ನ್ಯೂಜ್ ಡೆಸ್ಕ್: ದೇಶಾದ್ಯಂತ ₹2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. 2023 ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಎಲ್ಲರಿಗೂ ತಿಳಿಸಿದೆ. ದೇಶದ ಜನರು ಮತ್ತೇ ನೋಟ್ ಬ್ಯಾನ್ ಆಯ್ತಾ ಅಂತ ತಲೆಕಡಿಸಿಕೊಂಡಿದ್ದಾರೆ.
₹2000 ನೋಟು ಹಿಂಪಡೆಯುವ ಕುರಿತಾದ ಜನಸಾಮಾನ್ಯರು ತಮ್ಮ ಬಳಿ ಇರುವಂತ ರೂ.₹2000 ನೋಟುಗಳನ್ನು ಏನು ಮಾಡಬೇಕು..? ಹೇಗೆ ಬದಲಾಯಿಸಿಕೊಳ್ಳಬೇಕು,ಎಷ್ಟು ನೋಟು ಬದಲಾಯಿಸಕೊಳ್ಳಬಹುದು, ಎಷ್ಟು ಠೇವಣಿ ಇಡಬಹುದು ಹೀಗೆ ₹2000 ನೋಟಿನ ಸುತ್ತ ಹತ್ತು ಹಲವು ರೀತಿಯ ಆತಂಕದ ಪ್ರಶ್ನೆಗಳು ಜನರನ್ನು ಕಾಡುತ್ತಿದೆ ಇವೆಲ್ಲ ಸಂದೇಹಗಳಿಗೆ ಉತ್ತರ ಇಲ್ಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ₹2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದ ಬೆನ್ನಲ್ಲೆ ಎಲ್ಲರೂ ನೋಟ್ ಬ್ಯಾನ್ ಅಂತ ತಲೆಕಡಿಸಿಕೊಂಡಿದ್ದಾರೆ. ಇದು ನೋಟ್ ಬ್ಯಾನ್ ಅಲ್ಲ ನಿಗದಿತ ಸಮಯದವರೆಗೂ ₹2,000 ರೂ. ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ ಅಂತ ಆರ್ಬಿಐ ಸ್ಪಷ್ಟಪಡಿಸಿದೆ ಜೊತೆಗೆ ಸೆಪ್ಟೆಂಬರ್ 30ರ ಒಳಗೆ ಎಲ್ಲರೂ ತಮ್ಮ ಬಳಿ ಇರುವಂತ ₹2,000 ರೂ. ಮುಖಬೆಲೆಯ ನೋಟುಗಳನ್ನು ಬದಲಾವಣೆ ಇಲ್ಲವೇ ಬ್ಯಾಂಕಿನಲ್ಲಿ ಠೇವಣಿ ಇಡುವಂತೆ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ರೂ ₹2000 ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳಲು ಕಾರಣ?
ನವೆಂಬರ್ 2016 ರಲ್ಲಿ ಆರ್ಬಿಐ ಕಾಯಿದೆ, 1934 ರ ಸೆಕ್ಷನ್ 24 (1) ರ ಅಡಿಯಲ್ಲಿ ರೂ. ₹500 ಮತ್ತು ₹1000 ನೋಟುಗಳನ್ನು ಅಮಾನ್ಯಗೊಳಿಸಿದ ನಂತರ, ಆರ್ಥಿಕತೆಯ ಕರೆನ್ಸಿ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಕೇಂದ್ರವು ರೂ.2000 ನೋಟನ್ನು ಪರಿಚಯಿಸಿತು. 2018-19ನೇ ಸಾಲಿನಲ್ಲಿ 2000 ನೋಟುಗಳ ಮುದ್ರಣವನ್ನು ಕೇಂದ್ರವು ಸ್ಥಗಿತಗೊಳಿಸಿದ್ದು, ನಿಗದಿತ ಗುರಿ ತಲುಪಿದ್ದು, ಅಗತ್ಯಕ್ಕೆ ತಕ್ಕಂತೆ ಇತರೆ ಮುಖಬೆಲೆಯ ನೋಟುಗಳು ಲಭ್ಯವಿವೆ. ₹2000 ರೂ ಮುಖಬೆಲೆಯ ನೋಟುಗಳಲ್ಲಿ ಹೆಚ್ಚಿನವು ಮಾರ್ಚ್ 2017 ಕ್ಕಿಂತ ಮೊದಲು ಬಿಡುಗಡೆಯಾಗಿದೆ. ಇತರ ಮುಖಬೆಲೆಯ ನೋಟುಗಳು ಪ್ರಸ್ತುತ ದೇಶದ ಜನರ ಕರೆನ್ಸಿ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತದೆ. ಈ ಕಾರಣಕ್ಕಾಗಿಯೇ ₹2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಇದೀಗ ಕ್ಲೀನ್ ನೋಟ್ ಅಭಿಯಾನದಡಿ ನೋಟ್ಗಳನ್ನು ಹಿಂಪಡೆಯಲು ಆರ್ಬಿಐ ಮುಂದಾಗಿದೆ. ಮೇ 23, 2023ರಿಂದ ಯಾವುದೇ ಬ್ಯಾಂಕ್ನಲ್ಲಿ ₹2000 ನೋಟುಗಳನ್ನು ಇತರೆ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ.
ಸೆಪ್ಟೆಂಬರ್ 30 ನಂತರವೂ ಕಾನೂನು ಬದ್ದವಾಗಿರುತ್ತವೆ
ಜನರು ಬ್ಯಾಂಕ್ಗಳೊಂದಿಗೆ ನೋಟುಗಳನ್ನು ಬದಲಾಯಿಸಿಕೊಳ್ಳಲು 4 ತಿಂಗಳ ಕಾಲಾವಕಾಶ ನೀಡಿದ್ದು ರೂ ₹2000 ನೋಟುಗಳು ಸೆಪ್ಟೆಂಬರ್ 30 ರ ಸಮಯದ ಚೌಕಟ್ಟಿನೊಳಗೆ ಬ್ಯಾಂಕ್ಗಳಿಗೆ ಹಿಂತಿರುಗಬಹುದಾಗಿದೆ,ಸೆಪ್ಟೆಂಬರ್ 30 ರ ನಂತರವೂ ಕಾನೂನುಬದ್ಧವಾಗಿ ಉಳಿಯುತ್ತದೆ. ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ಬ್ಯಾಂಕ್ಗೆ ಎಷ್ಟು ರೂ ₹2000 ನೋಟು ಕಟ್ಟಬಹುದು
ನೋಟು ವಿನಿಮಯ ಮಾಡಿಕೊಳ್ಳಲು 10 ನೋಟುಗಳಿಗೆ (20 ಸಾವಿರ ರೂಪಾಯಿಗಳು) ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಬ್ಯಾಂಕ್ ಖಾತೆಗೆ ಎಷ್ಟು ನೋಟುಗಳನ್ನು ಬೇಕಾದರು ಜಮೆ ಮಾಡಬಹುದಾದ ಅವಕಾಶವನ್ನು ಆರ್ಬಿಐ ಕಲ್ಪಿಸಿದೆ.
ನೋಟ್ ಬದಲಾವಣೆ ಮಾಡಿಕೊಳ್ಳಲು ಬ್ಯಾಂಕ್ ಖಾತೆ ಇರಬೇಕೆಂದಿಲ್ಲ
ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುವವರು ಆ ಬ್ಯಾಂಕ್ನಲ್ಲಿ ಖಾತೆ ಹೊಂದಿರಬೇಕು ಎಂಬ ನಿಯಮ ಇಲ್ಲ. ಸಾರ್ವಜನಿಕರು ಮುಕ್ತವಾಗಿ ಬ್ಯಾಂಕ್ ತೆರೆಳಿ ₹2000 ನೋಟು ಕೊಟ್ಟು ಬದಲಿ ನೋಟುಗಳ್ನು ತರಬಹುದಾಗಿದೆ. 2000 ನೋಟು ವಿನಿಮಯ ಪಡೆಯಲು ಜನರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಇದಲ್ಲದೆ, ₹ 2,000 ನೋಟುಗಳನ್ನು ಬದಲಾಯಿಸಲು ಅಥವಾ ಠೇವಣಿ ಇಡಲು ಬಯಸುವ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ತೊಂದರೆಯಾಗದಂತೆ ವ್ಯವಸ್ಥೆಗಳನ್ನು ಮಾಡಲು ಬ್ಯಾಂಕ್ಗಳಿಗೆ ಆರ್ಬಿಐ ಸೂಚಿಸಿದೆ.
Breaking News
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
- ಶ್ರೀನಿವಾಸಪುರ:ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ಪ್ರಕ್ಷಬ್ದ ಪರಿಸ್ಥಿತಿ!
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
Monday, April 7