ನ್ಯೂಜ್ ಡೆಸ್ಕ್:-ಮಾರ್ಚ ತಿಂಗಳಿನಿಂದ ಹಳೇ ರೂ.100 ಮುಖಬೆಲೆಯ ನೋಟು ಸ್ಥಗಿತಗೊಳಿಸಿ ವಾಪಸ್ಸು ಪಡೆಯುವ ನಿರ್ಧಾರಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ ಮಾಡಿರುವುದಾಗಿ ಹೇಳಲಾಗಿದೆ. ದಿನಗಳಲ್ಲಿ ರೂ.100 ಮುಖಬೆಲೆಯ ಹೊಸ ಸರಣಿಯ ನೋಟುಗಳನ್ನು ಜನತೆಯಲ್ಲಿ ಚಲಾವಣೆಯಲ್ಲಿ ಇರುವಂತೆ ವ್ಯವಸ್ಥೆ ಮಾಡುವ ಉದ್ದೇಶದಿಂದ ಹಳೆಯ ಸರಣಿ ಎಲ್ಲಾ ನೋಟುಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಲಾಗಿದೆ
ಮಂಗಳೂರಿನ ದಕ್ಷಿಣ ಕನ್ನಡದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಭದ್ರತಾ ಸಮಿತಿ ಮತ್ತು ನಗದು ನಿರ್ವಹಣಾ ಸಮಿತಿ ಸಬೆಯಲ್ಲಿ ಆರ್’ಬಿಐ ಸಹಾಯಕ ಮಹಾಪ್ರಬಂಧಕ ಬಿ.ಎಂ.ಮಹೇಶ್ ಮಾತನಾಡುವಾಗ ತಿಳಿಸಿದ್ದಾರೆ.
ಹಳೆಯ ನೋಟುಗಳಂತೆ ಕಾಣುವ ಖೋಟಾನೋಟುಗಳು ಸಹ ಹೆಚ್ಚು ಚಲಾವಣೆಯಲ್ಲಿದೆ ಈ ಎಲ್ಲಾ ಕಾರಣಗಳಿಗಾಗಿ ರೂ.100ರ ಮುಖಬೆಲೆಯ ಹಳೆಯ ಸೀರಿಸ್ ನ ನೋಟುಗಳನ್ನು ಹಿಂಪಡೆಯಲಾಗುತ್ತಿದೆ. ಹಳೆಯ ಸೀರಿಸ್ ಹೊಂದಿರುವ 100ರ ಕರೆನ್ಸಿ ನೋಟುಗಳನ್ನು ಮಾರ್ಚ್ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ. ಕಳೆದ 6 ವರ್ಷಗಳಿಂದ ಈ ನೋಟುಗಳು ಮುದ್ರಣವಾಗುತ್ತಿಲ್ಲ. ಆದರೆ, ಈ ಹಿಂದೆಯೇ ಮುದ್ರಣಗೊಂಡಿರುವ ಈ ನೋಟುಗಳನ್ನು ಸಂಪೂರ್ಣವಾಗಿ ಹಿಂಪಡೆಯುವುದು ಆರ್’ಬಿಐ ಉದ್ದೇಶವಾಗಿದೆ.ಚಲಾವಣೆಯಲ್ಲಿರುವ ಹಳೆಯ ನೋಟುಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗುತ್ತಾ ಬರಲಾಗಿದೆ ಮಾರ್ಚ್ ಅಂತ್ಯಕ್ಕೆ ಇದೂ ಪೂರ್ಣವಾಗಲಿದೆ ಎಂದು ಹೇಳಿದ್ದಾರೆ.
ಅಮಾನ್ಯೀಕರಣ ಅಲ್ಲ ಅತಂಕ ಬೇಡ
ನೋಟು ವಾಪಸ್ ಕಾರಣಕ್ಕೆ ಜನತೆ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಸ್ವಚ್ಛ ನೋಟುಗಳು ಜನತೆಯ ಕೈಗೆ ಸಿಗಬೇಕೆಂಬುದು ಮಾತ್ರ ಉದ್ದೇಶ. ಇದು ನೋಟು ಅಮಾನ್ಯೀಕರಣ ಅಲ್ಲ ಎಂದು ಇದೇ ವೇಳೆ ಮಹೇಶ್ ಅವರು ಸ್ಪಷ್ಟಪಡಿಸಿದ್ದಾರೆ.
ಹೊಸ ಸೀರಿಸ್ ಹೊಂದಿರುವ 100ರ ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿರಬೇಕು. ಬ್ಯಾಂಕ್ ನವರು ಅಂತಹ ನೋಟುಗಳನ್ನು ಇರಿಸಿಕೊಳ್ಳದೆ ಕರೆನ್ಸಿ ಚೆಸ್ಟ್’ಗೆ ಒಪ್ಪಿಸಬೇಕು ಎಂದು ಸೂಚಿಸಿದ್ದಾರೆ.
ರೂ.10 ನಾಣ್ಯ ಚಲಾವಣೆಗೊಳ್ಳಲು ದಾರಿ ಹುಡುಕಿ: ಬ್ಯಾಂಕ್ ಗಳಿಗೆ ಆರ್’ಬಿಐ ಸೂಚನೆ
ಸರ್ಕಾರಿ ಕಚೇರಿಗಳಲ್ಲಿ ರೂ.10 ನಾಣ್ಯ ಸ್ವೀಕರಿಸಿ
10 ರೂ ನಾಣ್ಯ ಚಲಾವಣೆಯಾಗಲು ದಾರಿ ಹುಡುಕುವಂತೆ ಬ್ಯಾಂಕ್ ಗಳಿಗೆ ಸೂಚನೆ ನೀಡಿರುತ್ತಾರೆ.
ಕರೆನ್ಸಿ ಚೆಸ್ಟ್ ಗಳಲ್ಲಿ ರೂ.10 ನಾಣ್ಯದ ಮಿನಿ ಪರ್ವತವೇ ಸೃಷ್ಟಿಯಾಗುತ್ತಿದೆ. ನಕಲಿ ನೋಟಾದರೂ ಸಿಗಬಹುದು ಆದರೆ, ರೂ.10 ನಾಣ್ಯ ನಕಲಿಯಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಿಸಿಕೊಡಬೇಕು.ಅಲ್ಲದೆ, ಸರ್ಕಾರಿ ಕಚೇರಿಗಳಲ್ಲಿ 10 ನಾಣ್ಯ ಸ್ವೀಕರಿಸಿ ಚಲಾವಣೆಯಾಗಲು ಮುಂದಾಗುವಂತೆ ಹೇಳಿದ್ದಾರೆ.