- ಪ್ರಧಾನಿಯಾದ ನಂತರ ನಾಲ್ಕನೆ ಬಾರಿಗೆ ತಿರುಮಲಕ್ಕೆ
- ಸಂಪ್ರದಾಯಿಕ ಉಡುಗೆಯಲ್ಲಿ ಶ್ರೀನಿವಾಸನ ದರ್ಶನ
- ತಿರುಮಲದಿಂದ ತೆಲಂಗಾಣ ಚುನಾವಣೆ ಪ್ರಚಾರಕ್ಕೆ
ನ್ಯೂಜ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿಯವರು ತಿರುಮಲ ಶ್ರೀನಿವಾಸನ ದರ್ಶನ ಪಡೆದರು.ಶ್ರೀನಿವಾಸನ ದರ್ಶನಕ್ಕೆ ದೇವಸ್ಥಾನಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಸ್ವಾಗತ ಕೋರಿದರು.
ಮೋದಿಯವರು ಭಾನುವಾರ ಸಂಜೆ ತಿರುಮಲಕ್ಕೆ ಭೇಟಿ ನೀಡಿಡಲು ತಿರುಪತಿಗೆ ಆಗಮಿಸಿದರು ಅವರನ್ನು ಆಂಧ್ರದ ರಾಜ್ಯಪಾಲ ನಜೀರ್ ಅಹ್ಮದ್ ಮತ್ತು ಸಿಎಂ ಜಗನ್ ಸ್ವಾಗತಿಸಿದರು,ಬಳಿಕ ಅವರು ತಿರುಮಲ ತಲುಪಿದರು ಅಲ್ಲಿ ಇವೊ ಧರ್ಮಾರೆಡ್ಡಿ ಸ್ವಾಗತಿಸಿದರು.
ಕಾರ್ತಿಕ ಪೌರ್ಣಮಿ ನಿಮಿತ್ತ ಇಂದು ಬೆಳಗ್ಗೆ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಮೋದಿ ಪಂಚೆ ಮತ್ತು ಶಲ್ಯ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಕೆಲಕಾಲ ಇದ್ದರು ಬಳಿಕ ರಂಗನಾಯಕುಲ ಮಂಟಪದಲ್ಲಿ ಪ್ರಧಾನಿ ಮೋದಿ ಅವರಿಗೆ ಪುರೋಹಿತರಿಂದ ವೇದಾಶೀರ್ವಾದ ಮಾಡಲಾಯಿತು ಈ ಸಂದರ್ಭದಲ್ಲಿ ಟಿಟಿಡಿ ಇಒ ಧರ್ಮಾ ರೆಡ್ಡಿ ಅವರು ಪ್ರಧಾನ ಮಂತ್ರಿಗಳಿಗೆ ಶ್ರೀನಿವಾಸನ ರೇಷ್ಮೆ ವಸ್ತ್ರವನ್ನು ನೀಡಿ ಗೌರವಿಸಿ ಶ್ರೀನಿವಾಸನ ಫೋಟೋ,2024ರ ಟಿಟಿಡಿ ಕ್ಯಾಲೆಂಡರ್ ಮತ್ತು ಡೈರಿಯನ್ನು ಮೋದಿಗೆ ಹಸ್ತಾಂತರಿಸಿದರು.
ಮೋದಿ 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ 2015, 2017 ಮತ್ತು 2019ರಲ್ಲಿ ಸೇರಿದಂತೆ ಒಟ್ಟು ನಾಲ್ಕು ಬಾರಿ ತಿರುಮಲಕ್ಕೆ ಭೇಟಿ ನೀಡಿ ಶ್ರೀನಿವಾಸ ದೇವರ ದರ್ಶನ ಪಡೆದಿರುವುದು. ದರ್ಶನದ ನಂತರ ಇಂದು ಮಧ್ಯಾಹ್ನ ತಿರುಪತಿ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ತೆಲಂಗಾಣಕ್ಕೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ತೆರಳಿದ್ದು ಮೋದಿ ಮಹಬೂಬಾಬಾದ್ ಮತ್ತು ಕರೀಂನಗರದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ನಂತರ, ಸಂಜೆ ಹೈದರಾಬಾದ್ನಲ್ಲಿ ರೋಡ್ಶೋ ನಡೆಯಲಿದ್ದು ಈ ರೋಡ್ ಶೋನಲ್ಲಿ ಪ್ರಧಾನಿ ಜೊತೆಗೆ ಜನಸೇನೆಯ ಪವನ್ ಕಲ್ಯಾಣ್ ಕೂಡ ಭಾಗವಹಿಸುತ್ತಿದ್ದಾರೆ. ಮಹಬೂಬಾಬಾದ್ ಮತ್ತು ಕರೀಂನಗರದಲ್ಲಿ ನಡೆದ ಸಭೆಗಳಲ್ಲಿ ಪ್ರಧಾನಿ ಭಾಷಣದ ಬಗ್ಗೆ ಕುತೂಹಲ ಮೂಡಿದೆ.ಸಂಜೆ ಪ್ರಧಾನಿ ರೋಡ್ ಶೋಗೆ ಬಿಜೆಪಿ ಅದ್ಧೂರಿ ವ್ಯವಸ್ಥೆ ಮಾಡಿಕೊಂಡಿದೆ.