ಕೋಲಾರ:- ಕೋಲಾರ-ಚಿಕ್ಕಬಳ್ಳಾಪುರ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ತ್ರಿಕೋನ ಸ್ಪರ್ದೆಯಲ್ಲಿ ಕೊನೆಗೂ ಕಾಂಗ್ರೆಸ್ ಗೆದ್ದಿದೆ ಆಣೆ ಪ್ರಮಾಣಗಳು ಜಾತಿ ಲೆಕ್ಕಚಾರ ಇಲ್ಲಿ ಎಲ್ಲವೂ ತಲೆಕೆಳಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ಸುಮಾರು 445 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರಾಗಿ ಇಡಿ ಚುನಾವಣೆ ಭಾರವನ್ನು ಹೊತ್ತುಸಾಗಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಪ್ರತಿಷ್ಠಿಯ ಚುನಾವಣೆಯಾಗಿತ್ತು, ಕೋಲಾರ-ಚಿಕ್ಕಬಳ್ಳಾಪುರ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿರುವುದು ಮುಂದಿನ ದಿನಗಳಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರಭಾವಿ ನಾಯಕರಾಗಿರುವ ರಮೇಶ್ ಕುಮಾರ್ ಮುಂದೆ ಪ್ರಶ್ನಾತೀತ ನಾಯರಾಗಿ ಹೊರಹೊಮ್ಮಿದ್ದಾರೆ.
ಈ ಚುನಾವಣೆಯಲ್ಲಿ ಮಾಜಿ ಸಂಸದ ಮಾಜಿ ಕೇಂದ್ರ ಸಚಿವ ಮುನಿಯಪ್ಪ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರ ಸಂಪರ್ಕ ಕಳೆದುಕೊಂಡವರಂತೆ ಸಂಪೂರ್ಣವಾಗಿ ದೂರವೆ ಉಳಿದಿದ್ದರು.
ಚಿಂತಾಮಣಿ ಮಾಜಿ ಶಾಸಕ ಡಾ.ಸುಧಾಕರ್ ಮುಳಬಾಗಿಲು ಮಾಜಿ ಶಾಸಕ ಕೊತ್ತೂರುಮಂಜುನಾಥ್ ಚುನಾವಣೆಯ ಜವಬ್ದಾರಿ ಹೊತ್ತು ಒಡಾಡಿದ್ದು ಫಲ ಕೊಟ್ಟಿದೆ ಎನ್ನುತ್ತಾರೆ ರಾಜಕೀಯ ಪಂಡಿತರು.
ಬಿಜೆಪಿ ನೆಲೆ ವಿಸ್ತರಣೆಗೆ ಅವಕಾಶ
ಬಿಜೆಪಿ ಅಭ್ಯರ್ಥಿ ಡಾ.ವೇಣುಗೋಪಾಲ್ ಚುನಾವಣೆ ರಾಜಕೀಯಕ್ಕೆ ಹೊಸಬರು ಜೊತೆಗೆ ಬೆರಳಣಿಕೆಯಷ್ಟು ಮತದಾರರು ಇದ್ದ ಬಿಜೆಪಿ ಈ ಚುನಾವಣೆಯಲ್ಲಿ ಎರಡನೆ ಸ್ಥಾನ ಪಡೆದಿರುವುದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ರಾಜಕೀಯ ಲೆಕ್ಕಚಾರವನ್ನೆ ತಲೆಕೆಳಗಾಗಿಸಿದೆ ಬಿಜೆಪಿ ಮುಂದಿನ ದಿನಗಳಲ್ಲಿ ತನ್ನ ರಾಜಕೀಯ ನೆಲೆ ವಿಸ್ತರಿಸಲು ಈ ಚುನಾವಣೆ ದಿಕ್ಸೂಚಿಯಾದಂತಿದೆ!
ಸೋತು ಸುಣ್ಣವಾದ ಜೆಡಿಎಸ್
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರಭಲ ಪ್ರತಿಪಕ್ಷವಾಗಿದ್ದ ಜೆಡಿಎಸ್ ವಿಧಾನಪರಿಷತ್ ಚುನಾವಣೆಯಲ್ಲಿ ಮೂರನೆ ಸ್ಥಾನಕ್ಕೆ ನೂಕಲ್ಪಟ್ಟಿದೆ ಅಭ್ಯರ್ಥಿ ರಾಮಚಂದ್ರ@ವಕ್ಕಲೇರಿ ರಾಮಚಂದ್ರ ಕ್ಷೇತ್ರದಲ್ಲಿ ಸಾಕಷ್ಟು ಚಿರಪರಚಿತರು ಆಗಿದ್ದರು ಪಕ್ಷದ ರಾಜ್ಯ ಮುಖಂಡರ ರಾಜಕೀಯ ನಡೆ ಕೊನೆಯವರಿಗೂ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿತ್ತು ಚುನಾವಣೆ ಗಂಟೆಗಳು ಇರುವಾಗ ತಗೆದುಕೊಂಡ ನಿರ್ಧಾರ ಪಕ್ಷದ ಸೋಲಿಗೆ ಕಾರಣ ಎನ್ನುತ್ತಾರೆ ಪಕ್ಷದ ಕಾರ್ಯಕರ್ತರೆ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಗೆಲವಿನ ಸುದ್ದಿ ಹೊರ ಬಿಳುತ್ತಿದ್ದಂತೆ ಕೋಲಾರ ನಗರದಲ್ಲಿ ಮತ್ತು ಶ್ರೀನಿವಾಸಪುರ ತಾಲೂಕಿನಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.
ಅಭ್ಯರ್ಥಿಗಳು ಪಡೆದ ಮತದ ವಿವರ ಒಟ್ಟು ಮತಗಳು
ಗೆದ್ದ ಕಾಂಗ್ರೆಸ್ ಅಬ್ಯರ್ಥಿ ಪಡೆದಿದ್ದು 2340
ಬಿಜೆಪಿ ಅಬ್ಯರ್ಥಿ ಡಾ.ವೇಣುಗೋಪಾಲ್ ಪಡೆದಿರುವುದು1895
ಜೆಡಿಎಸ್ ವಕ್ಕಲೇರಿ ರಾಮಚಂದ್ರ ಪಡೆದಿದ್ದು 1438