ಶ್ರೀನಿವಾಸಪುರ:ವರ್ಗಾವಣೆ ಆಗಿರುವ ಮುಖ್ಯ ಶಿಕ್ಷಕನ ವರ್ಗಾವಣೆ ರದ್ದು ಮಾಡಿ ಅವರನ್ನು ಇದೆ ಶಾಲೆಯಲ್ಲಿಯೇ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮತ್ತು ಪೊಷಕರು ಪ್ರತಿಭಟನೆ ನಡೆಸಿದ ಘಟನೆ ಶ್ರೀನಿವಾಸಪುರ ಪಟ್ಟಣದ ತ್ಯಾಗರಾಜ ಬಡಾವಣೆಯಲ್ಲಿರುವ ಉನ್ನತಿಕೃತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ನಡೆಯಿತು.
ಮುಖ್ಯ ಶಿಕ್ಷಕ ಭೈರೇಗೌಡ ಇದೆ ಶಾಲೆಯಲ್ಲಿ ಮುಂದುವರಿಯಬೇಕು ಎಂದು ಸುಮಾರು 400 ಕ್ಕೂ ಹೆಚ್ಚು ಮಕ್ಕಳು ಹಾಗೂ ನೂರಾರು ಪೋಷಕರು ಶಾಲೆಯ ಕೊಠಡಿಗೆ ತೆರಳದೆ ಆವರಣದಲ್ಲೇ ಪ್ರತಿಭಟನೆ ನಡೆಸಿ ಅವರನ್ನು ಇಲ್ಲಿ ಮುಂದುವರೆಸಿದಿದ್ದರೆ ನಮಗೆ ವರ್ಗಾವಣೆ ಪತ್ರ(ಟಿಸಿ) ಕೊಡಿ ಎಂದು ಅಗ್ರಹಿಸಿದರು.
ಸರ್ಕಾರಿ ಶಾಲೆಯನ್ನು ಹೀಗೂ ಅಭಿವೃದ್ಧಿ ಮಾಡಬಹುದು ಎಂದು ಮಾಡಿ ತೋರಿಸಿದ ಮುಖ್ಯ ಶಿಕ್ಷಕ ಭೈರೇಗೌಡ ಸ್ವಯಂ ಪ್ರೇರಿತರಾಗಿ ವರ್ಗಾವಣೆ ಮಾಡಿಕೊಂಡಿರಬಹುದು,ಅದು ಅವರು ಇತ್ತಿಚಿಗೆ ಮಾನಸಿಕವಾಗಿ ಒತ್ತಡ ಹೇರಿ ಸನ್ನಿವೇಶ ಸೃಷ್ಠಿಮಾಡಿರುವುದು ಖಂಡನೀಯ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಮುಖ್ಯ ಶಿಕ್ಷರ ವರ್ಗಾವಣೆ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಅವರನ್ನು ಇಲ್ಲೆ ಮುಂದುವರೆಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ತಗೆದುಕೊಳ್ಳಬೇಕು ಎಂದು ಶಾಲೆ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಒತ್ತಾಯಿಸಿದರು.
ಶಾಲಾಭಿವೃದ್ಧಿ ಸಮಿತಿ ಹಾಲಿ ಅಧ್ಯಕ್ಷ ಆನಂದರೆಡ್ಡಿ ಮಾತನಾಡಿ ಮುಖ್ಯ ಶಿಕ್ಷಕ ಭೈರೇಗೌಡ ಯಾವುದೇ ತಪ್ಪು ಮಾಡಿಲ್ಲ ಅವರನ್ನು ಇಲ್ಲೆ ಮುಂದುವರಿಸಬೇಕು ನಮಗೆ ನಮ್ಮ ಮಕ್ಕಳ ಭವಿಷ್ಯತ್ ಮುಖ್ಯ ಎಂದು ಹೇಳಿದರು.
ಯಾವುದೆ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಇಲ್ಲಿನ ಶಿಕ್ಷಕರು ಸಮಾನ ಮನಸ್ಕರ ತಂಡಾಚರಣೆಯೊಂದಿಗೆ ಮಕ್ಕಳಿಗೆ ಶಿಕ್ಷಣ ಭೋದಿಸುತ್ತಿದ್ದಾರೆ ಅವರ ಮೇಲೆ ಇಲ್ಲ ಸಲ್ಲದ ಆರೋಪ ಹೊರೆಸಿ ಶಾಲೆ ಪ್ರಾರಂಭವಾಗಿ ಎರಡು ತಿಂಗಳ ನಂತರ ಈಗ ಅವರೆ ವರ್ಗಾವಣೆ ಮಾಡಿಕೊಳ್ಳುವಂತ ಪರಿಸ್ಥಿತಿ ಸೃಷ್ಟಿಸಿದ್ದಾರೆ ಎಂದು ಸಮಾಜಿಕ ಹೋರಾಟಗಾರ ಗೊಲ್ಲಪಲ್ಲಿಪ್ರಸನ್ನ ದೂರಿದರು.
ಶಿಕ್ಷಣಾಧಿಕಾರಿಗೆ ಘೇರಾವ್
ಸರ್ಕಾರಿ ಶಾಲೆಯನ್ನು ಮಾದರಿಯಾಗಿ ಅಭಿವೃದ್ಧಿ ಮಾಡಿದ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡಿಕೊಳ್ಳುವಂತ ಸನ್ನಿವೇಶ ಸೃಷ್ಟಿಸಿದವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರೊತ್ಸಾಹ ನೀಡುತ್ತಿದ್ದಾರೆ ಎಂದು ಆರೋಪಿಸಿ ಶಿಕ್ಷಣಾಧಿಕಾರಿಗೆ ಪೋಷಕರು ಘೇರಾವ್ ಹಾಕಿದರು.
ತಹಶೀಲ್ದಾರ್ ಭೇಟಿ
ಶಾಲ ಮುಖ್ಯ ಶಿಕ್ಷಕ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ತಹಶೀಲ್ದಾರ್ ಸುಧೀಂದ್ರ ಹಾಗು ತಾಲೂಕು ಪಂಚಾಯಿತಿ ಇವೊ ರವಿ ಶಾಲೆಗೆ ಅಗಮಿಸಿ ನಡೆದ ವಿದ್ಯಮಾನ್ಯಗಳ ಕುರಿತಂತೆ ಪೊಷಕರು ಮತ್ತು ಮುಖ್ಯಶಿಕ್ಷಕ ಭೈರೇಗೌಡ ಅವರುಗಳೊಂದಿಗೆ ಚರ್ಚೆ ನಡೆಸಿದ ಅವರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಹೇಳಿದರು.
ಏನಿದು ಆರೋಪ
ಅತಿಥಿ ಶಿಕ್ಷಕಿಯೊಬ್ಬರ ಸಂಬಳದ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಮುಖ್ಯ ಶಿಕ್ಷಕ ಭೈರೇಗೌಡರ ಮೇಲೆ ಆರೋಪ ಮಾಡಲಾಗಿದ್ದು ಅದಕ್ಕೆ ಈಗಾಗಲೆ ಶಿಕ್ಷಕ ಭೈರೇಗೌಡ ಸೇರಿದಂತೆ ಶಾಲೆಯ ಶಿಕ್ಷಕರು ಸಾರ್ವಜನಿಕವಾಗಿ ವಿವರಣೆ ಕೊಟ್ಟಿರುತ್ತಾರೆ ಆದರೂ ಶಾಲೆಯ ವಿಷಯ ಹೊರಗೆ ತಾಲೂಕು ಶಿಕ್ಷಕರ ಸಂಘದಲ್ಲಿ ದೊಡ್ದ ಸದ್ದು ಮಾಡಿದ್ದ ಪರಿಣಾಮ ಶಿಕ್ಷಕರ ಸಂಘದ ಎರಡು ಬಣಗಳ ನಡುವೆ ವಿವಾದವಾಗಿ ಮಾರ್ಪಟ್ಟು ಹಾದಿ ಬಿದಿಗಳಲ್ಲಿ ಚರ್ಚೆಯಾಗುತ್ತಿದ್ದ ಹಿನ್ನಲೆಯಲ್ಲಿ ಶಿಕ್ಷಕ ಭೈರೇಗೌಡ ತಮ್ಮ ವಿರುದ್ದ ಷಡ್ಯಂತರ ನಡೆಯುತ್ತಿದೆ ಎಂದು ವೈಯುಕ್ತಿಕ ದ್ವೇಶಕ್ಕೆ ದಾರಿಯಾಗುವುದು ಬೇಡ ಎಂದು ಎಲ್ಲಾ ವಿವಾದಗಳಿಂದ ದೂರ ಇರಬೇಕೆಂದು ಬಯಸಿ ಭೈರೇಗೌಡ ತಾವೇ ಆಂಧ್ರದ ಗಡಿಯಂಚಿನಲ್ಲಿರುವ ತಾಲೂಕಿನ ಕೊನೆಯ ಗ್ರಾಮವಾದ ಮುದಿಮಡಗು ಪ್ರೌಢಶಾಲೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾಗಿ ಹೇಳಲಾಗಿದೆ.