ನ್ಯೂಜ್ ಡೆಸ್ಕ್: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ರಾಜ್ಯದ ಪ್ರಖ್ಯಾತ ತಮಟೆ ಕಲಾವಿದ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರಿಗೆ ನೀಡಿ ಗೌರವಿಸಿದೆ.
ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತಮಟೆ ವಾದಕಾರದ ಕಥೆ
ವಿಭಜಿತ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದ ನಿವಾಸಿಯಾಗಿರುವ 77 ವರ್ಷದ ಮುನಿವೆಂಕಟಪ್ಪ ಗ್ರಾಮದ ದಿವಂಗತ ಪಾಪಣ್ಣ, ಹಾಗು ದಿವಂಗತ ಮುನಿಗಂಗಮ್ಮ ನವರ ಪುತ್ರ ಮುನಿವೆಂಕಟಪ್ಪ ಅವರಿಗೆ 17 ವರ್ಷವಿದ್ದಾಗ ತಂದೆ ಪಾಪಣ್ಣ ಅಪಘಾತದಲ್ಲಿ ನಿಧನ ಹೊಂದುತ್ತಾರೆ ತಾಯಿ ಮುನಿಗಂಗಮ್ಮ ವಯೋಸಹಜ ಕಾಯಿಲೆಯಿಂದಾಗಿ 7 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ.ಮುನಿವೆಂಕಟಪ್ಪ 4ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದು ಕನ್ನಡ ಓದಲು ಬರೆಯಲು ಬರುತ್ತೆ.
ಮುನಿವೆಂಕಟಪ್ಪನವರಿಗೆ 17 ವರ್ಷದ ಪ್ರಾಯ ಇದ್ದಾಗ ಅವರ ತಂದೆ ಪಾಪಣ್ಣ ಮೃತಪಟ್ಟ ಹಿನ್ನಲೆಯಲ್ಲಿ ಗ್ರಾಮದಲ್ಲಿ ತಮಟೆ ಬಾರಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಗ್ರಾಮಸ್ಥರ ಮನವಿಯಂತೆ ಮುನಿವೆಂಕಟಪ್ಪ ತಮಟೆ ಬಾರಿಸಲು ಆರಂಭಿಸುತ್ತಾರೆ
ನಂತರ ದಿನಗಳಲ್ಲಿ ಅದು ವೃತ್ತಿಯಾಗುತ್ತದೆ ತಮಟೆ ಭಾರಿಸುವುದು ಗಂಡು ಕಲೆ ನಾದದ ಗತ್ತು ಹಿಡಿದು ತಮಟೆ ಬಾರಿಸುತ್ತ ದಿನಗಳದಂತೆ ಪ್ರಖ್ಯಾತರಾದ ಮುನಿವೆಂಕಟಪ್ಪತಮಟೆ ವಾದ್ಯವನ್ನು ಲಯಬದ್ದವಾಗಿ ಬಾರಿಸುತ್ತ ಖ್ಯಾತಿ ಪಡೆಯುತ್ತಾರೆ ವಿಭಜಿತ ಕೋಲಾರ ಜಿಲ್ಲೆಯಲ್ಲಿ 13 ಜನರ ತಂಡ ಕಟ್ಟಿಕೊಂಡು ಜಾತ್ರೆ, ಉತ್ಸವ, ಸಭೆ, ಕರಗ ಇತರೆ ಸಮಾರಂಭಗಳಲ್ಲಿ ಮುನಿವೆಂಕಟಪ್ಪನವರ ತಮಟೆ ಸದ್ದು ಮಾಡಲೇ ಬೇಕು ಎನ್ನುವಂತ ಖ್ಯಾತಿ ಪಡೆಯುತ್ತದೆ ಇವರ ಸದ್ದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಲೆ ತೂಗಿ ತಮ್ಮ ಕಾರ್ಯಕ್ರಮಗಳಲ್ಲಿ ಆದ್ಯತೆ ನೀಡುವ ಮೂಲಕ ಪ್ರಮುಖ ಉತ್ಸವಗಳಲ್ಲಿ ಮುನಿವೆಂಕಟಪ್ಪನವರ ತಮಟೆ ವಾದ್ಯಕ್ಕೆ ಅವಕಾಶ ಕಲ್ಪಿಸುತ್ತಾರೆ.
ರಾಜ್ಯ ಸರ್ಕಾರ ಆಯೋಜನೆ ಮಾಡುವಂತ ಉತ್ಸವಗಳಾದ ಮೈಸೂರು ದಸರಾ, ಇಲಾಖೆಯಿಂದ ನಡೆಸುವ ರಾಷ್ಟ್ರೀಯ ಕ್ರೀಡಾಕೂಟ, ಜಿಲ್ಲಾ ಉತ್ಸವಗಳಲ್ಲಿ ಮತ್ತು ತಮಿಳುನಾಡು ಆಂಧ್ರ ಪ್ರದೇಶಗಳಲ್ಲಿ ತಮಟೆ ಪ್ರದರ್ಶನ ಪ್ರಖ್ಯಾತಿ ಪಡೆಯುತ್ತದೆ ಪರಿಣಾಮ ಇವರ ತಮಟೆ ಶಬ್ದ ದೇಶ ವಿದೇಶಗಳಲ್ಲೂ ಸದ್ದು ಮಾಡುತ್ತದೆ.
2014ರಲ್ಲಿ ಅಮೇರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನ 2015ರಲ್ಲಿ ಅಮೇರಿಕಾದಲ್ಲಿ ನಡೆದ ನಾವಿಕ ಸಮ್ಮೇಳನದಲ್ಲಿಯೂ ತಮಟೆ ಸದ್ದು ಮಾಡಿದ್ದು. ನಂತರ ಜಪಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ಮುನಿವೆಂಕಟಪ್ಪ ತಮ್ಮ ತಮಟೆ ವಾದ್ಯ ಪ್ರದರ್ಶನ ಮಾಡಿ ವಿದೇಶಿಯರ ಹಾಗು ಅನಿವಾಸಿ ಭಾರತೀಯರ ಮೆಚ್ಚುಗೆ ಗಳಿಸುತ್ತಾರೆ.
ಇವರ ತಮಟೆ ಸದ್ದನ್ನು ರಾಜ್ಯ ಸರ್ಕಾರ ಮೆಚ್ಚಿ ಕರ್ನಾಟಕ ಸರಕಾರದ 1992ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರೆ ಹಂಪಿ ವಿಶ್ವವಿದ್ಯಾಲಯ ಮುನಿವೆಂಕಟಪ್ಪನವರಿಗೆ ನಾಡೋಜ ಪ್ರಶಸ್ತಿ ನೀಡಿ ಗೌರಿವಿಸುತ್ತದೆ. ರಾಜ್ಯದ ವಿವಿಧ ಸಂಘ ಸಂಸ್ಥೆಗಳು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಮುನಿವೆಂಕಟಪ್ಪನವರು ಮುಡಿಗೇರಿಸಿಕೊಳ್ಳುತ್ತಾರೆ.
ಕಳೆದ 6 ದಶಕಗಳಿಂದ ತಮ್ಮ ತಮಟೆ ಕಲೆಯನ್ನು ತಮ್ಮ ಬದುಕನ್ನಾಗಿ ಮಾಡಿಕೊಂಡಿದ್ದ ಮುನಿವೆಂಕಟಪ್ಪನವರ ತಮಟೆ ಕಲೆಯ ಪಾಂಡಿತ್ಯವನ್ನು ಭಾರತ ಸರ್ಕಾರ ಗುರುತಿಸಿದ ಪರಿಣಾಮ ಭಾರತ ಅತ್ಯನ್ನತ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ
77 ವರ್ಷದ ಮುನಿವೆಂಕಟಪ್ಪನವರು ಹೇಳುವಂತೆ ನನ್ನೊಂದಿಗೆ ನನ್ನ ಕಲೆ ಕೊನೆಯಾಗಬಾರದು,ಯುವ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕು. ಅದಕ್ಕೆ ಆಸಕ್ತಿ ಇರುವ ಯುವಕರಿಗೆ ತಮಟೆ ವಾದ್ಯ ಬಾರಿಸುವ ಕಲೆಯ ತರಬೇತಿ ನೀಡುವ ಆಸೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದವರು ಪಡೆದಂತ ಪದ್ಮಪ್ರಶಸ್ತಿಗಳು
2023ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ ಇದರಲ್ಲಿ ಕರ್ನಾಟಕಕ್ಕೆ ಒಟ್ಟು 8 ಪದ್ಮಪ್ರಶಸ್ತಿಗಳು ಸಿಕ್ಕಿದೆ ಇದರಲ್ಲಿ 5 ಪದ್ಮ ಶ್ರೀ, 2 ಪದ್ಮ ಭೂಷಣ ಹಾಗೂ 1 ಪದ್ಮ ವಿಭೂಷಣ ಪ್ರಶಸ್ತಿಯ ಗರಿಯಾಗಿದೆ.
ಮಾಜಿ ಮುಖ್ಯಮಂತ್ರಿ ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ – ಪದ್ಮ ವಿಭೂಷಣ,ಖ್ಯಾತಕಥೆಗಾರ ಎಸ್ ಎಲ್ ಭೈರಪ್ಪ – ಪದ್ಮ ಭೂಷಣ,ಖ್ಯಾತ ಉದ್ಯಮಿ ಹಾಗು ಸಮಾಜ ಸೇವಕಿ ಸುಧಾಮೂರ್ತಿ – ಪದ್ಮ ಭೂಷಣ ಪಡೆದಿದ್ದರೆ
ಶಿಡ್ಲಘಟ್ಟದ ಖ್ಯಾತ ತಮಟೆ ವಾದಕ ಮುನಿವೆಂಕಟಪ್ಪ – ಪದ್ಮಶ್ರೀ, ಖಾದರ್ ವಾಲಿ ದುಡೇಕುಲಾ – ಪದ್ಮಶ್ರೀ
ರಾಣಿ ಮಾಚಯ್ಯ – ಪದ್ಮಶ್ರೀ,ರಷೀದ್ ಅಹಮ್ಮದ್ ಖಾದ್ರಿ – ಪದ್ಮಶ್ರೀ,ಸುಬ್ಬರಾಮನ್ – ಪದ್ಮಶ್ರೀ ಪಡೆದವರಾಗಿದ್ದಾರೆ.