ಶ್ರೀನಿವಾಸಪುರ:ಆರ್ಯವೈಶ್ಯ ಸಮಾಜಕ್ಕೆ ಸೇರಿದ ದೆಹಲಿ ಮುಖ್ಯ ಮಂತ್ರಿ ರೇಖಾ ಗುಪ್ತ ಅವರು ದೇಶದ ಹೆಮ್ಮೆಯ ಪುತ್ರಿಯಾಗಿದ್ದಾರೆ. ಅವರ ದಕ್ಷತೆ ಸೇವಾಪರತೆ ಹಾಗು ರಾಜಕೀಯ ಚತುರತೆ ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಹಾಗು ಬಿಜೆಪಿ ಹಿರಿಯ ಮುಖಂಡರು ರೇಖಾಗುಪ್ತ ಅವರಿಗೆ ಮುಖ್ಯಮಂತ್ರಿ ಅವಕಾಶ ಕಲ್ಪಿಸಿದ್ದಾರೆ ಎಂದು ತಾಲ್ಲೂಕು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್ ಹೇಳಿದರು.
ಅವರು ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಆರ್ಯವೈಶ್ಯ ಮಂಡಳಿ ವತಿಯಿಂದ ದೆಹಲಿ ನೂತನ ಮುಖ್ಯ ಮಂತ್ರಿ ರೇಖಾಗುಪ್ತ ಅವರಿಗೆ ಶುಕ್ರವಾರ ಸಂಜೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಜೆಪಿ ಮುಖಂಡ ಚಿರುವನಹಳ್ಳಿಲಕ್ಷ್ಮಣಗೌಡ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು ರೇಖಾಗುಪ್ತ ಸಹ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಪಕ್ಷದ ಚಟುವಟಿಕೆಗಳಲ್ಲಿ ನಿರಂತರವಾಗಿ ಶ್ರಮಿಸಿದ ಅವರ ಕಾರ್ಯಕ್ಷಮತೆ ಸೇವಾಪರತೆ ಪಕ್ಷ ನಿಷ್ಟೆಯನ್ನು ಗುರುತಿಸಿ ಅವರು ಮೊದಲಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ ಇದಕ್ಕೆ ಕೊಟ್ಯಾಂತರ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ ಅವರ ಆಧಿಕಾರಾವಧಿಯಲ್ಲಿ ದೆಹಲಿ ಸರ್ವತೋಮುಖವಾಗಿ ಅಭಿವೃದ್ಧಿಯಾಗಲಿ ಎಂದು ಹೇಳಿದರು.
ಆರ್ಯವೈಶ್ಯ ಮಂಡಳಿ ಕಾರ್ಯದರ್ಶಿ ಕಾಗತಿಸೂರ್ಯನಾರಾಯಣಶೆಟ್ಟಿ ಮಾತನಾಡಿ, ರೇಖಾ ಗುಪ್ತ ಅವರನ್ನು ದೆಹಲಿ ಮುಖ್ಯ ಮಂತ್ರಿ ಮಾಡುವುದರ ಮೂಲಕ ಆರ್ಯವೈಶ್ಯ ಸಮಾಜಕ್ಕೆ ಪ್ರಧಾನಿ ಮೋದಿ ಅವರು ದೊಡ್ಡ ಗೌರವ ನೀಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮುದಾಯದ ಯುವ ಕಾರ್ಯಕರ್ತರು ಪಟಾಕಿ ಸಿಡಿಸಿ,ಸಿಹಿ ಸಂಭ್ರಮಿಸಿದರು.


ಆರ್ಯವೈಶ್ಯ ಮಹಾ ಮಂಡಳಿ ನಿರ್ದೇಶಕ ಎಸ್.ಆರ್.ಅಮರನಾಥ್, ಮುಖಂಡರಾದ ಕೆ.ಎಚ್.ಸತ್ಯನಾರಾಯಣಶೆಟ್ಟಿ, ವೈ.ಆರ್.ಎಸ್.ಬಾಬು, ಅಂಜನಾದ್ರಿನಾಗರಾಜ್,ವಾಸವಿರವಿ,ರಾಮು,ಬಿಜೆಪಿರೆಡ್ಡಪ್ಪ,ಶ್ರೀನಿವಾಸಪ್ಪ,ನಾಗದೇನಹಳ್ಳಿಚಂದ್ರಶೇಖರ್,ವೈ.ಪಿ.ಎಸ್.ಪದ್ಮಶ್,ರೆವೂರುಹರಿ,ಡಿಶ್ ಬಾಬು, ಆರ್ಯವೈಶ್ಯ ಮಂಡಳಿಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಶಿವಪ್ರಕಾಶ್,ಕಿಶೋರ್,ಲಕ್ಷ್ಮಣಬಾಬು ಮುಂತಾದವರು ಇದ್ದರು.