ನ್ಯೂಜ್ ಡೆಸ್ಕ್: ಇದು ಕಾಕಾತಾಳಿಯವೊ ಏನೊ ಎಐಸಿಸಿ ಮುಖ್ಯಸ್ಥ ರಾಹುಲ್-ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರು ಅಮೆರಿಕ ಪ್ರವಾಸದಲ್ಲಿದ್ದಾರೆ.
ಅಮೇರಿಕಾದಲ್ಲಿ ಇಬ್ಬರು ನಾಯಕರು ಭೇಟಿಯಾಗಿದ್ದಾರೆ ಇಬ್ಬರೂ ಆತ್ಮೀಯವಾಗಿ ಮಾತನಾಡುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.ಡಿಕೆಶಿವಕುಮಾರ್ ಪತ್ನಿ ಉಷಾ ತಮ್ಮ ಪತಿಯೊಂದಿಗೆ ವೈಯಕ್ತಿಕ ಭೇಟಿಗಾಗಿ ಅಮೆರಿಕಕ್ಕೆ ತೆರಳಿದ್ದರು. ಮತ್ತೊಂದೆಡೆ, ಅಮೆರಿಕಾದಲ್ಲಿರುವ ಭಾರತೀಯರು ಮತ್ತು ವಿದ್ಯಾರ್ಥಿಗಳನ್ನು ಭೇಟಿಯಾಗಲು ರಾಹುಲ್ ಗಾಂಧಿ ಅಮೇರಿಕಾ ಸುತ್ತುತ್ತಿದ್ದಾರೆ ಈ ಸಮಯದಲ್ಲಿ ಇಬ್ಬರೂ ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾಗಿದ್ದಾರೆ. ರಾಹುಲ್ ಗಾಂಧಿ, ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ ಜೊತೆ ಇರುವ ಫೋಟೋವನ್ನು ಸ್ವತಃ ಡಿ. ಕೆ. ಶಿವಕುಮಾರ್ ಹಂಚಿಕೊಂಡಿದ್ದಾರೆ.
ಭೇಟಿಗೆ ರಾಜಕೀಯ ಮಹತ್ವ
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ ವಿಚಾರಣೆ ನಡೆಯುತ್ತಿದೆ ಈ ಮದ್ಯೆ ಕೆಲ ಹಿರಿಯ ಕಾಂಗ್ರೆಸ್ ಶಾಸಕರು ಸಚಿವರು ಮುಖ್ಯಮಂತ್ರಿ ಪಟ್ಟದ ಕುರಿತಂತೆ ಹೇಳಿಕೆಗಳು ಬೆನ್ನಲ್ಲೆ ಕರ್ನಾಟಕದ ಸಿಎಂ ಸ್ಥಾನದ ಪ್ರಮುಖ ಅಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್ ಮತ್ತು ರಾಹುಲ್ ಭೇಟಿ ಮಹತ್ವ ಪಡೆದುಕೊಂಡಿದ್ದರೆ ಕರ್ನಾಟಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
Breaking News
- ಶ್ರೀನಿವಾಸಪುರದ ಸರ್ಕಾರಿ ಕಚೇರಿ ಶಾಲ ಆವರಣಗಳೆ ಪಾರ್ಕಿಂಗ್ ಸ್ಥಳ!
- ತಿರುಮಲ ವೆಂಕಟೇಶ್ವರ ದರ್ಶನ ವಿಳಂಬ 29 ಕಂಪಾರ್ಟ್ಮೆಂಟ್ ಗಳಲ್ಲಿ ಕಾಯುತ್ತಿರುವ ಭಕ್ತರು!
- ಶ್ರೀನಿವಾಸಪುರದಲ್ಲಿ KSRTC ಬಸ್ಸಿಗೆ ಗುದ್ದೋಡಿದ ತಮಿಳುನಾಡು ಲಾರಿ!
- ಐವರು ಸಾವನಪ್ಪಿದ ಮುಳಬಾಗಿಲು ರಸ್ತೆ ಅಪಘಾತಕ್ಕೆ ಕಾರಣ ಇದೇನಾ?
- ಮುಳಬಾಗಿಲು ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ದುರ್ಮರಣ
- Girl friendಗೆ ಮೊಬೈಲ್ ಕೊಡಿಸಲು ತಾಯಿಯನ್ನೆ ಹತ್ಯೆ ಮಾಡಿದ ಪಾಪಿ ಮಗ..!
- ಕೋಲಾರ ಜಿಲ್ಲೆ ಸೇರಿದಂತೆ ಮತ್ತೆ ಮಳೆಯಾಗುವ ಸಾಧ್ಯತೆ!
- ತೆಲುಗು ಬಿಗ್ಬಾಸ್ ಸೀಸನ್ 8 ರ ಕಿರೀಟ ಗೆದ್ದ ಕನ್ನಡಿಗ ನಿಖಿಲ್
- ಕೋಲಾರ ಅರೋಗ್ಯ ಇಲಾಖೆ ನರ್ವ್ ವ್ಯವಸ್ಥೆ ಅಧ್ಯಯನ ನಡೆಸಿದ ಆಂಧ್ರ ಮಂತ್ರಿ ಲೋಕೆಶ್
- ಮಾಜಿ ಸ್ಪೀಕರ್ ರಮೇಶಕುಮಾರ್ ಪರೋಕ್ಷವಾಗಿ ಚುನಾವಣೆ ನಿವೃತ್ತಿಯ ಮಾತು!
Sunday, December 22