ಶ್ರೀನಿವಾಸಪುರ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಅಬ್ಬರಿಸುತ್ತ ಸುರಿಯುತ್ತಿರುವ ಮಳೆಗೆ ತಾಲೂಕಿನ ಜನತೆ ತತ್ತರಿಸಿ ಹೋಗಿದ್ದಾರೆ ವಿಶೇಷವಾಗಿ ರೈತಾಪಿ ಜನರಂತೂ ನಲುಗಿ ಹೋಗಿದ್ದಾರೆ.
ತಾಲೂಕಿನ ಯಲ್ದೂರು ಹೋಬಳಿಯ ಮುತ್ತಕಪಲ್ಲಿ ಲಕ್ಷ್ಮೀಸಾಗರ ಭಾಗದಲ್ಲಿ ಸುರಿದ ಆಲಿಕಲ್ಲು ಮಳೆಗೆ ಮಾವುಬೆಳೆ ನಷ್ಟಕ್ಕೆ ಒಳಗಾಗಿದೆ. ಇತರೆ ಭಾಗದಲ್ಲಿ ಮಾವಿನ ಬೆಳೆಗೆ ಯಾವರಿತಿಯಲ್ಲಿ ಮಳೆಯ ಕಾಟ ಇರುತ್ತದೋ ಏನಾಗುತ್ತದೋ ಎಂಬ ಆತಂಕದಲ್ಲಿ ಮಾವುಬೆಳೆಗಾರರು ಇದ್ದಾರೆ, ಅಲಿಕಲ್ಲು ಸಮೇತ ಬಿರುಗಾಳಿ ಮಳೆಗೆ ಟಮ್ಯಾಟೋ ಸೇರಿದಂತೆ ಪಪ್ಪಾಯ,ಕ್ಯಾಪ್ಸಿಕಂ,ಬೀನ್ಸ್, ಆಲೂಗಡ್ಡೆ ಸೇರಿದಂತೆ ವಿವಿಧ ತೋಟಗಾರಿಗೆ ಬೆಳೆಗಳು ನೂರಾರು ಎಕರೆ ಪ್ರದೇಶದಲ್ಲಿ ಸಂಪೂರ್ಣವಾಗಿ ನಲೆಕಚ್ಚಿದೆ.ಎರಡು ದಿನಗಳಿಂದ ಮಿಂಚು-ಗುಡುಗಿನಿಂದ ಕೂಡಿದ ಮಳೆ ಜನರನ್ನು ಭಯಬಿತರಾಗುವಂತೆ ಮಾಡಿದೆ,ಅಬ್ಬರಿಸುತ್ತಿರುವ ಮಳೆಯ ಆರ್ಭಟದೊಂದಿಗೆ ಬಿರುಬಿರಸಾದ ಗಾಳಿ ಹಾಗು ಆಲಿಕಲ್ಲು ಗೌವನಪಲ್ಲಿ ಲಕ್ಷ್ಮೀಪುರ ಭಾಗದಲ್ಲಿ ಭಾನುವಾರ ಬಿದ್ದಂತ ಬಾರಿಗಾತ್ರದ ಆಲಿಕಲ್ಲಿಗೆ ಜನ ತತ್ತರಿಸಿಹೋಗಿದ್ದಾರೆ.
ಶನಿವಾರ ಮಧ್ಯಾನಃ ಸಖೆಯಿಂದ ನಲುಕಿದ ಜನ ಮದ್ಯರಾತ್ರಿ ಸುರಿದ ಆರ್ಭಟದ ಮಳೆಗೆ ತತ್ತರಿಸಿ ಹೋದರು, ಅಬ್ಬರಿಸುತ್ತ ಬಾರಿಶಬ್ದದ ಗುಡುಗು,ಕಿಟಕಿ ಗಾಜುಗಳನ್ನು ಬೇದಿಸಿ ಬಂದಂತ ಮಿಂಚಿನ ಪ್ರಖರದ ಬೆಳಕಿಗೆ ಜನ ನಡುಗಿಹೋಗಿದ್ದಾರೆ.
ಹಾಲಿ ಶಾಸಕ ಹಾಗು ಮಾಜಿ ಶಾಸಕರು ಮಳೆಗೆ ನಲುಗಿದ ತೋಟಗಳಿಗೆ ಭೇಟಿ.
ಶಾಸಕ ರಮೇಶ್ ಕುಮಾರ್ ತಾಲೂಕು ತೋಟಗಾರಿಕೆ ಅಧಿಕಾರಿ ಶ್ರೀನಿವಾಸನ್ ಜೊತೆಗೂಡಿ ತಾಲೂಕಿನ ಮುತ್ತಕಪಲ್ಲಿ ಮತ್ತು ಲಕ್ಷ್ಮೀಸಾಗರ ಹೋಳೂರು ಭಾಗದ ಗ್ರಾಮಗಳಿಗೆ ಭೇಟಿ ನೀಡಿ ನಷ್ಟಕ್ಕೆ ಒಳಗಾಗಿರುವ ಮಾವು ಟಮ್ಯಾಟೊ ಬೆಳೆಗಳನ್ನು ವಿಕ್ಷಿಸಿದರು.ನಂತರ ಜಿಲ್ಲಾ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ ನಷ್ಟದ ಅಂದಾಜು ಮಾಡಿ ಸರ್ಕಾರಕ್ಕೆ ಕಳಿಸಿ ಪರಿಹಾರ ಕೋಡಿಸುವುದಾಗಿ ಹೇಳಿದರು ಮತ್ತು ಈ ಸಂಬಂದ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುತ್ತಾರೆ.
ಅಲಿಕಲ್ಲಿನಿಂದ ನಷ್ಟಕ್ಕೆ ಒಳಗಾಗಿರುವಂತ ಪ್ರದೇಶಗಳಿಗೆ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಭೇಟಿ ನೀಡಿ ನಷ್ಟಕ್ಕೆ ಒಳಗಾಗಿರುವ ರೈತರೊಂದಿಗೆ ಮಾತನಾಡಿ ಪರಶೀಲನೆ ಮಾಡಿದರು.

