ಹೈದರಾಬಾದ್ ಸಂಧ್ಯಾ ಥಿಯೇಟರ್ ನಲ್ಲಿ ಏರ್ಪಡಿಸಿದ್ದ ಪುಷ್ಪ 2 ಸಿನಿಮಾ ಬೆನಿಫಿಟ್ ಶೊನಲ್ಲಿ ಜನ ಸಂದಣಿ ಹೆಚ್ಚಾಗಿ ನಡೆದಂತ ತಳ್ಳಾಟದದಲ್ಲಿ ಒರ್ವ ಮಹಿಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತ ಪಟ್ಟಿದ್ದು ಇದಕ್ಕೆ ಸಂಬಂದಿಸಿದಂತೆ ಪೊಲೀಸರು ಥಿಯೇಟರ್ ಮಾಲೀಕ ಸೇರಿದಂತೆ ಮೂವರನ್ನು ಈಗಾಗಲೆ ಬಂಧಿಸಿದ್ದಾರೆ ಅದೆ ವಿಚಾರದಲ್ಲಿ ಈಗ ಅಲ್ಲು ಅರ್ಜುನನ್ನು ಬಂಧಿಸಲಾಗಿದೆ ಅವರಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಸಿನಿ ಡೆಸ್ಕ್:ತೆಲಗು ಚಿತ್ರರಂಗದ ಪ್ರಖ್ಯಾತ ಸಿನಿಮಾ ನಟ ಐಕಾನ್ ಸ್ಟಾರ್ ಅಲ್ಲು ಅರ್ಜುನ್@ಬನ್ನಿ ಅವರನ್ನು ತೆಲಂಗಾಣದ ಚಿಕ್ಕಡಪಲ್ಲಿ ಪೋಲಿಸರು ಬಂಧಿಸಿದ್ದಾರೆ. ಈ ತಿಂಗಳ 4 ರಂದು ಪುಷ್ಪ 2 ಸಿನಿಮಾ ಬೆನಿಫಿಟ್ ಶೊ ಕಾರ್ಯಕ್ರಮ ಹೈದರಾಬಾದನ್ ಸಂಧ್ಯಾ ಥಿಯೇಟರ್ ನಲ್ಲಿ ಆಯೋಜಿಸಿದ್ದು ಅಲ್ಲಿ ನಡೆದ ತಳ್ಳಾಟ ನೂಕಾಟದಲ್ಲಿ ಒರ್ವ ಮಹಿಳೆ ಮೃತ ಪಟ್ಟ ಘಟನೆಗೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರ ಮೇಲೆ ಕೊಲೆಗೆ ಸಮಾನವಲ್ಲದ ನರಹತ್ಯೆ ಹಾಗೂ ಸ್ವಯಂಪ್ರೇರಣೆಯಿಂದ ಇನ್ನೊಬ್ಬರಿಗೆ ಹಾನಿ ಉಂಟುಮಾಡಿದ ಆರೋಪವನ್ನು ಅಲ್ಲು ಅರ್ಜುನ್ ವಿರುದ್ಧ ಹೊರಿಸಲಾಗಿದ್ದು ಮೃತ ಪಟ್ಟ ಮಹಿಳೆಯ ಪತಿ ಸಲ್ಲಿಸಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ನವೆಂಬರ್ 13 ರಂದು ಶುಕ್ರವಾರ ಬೆಳಿಗ್ಗೆ ಅಲ್ಲು ಅರ್ಜುನ್ ಅವರನ್ನು ಜುಬಿಲೀ ಹಿಲ್ಸ್ ಮನೆಯಿಂದ ಚಿಕ್ಕಡಪಲ್ಲಿ ಪೊಲೀಸ್ ಠಾಣೆ ಪೊಲೀಸರು ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಖ್ಯಾತ ಸಿನಿಮಾ ನಿರ್ಮಾಪಕ ಹಾಗೂ ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಸಹೋದರ ಅಲ್ಲುಶೀರಿಷ್ ಸೇರಿ ಕುಟುಂಬಸ್ಥರ ಸಮ್ಮುಖದಲ್ಲೇ ಪೊಲೀಸರು ಅವರನ್ನು ಬಂಧಿಸಿದ್ದರು.
ಮೃತ ಮಹಿಳೆ ಕುಟುಂಬ
ಆಸ್ಪತ್ರೆಗೆ ಕರೆದೊಯಿದಾ ಪೋಲಿಸರು
ಅಲ್ಲು ಅರ್ಜುನ್ ನನ್ನು ಬಂಧಿಸಿದ ಪೋಲಿಸರು ಅವರನ್ನು ನಾಂಪಲ್ಲಿ ನ್ಯಾಯಾಲಯದಲ್ಲಿ ಹಾಜರುಪಡಿಸುವ ಮೊದಲು ಪೊಲೀಸರು, ವೈದ್ಯಕೀಯ ಪರೀಕ್ಷೆಗಳಿಗೆ ಗಾಂಧಿ ಆಸ್ಪತ್ರೆಗೆ ಕರೆದೊಯ್ದರು ಅಲ್ಲಿ ಅವರಿಗೆ ಬೀಪಿ, ಶುಗರ್ ಪರೀಕ್ಷೆಗಳ ಜೊತೆಗೆ, ಕೋವಿಡ್-19 ಟೆಸ್ಟ್ ಸಹ ಕೂಡ ಮಾಡಿಸಿಲಾಗಿದೆ ಎಲ್ಲಾ ಪರೀಕ್ಷೆಗಳಲ್ಲಿ ಅವರಿಗೆ ಸಾಮಾನ್ಯ ಫಲಿತಾಂಶಗಳು ಬಂದಿವೆ ಎನ್ನಲಾಗಿದೆ.
14 ದಿನಗಳ ರಿಮೈಂಡ್
ಆಸ್ಪತ್ರೆಯಲ್ಲಿ ವೈದ್ಯಕೀಯ ಪರಿಕ್ಷೆಗಳನ್ನು ಮಾಡಿಸಿದ ನಂತರ ಅವರನ್ನು ಹೈದರಾಬಾದ್ ನಗರದ ನಾಂಪಲ್ಲಿ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಜೆ ಶ್ರೀದೇವಿ ಅವರ ಮುಂದೆ ಹಾಜರುಪಡಿಸಲಾಯಿತು. ಅಲ್ಲು ಅರ್ಜುನ್ ಪರವಾಗಿ ಖ್ಯಾತ ವಕೀಲ ಜಿ ಅಶೋಕ್ ರೆಡ್ಡಿ ವಾದ ಮಂಡಿಸಿದರು. ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತದಿಂದ ರೇವತಿ ಸಾವು, ಅಪರಾಧಿ ಅಲ್ಲು ಅರ್ಜುನ್ ಬಂಧನದ ಬಗ್ಗೆ ವಿವರಿಸಲಾಗಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು 14 ದಿನಗಳ ಕಾಲ ರಿಮಾಂಡ್ ನೀಡಿದ್ದಾರೆ ಇದರೊಂದಿಗೆ ಅಲ್ಲು ಅರ್ಜುನ್ ಚಂಚಲಗೂಡ ಜೈಲಿಗೆ ಶಿಫ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗಿದ್ದು ಅಲ್ಲಿ ಅವರಿಗೆ ಭಾರೀ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಿ ಅಹಿತಕರ ಘಟನೆಗಳನ್ನು ನಡೆಸದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.