- ಟೋಕನ್ಗಳಿಗಾಗಿ ರಣ ಬಿಸಲಲ್ಲಿ ಒದ್ದಾಡಿದ ಜನತೆ
- ಕನಿಷ್ಠ ವ್ಯವಸ್ಥೆಗಳಿಲ್ಲದ ಟಿಟಿಡಿ ವಿರುದ್ದ ಜನತೆ ಆಕ್ರೋಶ
ಆಂಧ್ರದ ರಣ ಬಿಸಿಲಿಗೆ ತತ್ತರಿಸಿ ಹೋದ ಜನತೆ
ರಣ ಬಿಸಲಿಗೆ ಬಸವಳಿದ ವೃದ್ದರು ಮತ್ತು ಮಕ್ಕಳು
ನ್ಯೂಜ್ ಡೆಸ್ಕ್:ತಿರುಮಲ ಬೆಟ್ಟ ಭಕ್ತರಿಂದ ಗಿಜಿಗುಡುತ್ತಿದೆ. ಸುಮಾರು ಎರಡು ವರ್ಷಗಳ ನಂತರ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ನಲ್ಲಿನ ಕಂಪಾರ್ಟ್ಮೆಂಟ್ಗಳು ಏಕಾಏಕಿ ಭರ್ತಿಯಾಗಿ ಕ್ಯೂಲೈನ್ನಿಂದ ಹೊರಗೂ ಜಂಗುಳಿ ಉಂಟಾಗಿದೆ ತಿರುಮಲದ ಶ್ರೀವಾರಿ ದೇವಸ್ಥಾನದಿಂದ ಅಲಿಪಿರಿಯವರೆಗೂ ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ಟಿಟಿಡಿ ಸೀಮಿತ ಸಂಖ್ಯೆಯ ಟಿಕೆಟ್ಗಳು ಮತ್ತು ಟೋಕನ್ಗಳನ್ನು ನೀಡುತ್ತಿದ್ದು ಮಾರ್ಚ್ 2020 ರಲ್ಲಿ ಲಾಕ್ಡೌನ್ ನಂತರ ಜೂನ್ 8 ರಿಂದ ಲಾಕ್ದೌನ್ ನಿಭಂದನೆಗಳಂತೆ ನಿಯಮಾವಳಿಗಳನ್ನು ರೂಪಿಸಲಾಗಿತ್ತು ಈ ವರ್ಷದ ಫೆಬ್ರವರಿ ಅಂತ್ಯದವರೆಗೆ ಕರೋನಾ ಪ್ರಕರಣಗಳಿಗೆ ಅನುಗುಣವಾಗಿ ದಿನಕ್ಕೆ 30 ರಿಂದ 40 ಸಾವಿರ ಟಿಕೆಟ್ಗಳನ್ನು ಮಾತ್ರ ನೀಡುತಿತ್ತು, ಕೋವಿಡ್ ಇಳಿಮುಖವಾದ ಹಿನ್ನಲೆಯಲ್ಲಿ ಮಾರ್ಚ್ ಮೊದಲ ವಾರದಿಂದ ತನ್ನ ಕ್ರಮೇಣ ದಿನಂ ಪ್ರತಿ 60 ರಿಂದ 70 ಸಾವಿರಕ್ಕೆ ಹೆಚ್ಚಿಸುತ್ತ ಬಂದಿದ್ದು ಸೋಮವಾರ ಮಧ್ಯರಾತ್ರಿಯಿಂದಲೇ ಶ್ರೀನಿವಾಸನನ್ನು ನೋಡಲು ಭಕ್ತರ ದಂಡು ಹರಿದು ಬರುತ್ತಿತ್ತು, ಬೆಳಗ್ಗೆ ಎಂಟು ಗಂಟೆಗೆ ಸರ್ವದರ್ಶನ ಟೋಕನ್ ನೀಡಿ ಒಮ್ಮೆಲೇ ಹೊರ ಕಳಿಸಲಾಯಿತು,ಮಂಗಳವಾರ ಬೆಳಗ್ಗೆ 11ರವರೆಗೆ ತಿರುಮಲ ಬೆಟ್ಟದಲ್ಲಿ ವಾಹನ ಸಂಚಾರ ಸಾಧಾರಣವಾಗಿತ್ತು. ಆದರೆ, ತಿರುಪತಿಯಲ್ಲಿ ಉಚಿತ ದರ್ಶನ ಟೋಕನ್ ಪಡೆಯುವ ಭಕ್ತರ ಸಂಖ್ಯೆ ಏಕಾಏಕಿ ಹೆಚ್ಚಾದ ಕಾರಣ ಟಿಕೆಟ್ ಇಲ್ಲದ ಭಕ್ತರಿಗೂ ತಿರುಮಲ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು ಇದರಿಂದ ಬೆಳಗ್ಗೆ 11.30ರಿಂದ ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಸಾವಿರಗಳಲ್ಲಿ ಏರಿಕೆಯಾಗಿ ಅಲಿಪಿರಿ ಪಾದಚಾರಿ ಮಾರ್ಗವು ಭಕ್ತರಿಂದ ತುಂಬಿ ತುಳುಕುತ್ತಿದೆ. ಟಿಕೆಟ್ ರಹಿತ ಭಕ್ತರಿಗಾಗಿ ಲೇಪಾಕ್ಷಿಯಲ್ಲಿ ಪ್ರವೇಶ ದ್ವಾರವನ್ನು ಸ್ಥಾಪಿಸಿದ್ದರಿಂದ ಅಲ್ಲಿಯೂ ಜನಸಂದಣಿಯಿಂದ ಕೂಡಿತ್ತು. ಜತೆಗೆ ಶ್ರೀವಾರಿ ದೇಗುಲದ ಜಾಗ,ಸೇರಿ ತಿರುಪತಿಯಲ್ಲಿ ಕೊಠಡಿ ಮಂಜೂರು ಮಾಡುವ ಸಿಆರ್ವಿ, ಮದುವೆ ಮಂಟಪಗಳು, ಅನ್ನಪ್ರಸಾದ ಕಟ್ಟಡ ಎಲ್ಲೆಲ್ಲೂ ಜನವೋ ಜನ ಮತ್ತೊಂದೆಡೆ ತಿರುಮಲ ಮೇಲೆ ವಾಹನಗಳು ತುಂಬಿ ತುಳುಕುತ್ತಿವೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಭಕ್ತರು ಬಸ್ ನಿಲ್ದಾಣಗಳಲ್ಲಿ ಗಂಟ ಗಟ್ಟಲೆ ಕಾಯುತ್ತಿರುವುದು ಸಾಮನ್ಯವಾಗಿತ್ತು. ಉಚಿತ ಬಸ್ಗಳು ಸಂಚರಿಸಲು ಪರದಾಡುತ್ತಿದ್ದರು. ತಲೆ ಕೂದಲು ಅರ್ಪಿಸುವ ಕಲ್ಯಾಣ ಕಟ್ಟೆ ಜಾಗದಲ್ಲೂ ಜನವೋ ಜನ ಭಕ್ತರಿಂದ ತುಂಬಿ ತುಳುಕುತ್ತಿರುವುದರಿಂದ ಇಕ್ಕಾಟದ ಜಾಗದಲ್ಲಿ ಕೂತು ಅರ್ಪಿಸಲು ಒಬ್ಬರಿಗೆ ಕನಿಷ್ಠ ಎರಡು ಗಂಟೆ ಸಮಯವಾಗುತ್ತಿದೆ ಮತ್ತೊಂದೆಡೆ ಲಡ್ಡು ಕೌಂಟರ್ ಕೂಡ ಭಕ್ತರಿಂದ ತುಂಬಿ ತುಳುಕಾಡುತ್ತಿದೆ. ದರ್ಶನ ಸಿಗದಿದ್ದಲ್ಲಿ ಪರ್ವಾಗಿಲ್ಲ ದೇವರ ಪ್ರಸದವನ್ನಾದರೂ ಪಡೆದ್ಕೊಳ್ಳೋಣ ಎಂದು ಜನ ಸಾಲುಗಟ್ಟಿ ನಿಂತಿದ್ದರು. ತಿರುಮಲ ಕ್ಷೇತ್ರದಲ್ಲಿ ಎರಡು ವರ್ಷಗಳ ಹಿಂದಿನ ದೃಶ್ಯಗಳು ಮತ್ತೆ ಕಂಡು ಬರುತ್ತಿವೆ. ಶಾಪಿಂಗ್ ಕಾಂಪ್ಲೇಕ್ಸ್ ಪ್ರದೇಶಗಳು ಭಕ್ತರಿಂದ ಗಿಜಿಗುಡುತ್ತಿವೆ. ತಿರುಮಲ ಬೆಟ್ಟದ ತುದಿ ತಲುಪುವ ಮುನ್ನವೇ ಭಕ್ತರಿಗೆ ನಿಂತಲ್ಲಿಯೇ ಭಗವಂತ ವೇಂಕಟೇಶ್ವರನ ದರ್ಶನವಾದ ಅನುಭವ ಪಡೆಯುತ್ತಿದ್ದಾರೆ.
ದರ್ಶನದ ಟೋಕನ್ ಪಡೆಯಲು ಜನರು ರಣ ಬಿಸಿಲಿನಲ್ಲಿ ತತ್ತರಿಸಿ ಹೋದರು ರಣ ರಕ್ಕಸ ಸುಡು ಬಿಸಿಲು.. ಬೆವರಿನಿಂದ ಬೆವತು ಮುದ್ದೆಯಾದ ಜನ ಸುಡು ಬಿಸಿಲಿನ ತಾಪ ತಡೆಯಲಾಗದೆ ಅಳುವ ಪುಟ್ಟ ಮಕ್ಕಳ ಅರಚಾಟ ತಾರಕ್ಕೇರಿತ್ತು ಶಿಶುಗಳ ತಾಯಂದಿರ ಸ್ಥಿತಿ ವರ್ಣನಾತೀತ.ಬಾಯಾರಿಕೆ ಗುಟಕು ನೀರು ಕೊಡಿ’ ಎಂದು ಖಾಲಿ ಬಾಟಲಿಗಳನ್ನು ಹಿಡಿದು ಸರತಿ ಸಾಲಿನಲ್ಲಿ ನಿಂತ ಗಂಡಸರು ಅಂಗಲಾಚುತ್ತಿದ್ದರು ಮಂಗಳವಾರ ಬೆಳಿಗ್ಗೆಯಿಂದಲೇ ತಿರುಪತಿ ಸರತಿ ಸಾಲು ನಿಂತ ಜನಕ್ಕೆ ಬಿಸಲಿಗೆ ಪೆಂಡಾಲು ಹಾಕದ ಟಿಟಿಡಿ ಆಡಳಿತ ಮಂಡಳಿ ವಿರುದ್ದ ಜನತೆ ಆಕ್ರೋಶ ವ್ಯಕ್ತಪಡಿಸಿದರು.