- ಜಿ7 ಶೃಂಗಸಭೆಯಲ್ಲಿ ವಿಶ್ವನಾಯಕರ ಜೊತೆ ಪ್ರಧಾನಿ ಮೋದಿ ಮಾತುಕತೆ
- ಜನ ಸಂದಣಿ ನಿಭಾಯಿಸುವುದರಲ್ಲಿ ಪ್ರಧಾನಿ ಮೋದಿಗೆ ಪ್ರಥಮ ಸ್ಥಾನ ಬೈಡೆನ್
- ನಮೋ ನಾಯಕತ್ವ ಶ್ಲಾಘಿಸಿದ ಆಸ್ಟ್ರೇಲಿಯಾ ಪ್ರಧಾನಿ
ನ್ಯೂಜ್ ಡೆಸ್ಕ್:ಪ್ರಪಂಚದ ರಾಜಕೀಯ ನಾಯಕರಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಪುವಾ ನ್ಯೂಗಿನಿಯಾ ದೇಶದ ಪ್ರಧಾನಿ ಜೇಮ್ಸ್ ಮರಾಪೆ ಅವರು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದು ಅಲ್ಲದೆ ಮೋದಿಯವರ ಕಾಲಿಗೆ ನಮಸ್ಕರಿಸಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.ಇದೊಂದು ಅಪರೂಪದ ಸ್ವಾಗತ ಎಂದು ಜಾಗತಿಕ ಮಟ್ಟದಲ್ಲಿ ಖ್ಯಾತಿಯಾಗಿದೆ.ಪಪುವಾ ನ್ಯೂಗಿನಿಯಾ ದೇಶದ ಪ್ರಧಾನಿ ಜೇಮ್ಸ್ ಮರಾಪೆ ಹಾಗು ಮೋದಿ ಅಪ್ಪುಗೆ ಮೂಲಕ ಪರಸ್ಪರ ಶುಭಾಶಯ ಕೋರಿದರು. ಬಳಿಕ ಪ್ರಧಾನಿ ಮೋದಿಯನ್ನು ಪಪುವಾ ನ್ಯೂಗಿನಿಯಾ ಅಧಿಕಾರಿಗಳಿಗೆ ಪರಿಚಯಿಸಲಾಯಿತು.ಭಾರತೀಯ ಡಯಾಸ್ಪೊರಾ ಸದಸ್ಯರು ಅವರನ್ನು ಬಹಳ ಉತ್ಸಾಹದಿಂದ ಸ್ವಾಗತಿಸಿದರು. ಪ್ರಧಾನಿ ಮೋದಿ ಅವರು ನಗುತ್ತಾ, ಕೈ ಬೀಸುವ ಮೂಲಕ, ಅವರೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು.
ಪಪುವಾ ನ್ಯೂಗಿನಿಯಾದಲ್ಲಿ ತಮಗೆ ಸಿಕ್ಕ ಭವ್ಯ ಸ್ವಾಗತಕ್ಕೆ ಟ್ವೀಟ್ನಲ್ಲಿ ಕೃತಜ್ಞತೆ ಸಲ್ಲಿಸಿರುವ ಪ್ರಧಾನಿ ಮೋದಿ, “ವಿಮಾನ ನಿಲ್ದಾಣಕ್ಕೆ ಬಂದು ನನ್ನನ್ನು ಸ್ವಾಗತಿಸಿದ್ದಕ್ಕಾಗಿ ಪ್ರಧಾನಿ ಜೇಮ್ಸ್ ಮರಾಪೆ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಇದು ನಾನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುವ ವಿಶೇಷವಾದ ಗೆಶ್ಚರ್ ಆಗಿದೆ. ನನ್ನ ಭೇಟಿಯ ಸಮಯದಲ್ಲಿ ಈ ಮಹಾನ್ ರಾಷ್ಟ್ರದೊಂದಿಗೆ ಭಾರತದ ಬಾಂಧವ್ಯವನ್ನು ಹೆಚ್ಚಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
“ಜಪಾನ್ ಯಶಸ್ವಿ ಭೇಟಿಯ ನಂತರ,ಪ್ರಧಾನಿ ಮೋದಿಯವರು ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತಕ್ಕಾಗಿ ಪಪುವಾ ನ್ಯೂಗಿನಿಯಾಕ್ಕೆ ಪ್ರಯಾಣಿಸಿದ್ದಾರೆ. ಪಪುವಾಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿಯವರು ಪಾತ್ರರಾಗಿದ್ದಾರೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ.
ಪುವಾ ನ್ಯೂಗಿನಿಯಾದಲ್ಲಿ, ಸೋಮವಾರ (ಮೇ. 22) ಜಂಟಿಯಾಗಿ ಜೇಮ್ಸ್ ಮರಾಪೆ ಅವರೊಂದಿಗೆ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರದ (ಎಫ್ಐಪಿಐಸಿ) ಫೋರಂನ ಮೂರನೇ ಶೃಂಗಸಭೆಯನ್ನು ಆಯೋಜಿಸಲಿದ್ದಾರೆ. “ಎಲ್ಲಾ 14 ಪೆಸಿಫಿಕ್ ದ್ವೀಪ ರಾಷ್ಟ್ರಗಳು (ಪಿಐಸಿ) ಈ ಮಹತ್ವದ ಶೃಂಗಸಭೆಯಲ್ಲಿ (ಎಫ್ಐಪಿಐಸಿ) ಭಾಗವಹಿಸಲು ಆಹ್ವಾನವನ್ನು ಸ್ವೀಕರಿಸಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ” ಎಂದು ಮೋದಿ ಈ ಹಿಂದೆ ಹೇಳಿದ್ದರು.
ಪಪುವಾ ನ್ಯೂಗಿನಿಯಾದಲ್ಲಿ “ದಿ ತಿರುಕ್ಕುರಲ್” ಅನುವಾದವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. “ದಿ ತಿರುಕ್ಕುರಲ್” ಎಂಬುದು ತಮಿಳಿನ ಗೌರವಾನ್ವಿತ ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಅವರಿಂದ ಸಂಯೋಜಿಸಲ್ಪಟ್ಟ ಪ್ರಸಿದ್ಧ ತಮಿಳು ಪಠ್ಯವಾಗಿದೆ. ಪಪುವಾ ನ್ಯೂಗಿನಿಯಾದ ಅಧಿಕೃತ ಭಾಷೆಗಳಲ್ಲಿ ಒಂದಾದ ಟೋಕ್ ಪಿಸಿನ್ ಈ ಬಿಡುಗಡೆ ಸಮಾರಂಭಕ್ಕೆ ಮಾಧ್ಯಮವಾಗಿದೆ.ಪೆಸಿಫಿಕ್ ನಾಯಕರೊಂದಿಗೆ ಮಾತುಕತೆಗಾಗಿ ಪ್ರಧಾನಿ ನರೇಂದ್ರ ಮೋದಿ ಅಸ್ಟ್ರೇಲಿಯಾ ಬಳಿಯ ದ್ವೀಪ ರಾಷ್ಟ್ರ ಪಪುವಾ ನ್ಯೂಗಿನಿಯಾಗೆ ತೆರಳಿದ್ದು, ಭಾರತವು ಬೆಳೆಯುತ್ತಿರುವ ಚೀನಾದ ಪ್ರಾದೇಶಿಕ ಪ್ರಭಾವವನ್ನು ತಗ್ಗಿಸಲು ಯತ್ನದಲ್ಲಿ ದ್ವೀಪ ರಾಷ್ಟ್ರಕ್ಕೆ ಭಾರತದ ಪ್ರಧಾನ ಮಂತ್ರಿಯ ಮೊದಲ ಭೇಟಿಯಾಗಿದೆ.
ಮೋದಿ ಆಟೋಗ್ರಾಫ್ ಕೇಳಿದ ಅಮೆರಿಕ ಅಧ್ಯಕ್ಷ ಬೈಡೆನ್
ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರವಾಸದಲ್ಲಿದ್ದಾರೆ. ಈ ವೇಳೆ ಬೇರೆ ಬೇರೆ ವಿಶ್ವನಾಯಕರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಸಭೆಯೊಂದರಲ್ಲಿ ಮೋದಿ ಬಳಿ ಬಂದ ಅಧ್ಯಕ್ಷ ಜೋ ಬೈಡೆನ್ ಅವರು, ‘ನಿಮ್ಮ ಆಟೋಗ್ರಾಫ್ ತೆಗೆದುಕೊಳ್ಳಬೇಕು’ ಎಂದಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಕೂಡಾ ಮೋದಿಯವರನ್ನು ಶ್ಲಾಘಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ 6 ದಿನಗಳ ವಿದೇಶಿ ಪ್ರವಾಸ ಮೇ 19, ಶುಕ್ರವಾರದಿಂದ ಪ್ರಾರಂಭವಾಗಿದೆ. ಪ್ರವಾಸದ ಮೊದಲ ಭಾಗವಾಗಿ, ಹಿರೋಶಿಮಾದಲ್ಲಿದ್ದಾರೆ.
ಭಾರತದ ಬಗ್ಗೆ ಪಪುವಾ ನ್ಯೂಗಿನಿಯಲ್ಲಿ ಧನ್ಯತಾ ಭಾವ
ಕೋವಿಡ್ ಸಂದರ್ಭದಲ್ಲಿ ಪಪುವಾ ನ್ಯೂಗಿನಿಯಾ ದೇಶ ತೀವ್ರ ಸಂಕಷ್ಟದಲ್ಲಿತ್ತು ಅಂದು ಆ ದೇಶವನ್ನು ಯಾರು ಕೈ ಹಿಡಿಯಲಿಲ್ಲ ಅಂದು ಭಾರತ 1.5 ಲಕ್ಷ ಡೊಸ್ ಕೋವಿಡ್ ಲಸಿಕೆ ನೀಡಿದ ಪರಿಣಾಮ ಭಾರತದ ಬಗ್ಗೆ ಪಪುವಾ ಜನರಿಗೆ ಧನ್ಯತಾ ಭಾವ ಇದೆ.