- ರಾಜ್ಯ ಸರ್ಕಾರದ ಯೋಜನೆಗಳಿಂದ
- ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರು
- ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು
ಶ್ರೀನಿವಾಸಪುರ :ರಾಜ್ಯ ಸರ್ಕಾರ ಮಹಿಳೆಯರಿಗೆ ಜಾರಿಗೆ ತಂದಿರುವ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಉಚಿತ ಪ್ರಯಾಣದ ಪರಿಣಾಮ ಆಟೋ ಚಾಲಕರು ಬಾಡಿಗೆ ಸಿಗದೆ ಸಂಕಷ್ಟಕ್ಕೆ ಸಿಲುಕಿ ನರಳುವಂತಾಗಿದೆ ಲಕ್ಷಾಂತರ ಆಟೋಚಾಲಕರ ಕುಟುಂಬಗಳು ಬಿದಿಗೆ ಬರುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಟೋ ಚಾಲಕರ ಸಂಘದ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್ಕುಮಾರ್ ಆರೋಪಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂದೆ ತಾಲೂಕು ಆಟೋ ಚಾಲಕರ ಸಂಘದವತಿಯಿಂದ ಹಲವು ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಸರ್ಕಾರಕ್ಕೆ ಬಡವರ ಹಾಗು ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ ರಾಜ್ಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡಿಸೇಲ್.ಎಲ್.ಪಿ.ಜಿ ಉತ್ಪನ್ನಗಳ ಬೆಲೆ ಏರಿಕೆ ಮಾಡಿರುವುದರಿಂದ ಆಟೋ ಚಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಅದರೊಂದಿಗೆ ಕಾರ್ಮಿಕರು ಸಾಮನ್ಯ ಜನತೆ ಉಪಯೋಗಿಸುವ ದಿನನಿತ್ಯ ಪಧಾರ್ಥಗಳಾದ ಹಾಲು, ತರಕಾರಿ ಗಗನಕ್ಕೆ ಏರಿಕೆಯಾಗಿರುವುದು ಕಾರ್ಮಿಕರ ಕುಟುಂಬದ ನಿತ್ಯ ಬದುಕಿನ ನಿರ್ವಹಣೆಗೆ ಕಷ್ಟಕರವಾಗಿದೆ ಎಂದ ಅವರು ಆಟೋ ಪ್ರಯಾಣದ ಧರವನ್ನು ಏರಿಸುವಂತೆ ಆಗ್ರಹಿಸಿದರು.
ಆಟೋ ಚಾಲಕರ ಸಂಘದ ತಾಲೂಕು ಅಧ್ಯಕ್ಷ ಎ.ಎನ್.ಜಗದೀಶ್ ಮಾತನಾಡಿ ಸಾಮಾನ್ಯರು ಸೇವಿಸುವ ಹಾಲು ಸೇರಿದಂತೆ ಬಡವರು ಬಳಸುವ ಅಹಾರ ಪದಾರ್ಥಗಳ ಬೆಲೆ ಏರಿಕೆಮಾಡಿ ಸರ್ಕಾರ ವಿಶ್ವಾಸ ದ್ರೋಹ ಮಾಡಿದೆ ಎಂದ ಅವರು,ಆಸಂಘಟಿತ ಕಾರ್ಮಿಕರನ್ನು ಗುರುತಿಸಿ ಅನಕೂಲಕರವಾದ ಯೋಜನೆಗಳನ್ನು ರೂಪಿಸಿ ಸ್ವಾವಲಂಭನೆಯ ಬದಕು ಕಟ್ಟಿಕೊಳ್ಳಲು ಆರ್ಥಿಕ ಸಹಾಯವನ್ನು ಮಾಡಬೇಕಾಗಿದೆ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಸಹಾಯಧನ ಒದಗಿಸಬೇಕು, ಸಹಾಯಧನ ಕೊಟ್ಟು ಬ್ಯಾಂಕುಗಳ ಮೂಲಕ ಚಾಲಕರಿಗೆ ಹೊಸ ರಿಕ್ಷಾ ವಾಹನಗಳನ್ನು ಖರಿಧಿಸಲು ಸಹಕಾರ ನೀಡುವಂತೆ ಒತ್ತಾಯಿಸಿದ ಅವರು ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಬೆಲೆಯನ್ನು ಖಡಿತಗೊಳಿಸಿ ಹಿಂದಿನ ಸರ್ಕಾರದಲ್ಲಿ ಕೊಡುತ್ತಿದ್ದ ರೀತಿಯ ಯೋಜನೆಗಳು ಮತ್ತು ಸೌಲಭ್ಯಗಳನ್ನು ಮುಂದುವರಿಸುವಂತೆ ಅಗ್ರಹಿಸಿದರು.ಸರ್ಕಾರಕ್ಕೆ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಪ್ರದಾನ ಕಾರ್ಯದರ್ಶಿ ಎಂ. ವೆಂಕಟೇಶ್, ಕಾರ್ಯದರ್ಶಿ ರಿಜ್ವಾನ್, ಸದಸ್ಯರಾದ ವೇಣುಗೋಪಾಲ್, ಸುರೇಶ್, ನಾರೆಪ್ಪ, ಗಣೇಶ್ ಮುಂತಾದವರು ಇದ್ದರು.