ಶ್ರೀನಿವಾಸಪುರ:ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಸಂಜೆ ಮುಬ್ಬುಗತ್ತಲಿನಲ್ಲಿ ಪುಂಡರು ನಡೆಸುತ್ತಿರುವ ಬೈಕ್ ವೀಲಿಂಗ್ ನಿಂದಾಗಿ ಚಿಂತಾಮಣಿ ರಸ್ತೆ ಮೂಲಕ ಗ್ರಾಮಗಳಿಗೆ ಹೋಗುವಂತ ದ್ವಿಚಕ್ರವಾಹನ ಸವಾರರೂ ಭಯಬೀತರಾಗಿದ್ದಾರೆ ಸಂಜೆ ಮಬ್ಬು ಗತ್ತಲಲ್ಲಿ ಕರ್ಕಶ ಶಬ್ದದೊಂದಿಗೆ ಐದಾರು ದ್ವಿಚಕ್ರವಾಹನಗಳೊಂದಿಗೆ ಬರುವಂತ ಪುಂಡರು ಕೇಕೆ ಹಾಕುತ್ತ ನಡು ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡುತ್ತ ರಸ್ತೆ ಸವಾರರಿಗೆ ಪ್ರಾಣ ಭಿತಿ ಉಂಟುಮಾಡುತ್ತಿದ್ದಾರೆ.ಶ್ರೀನಿವಾಸಪುರದ ಕಡೆಯಿಂದ ಚಿಂತಾಮಣಿ ರಸ್ತೆಯಲ್ಲಿ ಹೆದ್ದಾರಿ 234 ರಲ್ಲಿ ವೀಲಿಂಗ್ ಮಾಡುತ್ತಾರೆ ಅದಲ್ಲದೆ ನಂಬಿಹಳ್ಳಿ ರಸ್ತೆ ಹಾಗೆ ಕೋಲಾರ ರಸ್ತೆ ಯಿಂದ ಚಿಂತಾಮಣಿ ರಸ್ತೆಗೆ ಬರುವಂತ ಹೊರವಲಯದ ರಿಂಗ್ ರಸ್ತೆಯಲ್ಲೂ ಪುಂಡರು ಅಬ್ಬರಿಸುತ್ತ ವೀಲಿಂಗ್ ಸಂಜೆ ಹೊತ್ತಲ್ಲಿ ನಡೆಯುತ್ತಿರುತ್ತದೆ ಈ ಬಗ್ಗೆ ಶ್ರೀನಿವಾಸಪುರ ಪೋಲಿಸರಿಗೆ ಮಾಹಿತಿ ಇದ್ದರು ಅವರು ಪುಂಡರ ವಿರುದ್ದ ಕ್ರಮ ಜರುಗುಸುತ್ತಿಲ್ಲ ಎನ್ನುತ್ತಾರೆ ರಸ್ತೆಯಲ್ಲಿ ಒಡಾಡುವಂತ ದ್ವಿಚಕ್ರವಾಹನ ಸವಾರರು,ವೀಲಿಂಗ್ ಮಾಡುವಂತ ಪುಂಡರ ದ್ವಿಚಕ್ರವಾಹನ ಸವಾರನ ನಿಯಂತ್ರಣ ತಪ್ಪಿ ದಾರಿಯಲ್ಲಿ ಸಾಗುವಂತ ದ್ವಿಚಕ್ರವಾಹನ ಸಾವರರ ಮೇಲೆ ಬಿದ್ದು ಅಥಾವ ಡಿಕ್ಕಿ ಹೊಡೆದು ಆಗುವಂತ ಅನಾಹುತಕ್ಕೆ ಹೋಣೆಯಾರಾಗುತ್ತಾರೆ ಎಂದು ರಸ್ತೆಯಲ್ಲಿ ಒಡಾಡುವಂತ ಗ್ರಾಮಸ್ಥರುಗಳ ವಾದ.
