ಕೋಲಾರ:ಜೆಡಿಎಸ್ JD(S) ಮುಖಂಡ ಸಿಎಂಆರ್.ಶ್ರೀನಾಥ್ ಅವರ ನಿವಾಸಕ್ಕೆ ಉಡುಪಿ ಪೇಜಾವರಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಗಳು ಕೋಲಾರ ನಗರದ ಪೇಟೆಚಾಮನಹಳ್ಳಿಯಲ್ಲಿನ ಅವರ ನಿವಾಸಕ್ಕೆ ಭೇಟಿ ನೀಡಿದ್ದರು ಈ ಸಂದರ್ಭದಲ್ಲಿ ಸಿಎಂಆರ್.ಶ್ರೀನಾಥ್ ಕುಟುಂಬದವರು ಶ್ರೀಗಳನ್ನು ಮನೆಯ ದ್ವಾರದಲ್ಲಿ ಸ್ವಾಗತಿಸಿದರು.ನಂತರ ಶ್ರೀಗಳ ಪಾದಪೂಜೆ ನೆರವೇರಿಸಿದರು ಪಾದಪೂಜೆ ಸ್ವೀಕರಿಸಿದ ಶ್ರೀಗಳು ಫಲ ಮಂತ್ರಾಕ್ಷತೆ ಹಾಗು ಆಶೀರ್ವಚನ ನೀಡಿ ಭಕ್ತರನ್ನು ಆಶೀರ್ವದಿಸಿದರು.
ಸನಾತನ ಧರ್ಮದ ವಿರಾಟ್ ಪ್ರದರ್ಶನ ಕುಂಭಮೇಳ
ಸನಾತನ ಧರ್ಮದ ವಿರಾಟ್ ಪ್ರದರ್ಶನ ಕುಂಭಮೇಳದಲ್ಲಿ ಕಾಣಸಿಗುತಿತ್ತು ಇಡೀ ಜಗತ್ತಿನಲ್ಲೇ ಅತ್ಯಂತ ಅದ್ಬುತ ಕಾರ್ಯಕ್ರಮವಾಗಿ ಹೊರಹೊಮ್ಮಿದೆ ಇಷ್ಟೊಂದು ಮಂದಿ ಒಂದು ಕಡೆ ಕಾರ್ಯಕ್ರಮಕ್ಕೆ ಸೇರುವುದು ಮತ್ತೆಲ್ಲೂ ಸಾಧ್ಯವಿಲ್ಲ ಎಂದು ಪೇಜಾವರದ ಶ್ರೀವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು ಧರ್ಮಶ್ರದ್ಧೆ ಎಂತದ್ದು ಎಂಬುದಕ್ಕಿ ಇದು ಸಾಕ್ಷಿಯಾಗಿದೆ ಮತ್ತು ಮೇಳ ಯಶಸ್ವಿಯಾಗಿದೆ,ಕುಂಭಮೇಳಕ್ಕೆ ಬಂದಂತ ಜನಸ್ತೋಮಕ್ಕೆ ಮಾಡಿದ್ದ ವ್ಯವಸ್ಥೆಗಳು ನಿಜಕ್ಕೂ ಅನನ್ಯ ಎಂದ ಅವರು, ಕೋಟ್ಯಾಂತರ ಮಂದಿ ಪಾಲ್ಗೊಳ್ಳುವ ಜಾಗದಲ್ಲಿ ಸಮಸ್ಯೆಗಳಿಗೆ ಅವಕಾಶವಿಲ್ಲದಂತೆ ವ್ಯವಸ್ಥೆ ಮಾಡಿದ್ದು, ಶ್ಲಾಘನೀಯ ಇದು ನಮ್ಮ ಸನಾತನ ಧರ್ಮ ಶಕ್ತಿ ಎಂದ ಶ್ರೀಗಳು ಇದರ ಮೂಲಕ ರಾಜ್ಯ,ದೇಶ,ವಿಶ್ವಕ್ಕೆ ಎದುರಾಗುವ ಎಲ್ಲಾ ಅನಾಹುತಗಳು ದೂರವಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಸಿಎಂಆರ್ಶ್ರೀನಾಥ್, ಸಹೋದರರಾದ ಸಿಎಂಆರ್.ಪದ್ಮನಾಭ್, ಸಿಎಂಆರ್.ಹರೀಶ್,ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲ್ಲೂಕು ಅಧ್ಯಕ್ಷ ಬಾಬು ಮೌನಿ, ಸೇವಾದಳ ಜಿಲ್ಲಾ ಕಾರ್ಯದರ್ಶಿ ಸುಧಾಕರ್, ವೈಶ್ಯ ಸಮುದಾಯದ ಮುಖಂಡ ಗೋವಿಂದರಾಜು,ಬ್ರಾಹ್ಮಣ ಸಮುದಾಯದ ಮುಖಂಡರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
Breaking News
- ಮಾಲೂರಿನ ಬೈರನದೊಡ್ಡಿ ನಗರೇಶ್ವರ ದೇವಾಲಯ ಲೋಕಾರ್ಪಾಣೆ
- ಚಿಂತಾಮಣಿ-ಮದನಪಲ್ಲಿ ರಸ್ತೆ ಖಾಸಗಿ ಬಸ್ ಡಿಕ್ಕಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನ!
- ಅವಿಭಜಿತ ಕೋಲಾರ ಜಿಲ್ಲೆಯ ರೈತರಿಗೆ ನಿರಾಶದಾಯಕ ಬಜೆಟ್ ಎಲ್ಲೆಡೆ ಟೀಕೆ!
- ಮಾವುಬೆಳೆಗಾರರಿಗೆ ಏನೂ ಘೊಷಿಸದ ಸಿದ್ದರಾಮಯ್ಯ sweet 16 ಬಡ್ಜೆಟ್.
- ಶ್ರೀನಿವಾಸಪುರ ಜನರಿಂದ ಸಿದ್ದರಾಮಯ್ಯ ಬಜೆಟ್ ಮೇಲೆ ಭಾರೀ ನೀರಿಕ್ಷೆ!
- ಜೆಡಿಎಸ್ CMR ಶ್ರೀನಾಥ್ ಮನೆಗೆ ಪೇಜಾವರ ಸ್ವಾಮಿಜಿ ಭೇಟಿ!
- ಬುಲೆಟ್ ಬೈಕುಹತ್ತಿ ಪೋಲಿರೈಡ್ ಮಾಡಿದ್ದ LOVER ಬಂಧನ!
- ಕಾಂಗ್ರೆಸ್ ಮಂತ್ರಿ ವಿರುದ್ದ ಅರಣ್ಯ ಭೂಮಿ ಒತ್ತುವರಿ ಆರೋಪ
- ಶ್ರೀನಿವಾಸಪುರ:ವಿಧವೆ ಮನೆಶೆಡ್ ಕಾಂಪೌಂಡ್ ದೌರ್ಜನ್ಯದಿಂದ ಧ್ವಂಸ ಆರೋಪ
- ಶ್ರೀನಿವಾಸಪುರ:ಶಿವರಾತ್ರಿ ಸಂಭ್ರಮ ಅರಕೇರಿ ನಾಗನಾಥೇಶ್ವರನಿಗೆ ರಥೋತ್ಸವ
Wednesday, March 12