ಬೆಂಗಳೂರು: ಬಹು ನಿರೀಕ್ಷಿತ ನಮ್ಮ ಮೆಟ್ರೋ ನೆಟ್ವರ್ಕ್ ಅನ್ನು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಾರಿಡಾರ್ ವೈಟ್ಫೀಲ್ಡ್ ವರಿಗೂ ವಿಸ್ತರಿಸಿರುವ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು.
ಪ್ರಧಾನಿ ನರೇಂದ್ರ ಮೋದಿ ವೈಟ್ಫೀಲ್ಡ್- ಕೆಆರ್ ಪುರಂ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡಿದ್ದಾರೆ. ಸುಮಾರು 13.71 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಇದಾಗಿದ್ದು ಇದರಿಂದ ಐಟಿಬಿಟಿ ನೌಕರರಿಗೆ ಹೆಚ್ಚಿನ ಖುಷಿಯಾಗಿದೆ.
ಮೆಟ್ರೋ ಉದ್ಘಾಟನೆ ಬಳಿಕ ನರೇಂದ್ರ ಮೋದಿಯವರು ಅದೇ ಮೆಟ್ರೋದಲ್ಲಿ ಪ್ರಯಾಣಿಸಿದರು. ಮೋದಿ ಜೊತೆ ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ ಸಂಸದ ಪಿ.ಸಿ.ಮೋಹನ್ ಸಹ ಪ್ರಯಾಣಿಸಿದರು.ಪ್ರಯಾಣ ಸಂದರ್ಭದಲ್ಲಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.
ಮೆಟ್ರೋದಲ್ಲಿ ಸಂಚಾರ ನಡೆಸಿದ ಮೋದಿ ಅವರು ಮೆಟ್ರೋ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು. 13.71 ಕಿಲೋ ಮೀಟರ್ ಉದ್ದದ ನೇರಳೆ ಬಣ್ಣದ ಈ ಮಾರ್ಗದಲ್ಲಿ ಒಟ್ಟು 12 ಸ್ಟೇಷನ್ಗಳು ಬರಲಿವೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರಿಂದ ಕೆ.ಆರ್.ಪುರ, ವೈಟ್ ಫೀಲ್ಡ್ ಭಾಗದಲ್ಲಿ ಆಗ್ತಿದ್ದ ಸಂಚಾರ ದಟ್ಟಣೆ ಸ್ವಲ್ಪಮಟ್ಟಿಗೆ ನಿವಾರಣೆಯಾಗಲಿದೆ .
ವೈಟ್ಫೀಲ್ಡ್ನಲ್ಲಿ ಕಾಮಗಾರಿ ಪೂರ್ಣವಾಗಿದೆ. ಆದ್ರೆ ಕೆ.ಆರ್.ಪುರಂ ನಿಲ್ದಾಣ ಇನ್ನೂ ಅಪೂರ್ಣವಾಗಿದ್ದು ಪಿಲ್ಲರ್ಗಳು,ಸೀಮೆಂಟ್ ಕಾರ್ಯ, ಸ್ಟೇಷನ್ಗೆ ಕಂಬಿಗಳನ್ನು ಅಳವಡಿಸುವುದು ಸೇರಿದಂತೆ ಇನ್ನೂ ಕೆಲ ಕಾಮಗಾರಿ ಬಾಕಿ ಇದೆ.ಜೊತೆಗೆ ಕೆ.ಆರ್.ಪುರದಿಂದ ಬೈಯ್ಯಪ್ಪನಹಳ್ಳಿಗೆ ಇನ್ನೂ ಕನೆಕ್ಟಿವಿಟಿ ಕಲ್ಪಿಸಿಲ್ಲ. ವೈಟ್ಫೀಲ್ಡ್, ಚನ್ನಸಂದ್ರ, ಕಾಡುಗೋಡಿ ಟ್ರೀಪಾರ್ಕ್, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಾಸಾಯಿ ಆಸ್ಪತ್ರೆ, ನಲ್ಲೂರಹಳ್ಳಿ, ಕುಂದಹಳ್ಳಿ, ಸೀತಾರಾಮನಪಾಳ್ಯ, ಹೂಡಿ, ಗರುಡಾಚಾರ್ ಪಾಳ್ಯ, ಸಿಂಗಯ್ಯನಪಾಳ್ಯ, ಕೆಆರ್ಪುರದಲ್ಲಿ ಮೆಟ್ರೋ ನಿಲ್ದಾಣಗಳಿವೆ.
ಕೆಆರ್ಪುರ, ವೈಟ್ಫೀಲ್ಡ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಗಳಿಗೆ ಸಂಪರ್ಕಿಸಲು ಮೇಲ್ಸೇತುವೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ಗೆ ವ್ಯವಸ್ಥೆ ಇದ್ದು ಕೆಆರ್ಪುರ ಮತ್ತು ವೈಟ್ಫೀಲ್ಡ್ ನಿಲ್ದಾಣಗಳಲ್ಲಿ ಕಾರು ಮತ್ತು ಬೈಕ್ ಪಾರ್ಕಿಂಗ್ಗೆ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ.
1.ಕೆ.ಆರ್. ಪುರಂ ನಿಲ್ದಾಣವನ್ನು ಕೃಷ್ಣರಾಜಪುರ (ಕೆ.ಆರ್. ಪುರ) ಎಂದು ಬದಲಾಯಿಸಲಾಗಿದೆ. ಕನ್ನಡ ಪರ ಸಂಘಟನೆಗಳ ಮನವಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುತ್ತಾರೆ.2.ಮಹದೇವಪುರವನ್ನು ಸಿಂಗಯ್ಯಪ್ಪನಪಾಳ್ಯ ಎಂದು ಮರುನಾಮಕರಣ ಮಾಡಲಾಗಿದೆ, 3.ಹೂಡಿ ಜಂಕ್ಷನ್ ಅನ್ನು ಹೂಡಿಗೆ ಬದಲಾಯಿಸಲಾಗಿದೆ, 4ಕಾಡುಗೋಡಿಯ ಹೊಸ ಹೆಸರನ್ನು ಕಾಡುಗೋಡಿ ಟ್ರೀ ಪಾರ್ಕ್.5.ಚನ್ನಸಂದ್ರವನ್ನು ಹೋಪ್ ಫಾರಮ್ ಚನ್ನಸಂದ್ರ ಎಂದು ಬದಲಾಯಿಸಲಾಗಿದೆ.6ವೈಟ್ಫೀಲ್ಡ್ ಅನ್ನು ವೈಟ್ಫೀಲ್ಡ್ (ಕಾಡುಗೋಡಿ) ಎಂದು ಮರುನಾಮಕರಣ ಮಾಡಲಾಗಿದ್ದು,
ಪಟ್ಟಂದೂರು ಅಗ್ರಹಾರ, ಸದಾಮಂಗಲ, ನಲ್ಲೂರಹಳ್ಳಿ, ಕುಂದಹಳ್ಳಿ, ಸೀತಾರಾಮಪಾಳ್ಯ, ಗರುಡಾಚಾರ್ಪಾಳ್ಯ ಮತ್ತು ಮಹದೇವಪುರ ಈ ಮಾರ್ಗದ ಇತರ ನಿಲ್ದಾಣಗಳಾಗಿವೆ.
ಒಟ್ಟು 13.7 ಕಿಲೋಮೀಟರ್ ಪರ್ಪಲ್ ಲೈನ್ ವಿಸ್ತರಣೆಯು ವೈಟ್ಫೀಲ್ಡ್-ಬೈಯಪ್ಪನಹಳ್ಳಿ ಕಾರಿಡಾರ್ನ ಮೊದಲ ಹಂತವಾಗಿದೆ. ವೈಟ್ಫೀಲ್ಡ್ ಮತ್ತು ಕೆಆರ್ ಪುರಂ ನಡುವಿನ ಅಂತರವನ್ನು ಮೆಟ್ರೋ 22 ನಿಮಿಷಗಳಲ್ಲಿ ಕ್ರಮಿಸಲಿದೆ.
ಬೆಂಗಳೂರಿನ ಐಟಿ ಕಾರಿಡಾರ್ ಅನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುವ ಮೂಲಕ ವೈಟ್ಫೀಲ್ಡ್ಗೆ ಮೆಟ್ರೋ ಜಾಲವು ನಮ್ಮ ಮೆಟ್ರೋದ ಮಹತ್ವದ ಎಂದು BMRCL ಮ್ಯಾನೇಜಿಂಗ್ ಡೈರೆಕ್ಟರ್ ಅಂಜುಮ್ ಪರ್ವೇಜ್ ಹೇಳುತ್ತಾರೆ ಈ ವಿಸ್ತರಣೆಯ ಮಾರ್ಗದಲ್ಲಿ ಪ್ರತಿದಿನ ಸುಮಾರು 1.2 ಲಕ್ಷ ಪ್ರಯಾಣಿಕರನ್ನು ಪ್ರಯಾಣಿಸುವ ಅಂದಾಜು ಇದ್ದು 10-12 ನಿಮಿಷಗಳ ಅಂತರದಲ್ಲಿ ಸಾಗುತ್ತದೆ ಏಳು ರೈಲುಗಳನ್ನು ಹೊಂದಿರುವ ಮಾರ್ಗದಲ್ಲಿ ಗರಿಷ್ಠ ದರ 35 ರೂ.ಗಳಷ್ಟು ಇರುತ್ತದೆ.
ಇನ್ನೂ ಉಳಿದಿರುವ ಕೆಆರ್ ಪುರಂ-ಬೈಯಪ್ಪನಹಳ್ಳಿ ನಡುವಿನ ಮಾರ್ಗದ ಲೈನ್ ಕಾಮಗಾರಿ ಜುಲೈ 2023 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸಂಪೂರ್ಣ ಕಾರಿಡಾರ್ ತೆರೆಯುವುದರೊಂದಿಗೆ, ನಮ್ಮ ಮೆಟ್ರೋ 35 ಕ್ಕೂ ಹೆಚ್ಚು ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ ಎನ್ನುತ್ತಾರೆ.