ಚಿಂತಾಮಣಿ:ಚಿಂತಾಮಣಿ ನಗರದಲ್ಲಿ ಮಂಗಳವಾರ ಮಧ್ಯಾನಃ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಆರ್ಭಟದ ಮಳೆಯಿಂದ ಹಳ್ಳ-ಕೊಳ್ಳ ಚರಂಡಿಗಳಲ್ಲಿ ನೀರು ತುಂಬಿ ಹರಿಯುತ್ತಿದ್ದ ದೃಶ್ಯ ಎಲ್ಲಡೆ ಕಂಡು ಬಂತು.ಕುಂಬದ್ರೋಣವಾಗಿ ಸುರಿದ ಮಳೆಗೆ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.ರಸ್ತೆ ಕಾಲುವೆ ವ್ಯತ್ಯಾಸ ಇಲ್ಲದೆ ನೀರು ರಸ್ತೆ ಮೆಲೆ ಹರಿದಿದ್ದರಿಂದ ಒಡಾಡಲು ಜನ ಪರದಾಡಿದ್ದಾರೆ ನಗರದ ಬಹುತೇಕ ರಸ್ತೆಗಳು ಜಲಾವೃತವಾಗಿದ್ದು ರಸ್ತೆ ಮೆಲೆ ಜುಳು ಜುಳು ಎಂದು ನೀರು ಹರಿದು ಬಂದಿದೆ,
ಜಲಾವೃತವಾದ ರೇಷ್ಮೇ ಗೂಡು ಮಾರುಕಟ್ಟೆ
ರಾಮಕುಂಟೆ ರಸ್ತೆಯಲ್ಲಿನ ರೇಷ್ಮೆಗೂಡು ಮಾರುಕಟ್ಟೆ ಸಂಪೂರ್ಣ ಜಲಾವೃತಗೊಂಡು ಗೂಡು ಹರಾಜಿಗೆ ತಂದಿದ್ದ ರೈತರು ತಮ್ಮ ಗೂಡಿನ ಮೂಟೆಗಳನ್ನು ನೀರಿನಿಂದ ಕಾಪಾಡಲು ಹೈರಾಣವಾಗಿ ಕೊನೆಗೆ ತಗಡಿನ ಹರಾಜು ಕಟ್ಟೆ ಏರಿ ಗೂಡುಮೂಟೆಗಳನ್ನು ಹೊತ್ತುಕೊಂಡು ನಿಂತಿದ್ದಾರೆ.
ಬೆಟ್ಟಗಳಿಂದ ಹರಿದು ಬಂದ ನೀರು ಟ್ಯಾಂಕ್ ಬಂಡ್ ರಸ್ತೆ ಮೂಲಕ ರಾಯಲ್ ಸರ್ಕಲ್ ಕಿಶೋರ್ ಸ್ಕೂಲ್ ಮುಂಭಾಗದ ರಸ್ತೆಗಳಲ್ಲಿ ಧಾರಕಾರವಾಗಿ ನದಿ ನಾಲೆಗಳಂತೆ ರಸ್ತೆ ಮೇಲೆ ಹರಿದುಕೊಂಡು ಸುಮಾ ನರ್ಸಿಂಗ್ ಹೋಂ ಪ್ರದೇಶ ಸೇರಿದಂತೆ ಮಳೆ ನೀರು ರಸ್ತೆಗಳನ್ನು ಆವರಿಸಿಕೊಂಡು ಹರಿದ ಪರಿಣಾಮ ಅಂಜನಿ ಬಡಾವಣೆಯ ತಗ್ಗುಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಅಂಜನಿ ಹಾಗು ಅಶ್ವಿನಿ ಬಡಾವಣೆಯ ಕಡೆಯಿಂದ ಹರಿದು ಬಂದ ಮಳೆ ನೀರು ಬೆಂಗಳೂರು ರಸ್ತೆಗೆ ಬಂದಿದೆ.
ಪರದಾಡಿದ ಬಿದಿ ಬದಿ ವ್ಯಾಪರಸ್ಥರು
ಮಳೆ ರಾತ್ರಿಯಲ್ಲ ಮಳೆ ಸುರದಿದೆ ಹಗಲು ಮಳೆ ಬರಲಾರದು ಎಂದು ಬಿದಿ ಬದಿ ಹಣ್ಣು ಹಂಪಲು ಹೂ ಮಾರಾಟ ಮಾಡುವ ವ್ಯಾಪರಸ್ಥರು ನಿರ್ಲಕ್ಷಿಸಿದ ಕಾರಣ ಧಾರಕಾರಗಿ ಸುರಿದ ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ರಸ್ತೆ ಬದಿ ಇಟ್ಟ ವಸ್ತುಗಳು ಚಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ನೀರಿನಲ್ಲಿ ಬಿದಿದ್ದು ವ್ಯಾಪರಸ್ಥರು ಮಳೆಯಲ್ಲೆ ನೆನೆದುಕೊಂಡು ಸಾದ್ಯವಾದ ಮಟ್ಟಿಗೆ ವಸ್ತುಗಳನ್ನು ಎತ್ತಿಟ್ಟುಕೊಂಡಿದ್ದಾರೆ.
ರಾತ್ರಿ ಬಿದ್ದಿದೆ ಬೆಳೆಗ್ಗೆ ಬರಲಾರದು ಎಂದುಕೊಂಡಿದ್ದರು.
ಸೋಮವಾರ ರಾತ್ರಿಪೂರ್ತಿ ಸುರಿದ ಮಳೆ ಮಂಗಳವಾರ ಬೆಳಗ್ಗೆ ಬಿಡವು ಕೊಟ್ಟಂತ ವಾತವರಣ ನಿರ್ಮಾಣವಾಗಿತ್ತಾದರೂ ಮಂಗಳವಾರ ಮಧ್ಯಾನದಃ ಹೊತ್ತಿಗೆ ಸುರಿದ ಚಿತ್ತಾಮಳೆಯ ಆರ್ಭಟಕ್ಕೆ ಜನರು ತತ್ತರಿಸಿದ್ದಾರೆ. ಜನ ನೋಡು ನೋಡುತ್ತಿದ್ದಂತೆ ಕಾಲುವೆಗಳು ತುಂಬಿ ಹರಿದಿದೆ ರಸ್ತೆಗಳು ಜಲಾವೃತವಾಗಿದೆ.
ಇಷ್ಟೆಲ್ಲ ಅನಾಹುತ ಆಗಲು ಬಹಳಷ್ಟು ಕಡೆ ಚರಂಡಿಗಳು ಮುಚ್ಚಿ ಹೋಗಿರುವುದು ಒಂದೆಡೆಯಾದರೆ ತಗ್ಗು ಪ್ರದೇಶಗಳ ಮನೆಗಳ ಬಳಿ ಚರಂಡಿ ವ್ಯವಸ್ಥೆ ಸಕ್ರಮವಾಗಿ ಇಲ್ಲದೆ ಇರುವುದೇ ಅನಾಹುತಕ್ಕೆ ಕಾರಣ ಎನ್ನುತ್ತಿದ್ದಾರೆ.
ಮಳೆಯಾರ್ಭಟಕ್ಕೆ ಶಾರ್ಟ್ ಸರ್ಕಿಟ್ ಸುಟ್ಟ ಮನೆ
ಮಳೆಯಾರ್ಭಟಕ್ಕೆ ಅಶ್ವಿನಿ ಬಡಾವಣೆಯಲ್ಲಿನ ಯಶೋದಮ್ಮ ಎನ್ನುವರ ಮನೆಯಲ್ಲಿ ವಿದ್ಯತ್ ಶಾರ್ಟ್ ಸರ್ಕಿಟ್ ನಿಂದ ಮನೆಯಲ್ಲಿದ್ದ ಬಹುತೇಕ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಮನೆಯಲ್ಲ ಬೆಂಕಿಹೊತ್ತಿಕೊಂಡಿದೆ.