪ್ರತಿ ರೈತರ ಭೂಮಿಗೆ ನೀರು ಹರಿಸುವುದಾಗಿ ಮಾಜಿ ಮುಖ್ಯಮಂತ್ರಿ ಘೋಷಿಸಿದ ಅವರು ಕೆಸಿ ವ್ಯಾಲಿ ಯೋಜನೆಗೆ 1400 ಕೋಟಿ ರೂ, ಚಿಕ್ಕಬಳ್ಳಾಪುರಕ್ಕೆ ಎಚ್ಎನ್ ವ್ಯಾಲಿ ಯೋಜನೆ, ಎತ್ತಿನ ಹೊಳೆಗೆ 12 ಸಾವಿರ ಕೋಟಿ ಅಂದಾಜು ವೆಚ್ಛದಲ್ಲಿ ಭೂಮಿ ಪೂಜೆ ಸಲ್ಲಿಸಿದ್ದು, ಅಧಿಕಾರಕ್ಕೆ ಬಂದ 2 ವರ್ಷದೊಳಗೆ ಎತ್ತಿನ ಹೊಳೆ ಯೋಜನೆಯನ್ನು ಪರಿಷ್ಕೃತ 24 ಸಾವಿರ ಕೋಟಿ ವೆಚ್ಛ ಮಾಡಿ ಪೂರ್ಣಗೊಳಿಸಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಹರಿಸುವುದಾಗಿ ಪ್ರಕಟಿಸಿದರು.
ಅಲ್ಪಸಂಖ್ಯಾತರಿಗೆ ಯೋಜನೆಗಳು, ಕೋಲಾರಕ್ಕೆ ಸೂಪರ್ ಸ್ಪೆಷಲ್ ಆಸ್ಪತ್ರೆ, ಪರಿಶಿಷ್ಟರಿಗೆ ಆರ್ಥಿಕ ಶಕ್ತಿ ಹೀಗೆ ನುಡಿದಂತೆ ಸರಕಾರ ತಮ್ಮದಾಗಲಿದೆ, ಹಿಂದೆಯೂ ಪ್ರಣಾಳಿಯ ಎಲ್ಲಾ ಭರವಸೆಗಳನ್ನು ಈಡೇರಿಸಿ ಹೆಚ್ಚುವರಿಯಾಗಿ 20 ಕ್ಕೂ ಹೆಚ್ಚು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾಗಿ ವಿವರಿಸಿದರು.
ದಲಿತರಿಗೆ ಗುತ್ತಿಗೆಯಲ್ಲಿ ಮೀಸಲಾತಿ, ಮಹಿಳೆಯರಿಗೆ 10 ಲಕ್ಷ ರೂವರೆವಿಗೂ ಬಡ್ಡಿ ರಹಿತ ಸಾಲಸೌಲಭ್ಯ, ಹೀಗೆ
ತಮ್ಮ ಅವಧಿಯಲ್ಲಿ ರಾಜ್ಯಾದ್ಯಂತ 15ಲಕ್ಷ ಮನೆಗಳ ನಿರ್ಮಾಣ ಮಾಡಲಾಗಿತ್ತು, ಆದರೆ, ಬಿಜೆಪಿ ಸರಕಾರದಿಂದ 1 ಮನೆಯ ನಿರ್ಮಾಣವೂ ಆಗಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅನ್ನ ಭಾಗ್ಯಯೋಜನೆಯಡಿ ಪ್ರತಿಕುಟುಂಬಕ್ಕೆ ತಲಾ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಘೋಷಿಸಿದರು.
ಹೆಚ್ಚು ರಾಜಕೀಯ ಭಾಷಣ ಮಾಡುವುದಿಲ್ಲ, ಜ.23 ಕ್ಕೆ ರಂದು ಕೋಲಾರಕ್ಕೆ ಮತ್ತೇ ಆಗಮಿಸುತ್ತೇನೆ, ಅಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಾವೇಶ ನಡೆಸಿ ಮತ್ತಷ್ಟು ವಿವರವಾಗಿ ಮಾತನಾಡುತ್ತೇನೆ ಎಂದರು.