ನ್ಯೂಜ್ ಡೆಸ್ಕ್:ಸಾಮಾಜಿಕ ಜಾಲ ತಾಣದ ರೀಲ್ಸ್ ಹುಚ್ಚು ಯಾರನ್ನು ಬಿಟ್ಟಿಲ್ಲ ಈ ಹುಚ್ಚು ಬಹುತೇಕರನ್ನು ಆವರಿಸಿಕೊಂಡು ಬಿಟ್ಟಿದೆ. ಸಮಾಜದಲ್ಲಿ ಫೇಮಸ್ ಆಗಲು ಮಾರ್ಗ ಕಂಡುಕೊಂಡಿರುವ ಯುವ ಸಮುಧಾಯ ರೀಲ್ಸ್ (video) ಹುಚ್ಚಿಗೆ ಬಿದ್ದಿದೆ ಅದು ದೇವಸ್ಥಾನ ಇರಲಿ ಕಾಡಿರಲಿ ನದಿ ದಂಡೆಗಳಿರಲಿ ಜಲಪಾತಗಳಿರಲಿ ಅಪಾಯಕಾರಿ ಘಟ್ಟಗಳಲ್ಲಿ ರೀಲ್ಸ್ ಹುಚ್ಚರ ಸಂಖ್ಯೆ ಹೆಚ್ಚುತ್ತಿದೆ ಇದಕ್ಕೆ ಕಾಂಪಿಟೇಷನ್ ಕೂಡ ಜಾಸ್ತಿಯಾಗುತ್ತಿದೆ.
ಅದಕ್ಕಾಗಿಯೇ ಕೆಲವರು ವಿಭಿನ್ನ ರೀತಿಯಲ್ಲಿ ರೀಲ್ಸ್ ಮಾಡುವ ತವಕದಲ್ಲಿ ಇದ್ದು ಈ ಕಾರಣಕ್ಕೆ ಎಷ್ಟೋ ಮಂದಿ ಅಪಾಯಕಾರಿ ಎನ್ನುವ ರೀಲ್ಸ್ ಮಾಡಿ ಜೀವ ಕಳೆದುಕೊಂಡವರಿದ್ದಾರೆ, ಕೈ-ಕಾಲು ಮುರಿದುಕೊಂಡು ನರಳುತ್ತಿರುವರು ಇದ್ದಾರೆ. ಇಂಥವರ ಬಗ್ಗೆ ಪ್ರತಿನಿತ್ಯ ಸುದ್ದಿಯಾಗುತ್ತಲೇ ಇರುತ್ತದೆ.
ಭಕ್ತಿಯಿಂದ ತುಂಬಿರಬೇಕಾದ ಈ ಪವಿತ್ರ ಜಾಗವಾದ ತಿರುಮಲ ಬೆಟ್ಟದ ತಪ್ಪಲಿನಲ್ಲಿ ಪುಷ್ಪ 2 ಚಿತ್ರದ ಶ್ರೀಲೀಲಾ ನೃತ್ಯ ಮಾಡಿರುವ ಕಿಸ್ಸಿಕ್ ಐಟಂ ಸಾಂಗಿಗೆ ಹುಡುಗಿಯೊಬ್ಬಳು ಡ್ಯಾನ್ಸ್ ಮಾಡಿರುವ ರೀಲ್ಸ್ ತನ್ನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಿದು ಈಗ ವೈರಲ್ ಆಗಿದೆ ನೆಟ್ಟಿಗರು ಈ ಬಗ್ಗೆ ಕಣ್ಣು ಕೆಂಪಗಾಗಿಸಿದ್ದಾರೆ.ಹಿಂದುಗಳ ಭಾವನಾತ್ಮಕ ಸ್ಥಳದಲ್ಲಿ ಹುಚ್ಚರ ರೀತಿಯಲ್ಲಿ ಅಸ್ಯಹಕರವಾಗಿ ರೀಲ್ಸ್ ಮಾಡಿದ ಬಗ್ಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ,ತಿರುಮಲ ಆವರಣದಲ್ಲಿ ಯಾವುದೇ ಚಿತ್ರೀಕರಣ, ರೀಲ್ಸ್ ಗಳನ್ನು ಮಾಡಬಾರದು ಎಂಬ ನಿಯಮವಿದ್ದರೂ ಕೆಲವರು ಈ ರೀತಿ ಮಾಡುತ್ತಿದ್ದು ಅಂತಹವರ ವಿರುದ್ಧ ಟಿಟಿಡಿ ಬೋರ್ಡ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಲ ಭಕ್ತರು ಒತ್ತಾಯಿಸಿದ್ದಾರೆ.