ಶ್ರೀನಿವಾಸಪುರ:ಎಸ್.ಸಿ. ಎಸ್.ಟಿ. ಹಿಂದುಳಿದ ಸಮಾಜಗಳ ಬಡಜನತೆಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ವಿಳಂಬ, ವಂಚನೆ ಮಾಡುವುದು ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಹೊಗಳಗೆರೆ ತೋಟಗಾರಿಕೆ ಫಾರಂನಲ್ಲಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಮಾತನಾಡಿ, ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಎಸ್.ಸಿ.ಎಸ್.ಟಿ, ಹಿಂದುಳಿದ ಅಲ್ಪ ಸಂಖ್ಯಾತರ ಸಮುದಾಯಗಳಿಗೆ ಅನ್ಯಾಯ ಆಗಿದೆ ಅವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಮುಂದೆ ಇಂತಹ ಕೃತ್ಯಗಳಿಗೆ ಅಧಿಕಾರಿಗಳು ಅವಕಾಶ ಕೊಡದೆ ಸರ್ಕಾರದಿಂದ ಬರುವಂತ ಅನುಧಾನಗಳನ್ನು ಪಕ್ಷಾತೀತವಾಗಿ ಅರ್ಹ ಬಡವರಿಗೆ ಹಂಚಿಕೆ ಮಾಡಬೇಕು, ಇದಕ್ಕೆ ನೀವು ಸಹಕರಿಸಬೇಕು, ವಿಳಂಬ ನಿರ್ಲಕ್ಷ್ಯ ಮಾಡುವುದನ್ನು ನಾನು ಸಹಿಸಲಾರೆ ಎಲ್ಲವನ್ನು ಗಮನಿಸುತ್ತೇನೆ ಎಂದ ಅವರು ನನಗೆ ಅಭಿವೃದ್ದಿಯೇ ಮುಖ್ಯ ಜನ ಕಲ್ಯಾಣವೆ ಮೊದಲ ಆದ್ಯತೆ ಎಂದರು.
ಅನೇಕ ವರ್ಷಗಳಿಂದ ಬಡವರು, ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದಾರೆ, ಇತ್ತೀಚೆಗೆ ಸಾವಿರಾರು ಎಕರೆ ಜಮೀನಿನ ದಾಖಲೆಗಳು ಅರಣ್ಯ ಇಲಾಖೆಗೆ ವರ್ಗಾಹಿಸಿರುವುದು ಖಂಡನೀಯವಾಗಿದೆ. ಬಡಜನತೆಯ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಆರ್.ಟಿ.ಸಿ ಯಲ್ಲಿ ಅರಣ್ಯ ಇಲಾಖೆ ನಮೂದನ್ನು ತೆಗೆಯಲು ಪತ್ರ ಬರೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಬಡವರಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳು ಮುಂದಾಗುವಂತೆ ಸೂಚಿಸಿದರು.
ಬಲಾಡ್ಯರು ಕಟ್ಟಿಸಿಕೊಂಡಿರುವ ಮಹಡಿ ಮನೆಗಳು
ಕ್ಷೇತ್ರದಲ್ಲಿ ಹವಾರು ಕುಟುಂಬಗಳು ಇಂದಿಗೂ ಮನೆಯಿಲ್ಲದೆ ನಿರಾಶ್ರಿತರಾಗಿದ್ದಾರೆ ಆದರೆ ಕೆಲ ಬಲಾಡ್ಯರು ಒಂದೆ ಕುಟುಂಬದವರು ಬೆರೆಬೆರೆ ಹೆಸರಿನಲ್ಲಿ 2-3 ಮನೆಗಳನ್ನು ಪಡೆದುಕೊಂಡು ಸರ್ಕಾರಿ ಮನೆಗಳಲ್ಲಿ 2-3 ಅಂತಸ್ತು ಮನೆ ಕಟ್ಟಿಕೊಂಡಿದ್ದಾರೆ ನನ್ನ ಅವಧಿಯಲ್ಲಿ ಇಂತಹ ಅಕ್ರಮಗಳಿಗೆ ಅವಕಾಶ ಇರುವುದಿಲ್ಲ ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೆಚ್ಚರಿಕೆಯಿಂದ ಕೆಲಸ ಮಾಡುವಂತೆ ಹೇಳಿದರು.
ನರೇಗ ಯೋಜನೆಯ ಅನುಷ್ಟಾನದಲ್ಲಿ ನಮ್ಮ ಹೊಲ-ನಮ್ಮರಸ್ತೆ, ಗ್ರಾಮಗಳ ಜನತೆಗೆ ಅನುಕೂಲವಾಗುವಂತೆ ಕಾರ್ಯಕ್ರಮ ರೂಪಿಸಬೇಕು ಸಿಮೆಂಟ್ ರಸ್ತೆಗಳು ಕ್ರಮಬದ್ದವಾಗಿರಬೇಕು ಯಾವುದೇ ಕಾರಣಕ್ಕೂ ಗುತ್ತಿಗೆದಾರರ ಅನಕೂಲಕ್ಕೆ ಕೆಲಸಗಳನ್ನು ಮಾಡಬಾರದು ಎಂದರು.
ರಸ್ತೆಗಳ ಅಭಿವೃದ್ದಿಗೆ ಆದ್ಯತೆ ನೀಡಿ
ತಾಡಿಗೋಳ್ಕ್ರಾಸ್ ನಿಂದ ಗೌನಿಪಲ್ಲಿ ವರಗಿನ ರಸ್ತೆ ಹಾಳಾಗಿದೆ ಇದಕ್ಕೆ ಲೋಕೋಪಯೋಗಿ ಇಲಾಖೆ ಅಭಿಯಂತರರು ಹೊಸದಾಗಿ ಡಾಂಬರ್ರಸ್ತೆ ಹಾಕಲು ಕ್ರಿಯಾಯೋಜನೆ ತಯಾರಿಸಿಕೊಳ್ಳಬೇಕೆಂದರು. ಜೊತೆಗೆ ರಾಯಲಪಾಡು ಮದನಪಲ್ಲಿ ಸಂಪರ್ಕರಸ್ತೆ ಕಾಮಗಾರಿ ನಡೆಯುತ್ತಿದೆ ಇದರಿಂದ ಸಂಚಾರಿ ವ್ಯವಸ್ಥೆಗೆ ಅಡ್ಡಿಯಾಗಿದೆ ಸಂಬಂಧಪಟ್ಟ ಕೆ.ಶಿಫ್. ಗುತ್ತಿಗೆದಾರರು ಇಲಾಖೆ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದರು. ಕೆ.ಸಿ. ವ್ಯಾಲಿ ಯೋಜನೆಯ ಪೈಪ್ ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು ಇದರಿಂದಾಗಿ ರಸ್ತೆಗಳು ಹದೆಗೆಟ್ಟು ಹೋಗಿದೆ ಇದನ್ನು ಈ ತಿಂಗಳ 30ರ ಒಳಗಾಗಿ ಅಧಿಕಾರಿಗಳು ಲೋಕೋಪಯೋಗಿ ಇಂಜಿನಿಯರುಗಳು ರಸ್ತೆ ಕೆಲಸ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಲಾಸ್ಟ್ ಬೆಂಚ್ ಅಧಿಕಾರಿಗಳ ಕಲಾಪಗಳು
ಕೆಲವೊಂದು ಇಲಾಖೆ ಅಧಿಕಾರಿಗಳು ಶಾಸಕರಿಂದ ದೂರದಲ್ಲಿನ ಕೊನೆಯ ಆಸನಗಳಲ್ಲಿ ಲಾಸ್ಟ್ ಬೆಂಚ್ ನಲ್ಲಿ ಕುಳತಿದ್ದಂತಹ ಅಧಿಕಾರಿಗಳು ತಮಗೂ ಸಭೆಗೂ ಸಂಬಂದವೆ ಇಲ್ಲವೇನೋ ಎಂಬಂತೆ ಮೊಬೈಲ್ ಸಂಭಾಷಣೆ ಮೊಬೈಲ್ ನಲ್ಲಿ ಗೇಮ್ ಆಡಿಕೊಂಡು, ಲೋಕಾರೂಡಿ ಮಾತುಗಳಲ್ಲಿ ಕಾಲಕಳೆದರು.
ಸಭೆೆಯಲ್ಲಿ ತಹಸೀಲ್ದಾರ್ ಶಿರೀನ್ ತಾಜ್, ಇ.ಒ. ಕೃಷ್ಣಪ್ಪ, ಗ್ರಾಮಾಂತರ ಸಿ.ಪಿ.ಐ ದಯಾನಂದ್, ಅಬಕಾರಿ ನಿರೀಕ್ಷಕ ರೋಹಿತ್, ಪುರಸಭಾ ಮುಖ್ಯಾಧಿಕಾರಿ ಎನ್. ಸತ್ಯನಾರಾಯಣ್, ಪಿ.ಆರ್.ಡಿ. ಎ.ಇ.ಇ. ನಾರಾಯಣಸ್ವಾಮಿ, ಲೋಕೋಪಯೋಗಿ ಎ.ಇ.ಇ. ನಾರಾಯಣಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಆನಂದ್, ಕೃಷಿ ಇಲಾಖೆ ನಿರ್ದೇಶಕ ಮಂಜುನಾಥ್, ರೇಷ್ಮೆಇಲಾಖೆಯ ನಿರ್ದೇಶಕ ವಿ. ಕೃಷ್ಣಪ್ಪ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ಎಂ. ಶ್ರೀನಿವಾಸನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ, ಮುಖಂಡರಾದ ಶೇಷಾಪುರ ಡಾ.ಗೋಪಾಲ್, ಬಿ.ವಿ. ಶಿವಾರೆಡ್ಡಿ, ಸಿ. ರವಿ, ಯೂನಿಯನ್ ಸಹಕಾರಿ ನಿರ್ದೇಶಕ ಡಿ. ಆರ್. ರಾಮಚಂದ್ರೇಗೌಡ, ತಾ.ಪಂ ಮಾಜಿ ಸದಸ್ಯ ಮಂಜುನಾಥರೆಡ್ಡಿ, ಯಲ್ದೂರು ಮಣಿ, ಉಪ್ಪುಕುಂಟೆ ವೆಂಕಟೇಶ್, ಸೇರಿದಂತೆ ಅನೇಕರು ಭಾಗವಹಿಸಿದ್ದರು.