ಶ್ರೀನಿವಾಸಪುರ: ರಥಸಪ್ತಮಿ ದಿನದಂದು ಸೂರ್ಯೋದಯಕ್ಕೂ ಮುನ್ನ ಶೂಚಿರಭೂತರಾಗಿ ಸೂರ್ಯ ನಮಸ್ಕಾರ ಮಾಡಿದರೆ ಮಾನಸಿಕ ನೆಮ್ಮದಿ ಮಾನಸಿಕ ದೈಹಿಕ ಸಮತೋಲನ ವೃದ್ಧಿಯಾಗುತ್ತದೆ ಕಾಯಿಲೆಗಳಿಂದ ದೂರವಾಗಿರುತ್ತಾರೆ ಎಂದು ಯೋಗಗುರು ಚೌಡಪ್ಪ ಹೇಳಿದರು.
ಅವರು ಪಟ್ಟಣದ ತ್ಯಾಗರಾಜ ಬಡಾವಣೆಯಲ್ಲಿನ ಯೋಗ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಥಸಪ್ತಮಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರದಲ್ಲಿ ಪಾಲ್ಗೊಂಡು ಮಾತನಾಡಿದರು.
ಸೂರ್ಯ ಭಗವಾನನ ಜನುದಿನವಾಗಿ ರಥಸಪ್ತಮಿಯನ್ನು ಆಚರಿಸುವುದು ನಮ್ಮ ಸಂಪ್ರದಾಯ ಸಂಕ್ರಾಂತಿಗೆ ದಕ್ಷಿಣಾಯನದಿಂದ ಉತ್ತರಾಯಣ ಕಡೆ ಪ್ರಯಾಣಿಸುವ ಸೂರ್ಯ ಸಂಪೂರ್ಣ ಉತ್ತರ ದಿಕ್ಕಿಗೆ ತಿರುಗುತ್ತಾನೆ. ಕೊಟ್ಯಾನು ಕೋಟಿ ದೇವತೆಗಳು ಸೂರ್ಯನ ಪತ ಸಂಚಲನಕ್ಕೆ ಸಾಕ್ಷೀಭೂತರಾಗಿರುತ್ತಾರೆಂದು ಪ್ರಕೃತಿ ಪರಂಪರೆ ಸಾರುತ್ತದೆ.
ಪತ ಸಂಚಲನ ಬದಲಾವಣೆಯಿಂದ ಕೇವಲ ಆಧ್ಯಾತ್ಮಿಕವಾದವಷ್ಟೆ ಅಲ್ಲ ಪ್ರಾಕೃತಿಕವಾಗಿ ಪರಿಸರಸದ ಮೇಲು ಬದಲಾವಣೆ ಕಾಣಬಹುದಾಗಿದೆ ಸೂರ್ಯನ ಪ್ರಖರತೆ ಹೆಚ್ಚುತ್ತದೆ ಮರಗಿಡ ಸಸ್ಯ ಶ್ಯಾಮಲದ ಮೇಲೆ ಪರಿಣಾಮ ಬೀರುತ್ತದೆ ಪ್ರಕೃತಿಯಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಕಾಣಸಿಗುತ್ತದೆ ಜೊತೆಗೆ ಮನುಷ್ಯರಿಗೆ ದೈಹಿಕ ಕಾಯಿಲೆಗಳು ದೂರವಾಗಲು ಸೂರ್ಯಕಿರಣಗಳು ಶಕ್ತಿ ನೀಡುತ್ತದೆ. ಬೀಜ ಮಂತ್ರಗಳೊಂದಿಗೆ 108 ಸೂರ್ಯ ನಮಸ್ಕಾರ ಮಾಡುವುದರಿಂದ ಆಧ್ಯಾತ್ಮಿಕವಾಗಿ ದೈಹಿಕ ಬದಲಾವಣೆ ಕಾಣಬಹುದಾಗಿರುತ್ತದೆ ಮಾನಸಿಕ ಸ್ಮರಣೆಯ ಶಕ್ತಿ ಹಾಗು ದೇಹಕ್ಕೆ ರೋಗ ನಿರೂದಕ ಶಕ್ತಿ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ಶಿಕ್ಷಕ ರವಿಕುಮಾರ್ ಮಾತನಾಡಿ ತಂತ್ರಜ್ಞಾನ ಬೆಳೆದಂತೆ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿದೆ ಒತ್ತಡಗಳಿಂದ ನಲುಗುತ್ತಿರುವ ಜನತೆಗೆ ಸೂರ್ಯ ನಮಸ್ಕಾರ, ಯೋಗಾಭ್ಯಾಸ ಪ್ರಾಣಾಯಾಮ ಕಲಿತು ಮಾನಸಿಕ ದೈಹಿಕ ಒತ್ತಡಗಳು ದೂರ ಮಾಡಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒತ್ತು ಕೊಡಬೇಕೆಂದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷೆ ವರಲಕ್ಷ್ಮಿ, ಯೋಗ ಶಿಕ್ಷಕ ವೆಂಕಟರವಣಪ್ಪ ಬಾಬುರೆಡ್ಡಿ,ಉಪೇಂದ್ರ,ರಮೇಶರೆಡ್ಡಿ, ಕುಬೇರಗೌಡ, ವಾಸವಿರವಿಕುಮಾರ್,ಉಷಾದೇವಿ ಮುಂತಾದವರಿ ಇದ್ದರು.
Breaking News
- ಶ್ರೀನಿವಾಸಪುರ:ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ಪ್ರಕ್ಷಬ್ದ ಪರಿಸ್ಥಿತಿ!
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
Sunday, April 6