ಶ್ರೀನಿವಾಸಪುರ:-ಹೊಸ ಸಂವತ್ಸರ ಯುಗಾದಿಯಂದು ಪ್ರತಿವರ್ಷ ಊರಿನ ದೇವರುಗಳ ಪಲ್ಲಕ್ಕಿ ಉತ್ಸವ ನಡೆಸುವುದು ಇಲ್ಲಿ ವಾಡಿಕೆಯಾಗಿ ನಡೆದುಕೊಂಡು ಬರುತ್ತಿದೆ.ಅದರಂತೆ ಈ ಯುಗಾದಿಯಂದು ರಾತ್ರಿ ಹತ್ತು ಪಲ್ಲಕ್ಕಿಗಳಲ್ಲಿ ಊರಿನ ದೇವರುಗಳ ಮೆರವಣಿಯನ್ನು ವಿಜೃಂಬಣೆಯಿಂದ ನಡೆಸಲಾಯಿತು.ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಾಲಯದ ಬಳಿಯಿಂದ ಶ್ರೀ ಚೌಡೇಶ್ವರಮ್ಮ, ಶ್ರೀ ಪ್ಲೇಗಮ್ಮ-ಗಂಗಮ್ಮ,ಶ್ರೀನಡೀರಮ್ಮ,ಶ್ರೀನಲ್ಲಗಂಗಮ್ಮ,ಶ್ರೀಯಲ್ಲಮ್ಮ,ಶ್ರೀ ವಾಸವಿ ಕನ್ಯಾಕಾಪರಮೇಶ್ವರಿ, ಶ್ರೀ ವರದ ಬಾಲಾಂಜನೇಯ,ಶ್ರೀ ಉಗ್ರ ನರಸಿಂಹ,ಶ್ರೀ ತಿರುಮಲರಾಯ,ಶ್ರೀ ಅಷ್ಟ ಮೂರ್ತಮ್ಮ ದೇವರುಗಳನ್ನು ದೀಪಾಲಂಕೃತ ಪಲ್ಲಕ್ಕಿಗಳಲ್ಲಿ ಸ್ಥಾಪಿಸಿ ರಾತ್ರಿ ಎಂಟೆಗೆ ಪ್ರಾರಂಭಿಸಿ ಈಡಿ ರಾತ್ರಿ ಪಲ್ಲಕ್ಕಿ ಉತ್ಸವಗಳು ಊರಿನ ಪ್ರಮುಖ ರಸ್ತೆಗಳ ಮೂಲಕ ಶ್ರೀ ವರದ ಬಾಲಾಂಜನೇಯ ಕ್ಷೇತ್ರಕ್ಕೆ ಸೇರಿಕೊಂಡಿತು.
ಊರಿನ ದೇವರುಗಳ ಪಲ್ಲಕ್ಕಿ ಉತ್ಸವ ನಡೆಸಿದರೆ ಊರಿಗೆ ಕ್ಷೇಮವಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ ಹಾಗೆ ದೇವರ ಪಲ್ಲಕ್ಕಿ ಮನೆ ಮುಂದೆ ಬಂದಾಗ ಹಣ್ಣು ಕಾಯಿ ನೀಡುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ ಎನ್ನುತ್ತಾರೆ ದೇವರ ಪಲ್ಲಕ್ಕಿ ಉತ್ಸವದ ಆಯೋಜಕರು.