ಸಿನಿಮಾ ಡೆಸ್ಕ್:ಅಲ್ಲು ಅರ್ಜುನ್ ವಿಲಕ್ಷಣ ಅಭಿನಯ ವಿಚಿತ್ರ ವೇಷ ಭೂಷಣದ ಪುಷ್ಪಾ-2 ಸಿನಿಮಾ ದಕ್ಷಿಣ ಭಾರತದಲ್ಲಿಯೇ ಅಲ್ಲ ಉತ್ತರ ಭಾರತದ ಬಾಲಿವುಡ್ ನಲ್ಲೂ ಬರ್ಜರಿಯಾಗಿ ಆರ್ಭಟಿಸಿದೆ 3 ದಿನಗಳಲ್ಲಿ ₹205 ಕೋಟಿ ಕಲೆಕ್ಷನ್ ಬಾಚಿಕೊಂಡಿದೆ. ಅಲ್ಲಿನ ಸಿನಿಮಾ ಪಂಡಿತರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಾಲಿವುಡ್ ಹಳೆಯ ಎಲ್ಲಾ ಲೆಕ್ಕಾಚಾರಗಳನ್ನು ಹಿಂದಿಕ್ಕಿರುವ ಸಿನಿಮಾ ಎಂದು ಟ್ರೇಡ್ ಮೂಲಗಳು ಬಹಿರಂಗಪಡಿಸಿವೆ. ಜವಾನ್ (₹ 180 ಕೋಟಿ), ಅನಿಮಲ್ (₹ 176 ಕೋಟಿ) ಮತ್ತು ಪಠಾಣ್ (₹ 161 ಕೋಟಿ) ಚಿತ್ರಗಳನ್ನು ಹಿಂದಕ್ಕಿರುವ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ತನ್ನ ಮೊದಲ 3 ದಿನದ ಕಲೆಕ್ಷನ್ ಗಳಲ್ಲಿ ₹ 70 ಕೋಟಿ ಗಡಿ ದಾಟಿದ ಮೊದಲ ಹಿಂದಿ ಚಿತ್ರವಾಗಿದೆ ಗುರುವಾರ ₹ 72 ಕೋಟಿ, ಶುಕ್ರವಾರ ₹ 59 ಕೋಟಿ ಮತ್ತು ಶನಿವಾರ ₹ 74 ಕೋಟಿ ಕಲೆಕ್ಷನ್ ಮಾಡಿದ್ದು ಭಾನುವಾರದ ಕಲೆಕ್ಷನ್ ಲೆಕ್ಕ ಬಿಡುಗಡೆಯಾಗಬೇಕಿದೆ.