ಶ್ರೀನಿವಾಸಪುರ:ತಾಲ್ಲೂಕಿನ ಪ್ರತಿ ಪಂಚಾಯಿತಿಗೊಂದು ತರಕಾರಿ, ಹೂವು, ಶೇಖರಿಸುವ ಶೀಥಲ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ರೂಪಿಸುತ್ತಿರುವುದಾಗಿ ಮತ್ತು ರೈತರ ಬೆಳೆಗಳನ್ನು ಕಾಪಾಡಲು ಉಗ್ರಾಣ ನಿರ್ಮಾಣ ಕುರಿತಾಗಿ ಸಂಬಂದಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಸರ್ಕಾರದ ಮೇಲೆ ಒತ್ತಡ ಹಾಕಿ ಮಂಜೂರು ಮಾಡಿಸುವುದಾಗಿ ಶಾಸಕ ರಮೇಶ್ ಕುಮಾರ್ ಹೇಳಿದರು ಅವರು ತಾಲೂಕಿನ ನೆಲವಂಕಿ ಗ್ರಾಮ ಪಂಚಾಯಿತಿಯ ಜೋಡಿ ಕೊತ್ತಪಲ್ಲಿ ಗುಂದೇಡು ಗ್ರಾಮಗಳಲ್ಲಿ ವಿವಿದ ಅಭಿವೃದ್ದಿ ಕಾರ್ಯಗಳ ಪ್ರಾರಂಬೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ನಾವು ಮಾಡಿರುವ ಅಭಿವೃದ್ದಿ ಕಾರ್ಯಗಳೇ ನಮಗೆ ಶ್ರೀರಕ್ಷೆ ಎಂದ ಅವರು, ನಮ್ಮ ಭಾಗದ ರೈತರು ಬೆಳೆದಂತ ಬೆಳೆಗಳನ್ನು ಹೊರ ದೇಶಗಳಿಗೆ ರಪ್ತು ಮಾಡುವ ಉದ್ದೇಶದಿಂದ ನೂತನ ಯೋಜನೆ ಮುಂದಿನ ದಿನಗಳಲ್ಲಿ ರೂಪಿಸಲಾಗುವುದು ಹಾಗೆಯೇ ಪಟ್ಟಣದಲ್ಲಿಯೂ ಕೂಡ ಸುಸಜ್ಜಿತ ಉತ್ತಮ ಮಾರುಕಟ್ಟೆ ಮಾರಾಟ ಕೇಂದ್ರವನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು.
ಮಾದರಿ ಗ್ರಾಮ ಪಂಚಾಯಿತಿ ನೆಲವಂಕಿ
ತಾಲ್ಲೂಕಿನ ನೆಲವಂಕಿ ಪಂಚಾಯಿತಿಯಲ್ಲಿ ಕಸವಿಲೇವಾರಿ ಘಟಕವನ್ನು ಮಾದರಿಯಾಗಿ ಅಚ್ಚುಕಟ್ಟಾಗಿ ಮಾಡಿರುವುದು ಶ್ಲಾಘನೀಯ ಎಂದರು. ಪಂಚಾಯಿತಿಯಲ್ಲಿ ನಡೆದಿರುವಂತ ಅಭಿವೃದ್ದಿ ಕಾಮಗಾರಿಗಳಾದ ಜೋಡಿ ಕೊತ್ತಪಲ್ಲಿ ಸರ್ಕಾರಿ ಶಾಲೆ,ಅಂಬೇಡ್ಕರ್ ಭವನ, ಸಂಜೀವಿನಿ ಶೇಡ್,ಅಂಗನವಾಡಿ ಕಟ್ಟಡ, ಗುಂದೇಡು ಗ್ರಾಮದಲ್ಲಿ ಹಿಂದು ರುದ್ರಭೂಮಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಕಾಮಗಾರಿ ಮಾಡಿದ್ದಾರೆ ಇದಕ್ಕೆ ಶ್ರಮಿಸಿದ ತಾಲ್ಲೂಕು ಪಂಚಾಯಿತಿ ಇಓ ಆನಂದ್, ನರೇಗಾ ಇಂಜನೀಯರ್ ಗೌತಮಿ, ಪಂಚಾಯಿತಿಯ ಆಡಳಿತ ಮಂಡಳಿ, ಮತ್ತು ಮುಖಂಡರಿಗೆ ಶಾಸಕರು ಅಭಿನಂದನೆಗಳು ಸಲ್ಲಿಸಿದರು.
ಕ್ಷೇತ್ರದ 34 ಗ್ರಾಮ ಪಂಚಾಯಿತಿಗಳ ಪೈಕಿ ಆರು ಪಂಚಾಯಿತಿಗಳಲ್ಲಿ ಕಸಾ ವಿಲೇವಾರಿ ಘಟಕ ಸ್ತಾಪನೆಗೆ ಸ್ಥಳಾವಕಾಶ ಕೊರತೆ ಇದ್ದು ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳೊಂದಿಗೆ ಚರ್ಚೆಸಿರುವುದಾಗಿ ಹೇಳಿದರು.
ಇದೇ ವೇಳೆಯಲ್ಲಿ ಈ ಪಂಚಾಯಿತಿಯ ಕೆಲ ಹಿರಿಯ ನಾಗರಿಕರು ಶಾಸಕ ರಮೇಶ್ ಕುಮಾರ್ ರವರ ಬಾಲ್ಯ ಮಿತ್ರರನ್ನು ಪಂಚಾಯಿತಿ ಆಡಳಿತ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅದ್ಯಕ್ಷಿಣಿ ಗೌತಮಿ ಮುನಿರಾಜು, ಪಿಎಲ್.ಡಿ ಬ್ಯಾಂಕ್ ಅದ್ಯಕ್ಷ ಅಶೋಕ್, ಕೊಂಡಸಂದ್ರ ಶಿವಾರೆಡ್ಡಿ, ಕೆ.ಕೆ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ರಘುನಾಥ್ ರೆಡ್ಡಿ, ಮುಖಂಡರಾದ ರಾಮಿರೆಡ್ಡಿ, ರೆಡ್ಡೆಪ್ಪ, ಉಪ್ಪರಪಲ್ಲಿ ತಿಮ್ಮಯ್ಯ, ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷರಾದ ವೆಂಕಟರವಣಪ್ಪ, ವಿ.ಮುನಿಯಪ್ಪ, ರಘು, ಶಿವಣ್ಣ, ಕೊಂಡಪ್ಪ, ಪಂಚಾಯಿತಿ ಸಿಬ್ಬಂದಿ, ಮತ್ತಿತರರು ಹಾಜರಿದ್ದರು.