ನೂತನ ಸಂವತ್ಸರ ಯುಗಾದಿ ಮುನ್ನ ತಾಲೂಕಿನಲ್ಲಿ ಮಳೆಯಾಗಿರುವುದು ರೈತಾಪಿ ಜನರಿಗೆ ಆಶಾಭಾವನೆ ಮೂಡಿಸಿದ್ದು ಅವಧಿಗೂ ಮುನ್ನವೇ ಮುಂಗಾರು ಮಳೆ ಪ್ರಾರಂಭವಾಗಿದೆ ಈ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತರು.
ಶ್ರೀನಿವಾಸಪುರ:ಮಳೆ ಬರಲಿ… ಮಳೆ ಬರಲಿ… ಅಂತಾ ಕಳೆದ ಹಲವು ತಿಂಗಳುಗಳಿಂದ ಜನ ಪರಿತಪಿಸುತ್ತಿದ್ದರು ಕಳೆದೊಂದು ತಿಂಗಳಿನಿಂದ ಬಿಸಿಲಿನ ಝಳಕ್ಕೆ ಭೂಮಿ ಕಾದು ಕೆಂಡವಾಗಿತ್ತು ಬಿಸಿಲಾಘಾತಕ್ಕೆ ಜನ ರೋಸಿ ಹೋಗಿದ್ದುರು ಇಂತಹ ಪರಿಸ್ಥಿತಿಯಲ್ಲಿ ವಾತವರಣವನ್ನು ತಂಪಾಗಿಸಲು ವರುಣ ಕರುಣಿಸಿದ್ದಾನೆ, ಬಿಸಿಲಿನ ಶಾಖಕ್ಕೆ ತಳಮಳಿಸಿರುವ ಜನರಿಗೆ ಇಂದು ಸುರಿದ ಆರ್ಭಟದ ಮಳೆ ತಂಪು ನೀಡಿದೆ. ಮಳೆಯ ಆಗಮನದಿಂದಾಗಿ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅರ್ಭಟದ ಮಳೆಗೆ ಕೃಷಿಕರಿಗೆ ನಷ್ಟ
ಯುಗಾದಿಗೆ ಮುನ್ನವೇ ಮುಂಗಾರು ಮಳೆ ಪ್ರಾರಂಭವಾಗಿದ್ದು ರೈತರಲ್ಲಿ ಸಂತಸ ಮೂಡಿಸಿದೆ ಆದರೂ ತಾಲೂಕಿನಲ್ಲಿ ಬಿದ್ದಿರುವ ಗುಡುಗು,ಮಿಂಚು ಆಲಿಕಲ್ಲು ಮತ್ತು ಬಿರುಗಾಳಿ ಸಹಿತ ಮಳೆಯಿಂದ ಅಡ್ದಗಲ್ ನೆಲವಂಕಿ ಲಕ್ಷ್ಮೀಪುರ ರೋಣೂರು ಭಾಗದಲ್ಲಿನ ತೋಟಗಾರಿಕೆ ಬೆಳೆಗಾರರಿಗೆ ಬಾರಿ ಪ್ರಮಾಣದ ನಷ್ಟ ಉಂಟಾಗಿರುವ ಬಗ್ಗೆ ಹೇಳಲಾಗಿದೆ ಆಲಿಕಲ್ಲು ಮತ್ತು ಬಿರುಗಾಳಿ ಸಹಿತ ಮಳೆಯಿಂದ ಟಮ್ಯೊಟೊ ಕ್ಯಾಪ್ಸಿಕಾಂ,ಇತರೆ ತರಕಾರಿ ಬೆಳೆಗಳು ಪಾಲಿಹೌಸ್ ಹಾಳಾಗಿದೆ ಎನ್ನಲಾಗಿದೆ.
ಗಾಳಿ ಮಳೆಗೆ ಉರಳಿದ ವಿದ್ಯತ್ ಕಂಬಗಳು
ಬಿರುಗಾಳಿ ಸಹಿತ ಮಳೆಗೆ ಪಟ್ಟಣದ ಹೊರವಲಯ ಸೇರಿದಂತೆ ತಾಲೂಕಿನ ಲಕ್ಷ್ಮೀಪುರ ಗೌವನಪಲ್ಲಿ ಅಡ್ಡಗಲ್ ರಾಯಲ್ಪಾಡು ಭಾಗಗಳಲ್ಲಿ ವಿದ್ಯತ್ ಕಂಬಗಳು ನೆಲಕ್ಕೆ ಉರಳಿ ಬಿದ್ದಿದ್ದು ವಿದ್ಯತ್ ಸಂಚಾರದಲ್ಲಿ ಏರುಪೇರಾಗಿದೆ ಎನ್ನುತ್ತಾರೆ ಬೆಸ್ಕಾಂ ಅಭಿಯಂತರರು.
ಮಾವು ಬೆಳೆಗಾರರಲ್ಲಿ ಆತಂಕ
ರೋಣೂರು ಹೋಬಳಿಯ ಕೆಲ ಗ್ರಾಮಗಳಲ್ಲಿ ಬಿದ್ದ ಆಲಿಕಲ್ಲು ಮಳೆ ಪರಿಣಾಮ ಇಲ್ಲಿನ ಮಾವು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ ಕಳೆದೊಂದು ತಿಂಗಳಿನಿಂದ ಬಿಸಿಲಾರ್ಭಟಕ್ಕೆ ಮಾವಿನ ಹೂವು ದರೆಗುಳದಿದ್ದು ಇದ್ದಬದ್ದ ಹೂವು ಪಿಂದೆ ಹಂತ ತಲುಪಿತ್ತು ಅದು ಆಲಿಕಲ್ಲು ಮಳೆಗೆ ಪೂರ್ಣವಾಗಿ ನಾಶವಾಗುತ್ತದೆ ಎಂದು ಮಾವು ಬೆಳೆಗಾರರು ಆತಂಕದಿಂದ ಹೇಳುತ್ತಾರೆ.

ಹೊತ್ತಿ ಉರಿದು ತೆಂಗಿನಮರ ತಾಲೂಕಿನ ಸೋಮಯಾಜಿ ಹಳ್ಳಿ ಗ್ರಾಮದಲ್ಲಿ ಸಿಡಿಲು ಬಿದ್ದು ತೆಂಗಿನಮರ ಹೊತ್ತಿ ಉರಿದ ಇದೆ ತಕ್ಷಣ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ