- ಜಮೀನು ಪಕ್ಕದಲ್ಲಿ ಕೆರೆಯಂಗಳದಲ್ಲಿ ಬೆಳೆದಿದ್ದ ಟಮ್ಯಾಟೊ
- ಜಿಲ್ಲಾಧಿಕಾರಿಯ ಸೂಚನೆಯಂತೆ ತೆರವು
- ಟಮ್ಯಾಟೊ ಬೆಳೆಗೆ ಕಾಲಾವಕಾಶ ನೀಡದೆ ತೆರವು
- ಮಾಜಿ ಶಾಸಕರ ತಂಡದಿಂದ ಆರ್ಥಿಕ ನೆರವು
ಶ್ರೀನಿವಾಸಪುರ: ಇನ್ನೊಂದು ಹತ್ತು-ಹದಿನೈದು ದಿನ ಕಾದಿದ್ದಾರೆ ಬಡ ರೈತ ಕಾರ್ಮಿಕರ ಕುಟುಂಬ ಬೆಳೆಸಿದ್ದ ಟಮ್ಯಾಟೊ ಬೆಳೆ ದುಡ್ಡು ತಂದು ಕೊಡುತಿತ್ತು ಆದರೆ ಶ್ರೀನಿವಾಸಪುರದ ಕಂದಾಯ ಅಧಿಕಾರಿಗಳ ಅಮಾನವಿಯತೆ ವರ್ತನೆಯಿಂದ ಟಮ್ಯಾಟೊ ಬೆಳೆ ನೆಲದ ಪಾಲಾಗಿದೆ ಹಸಿರಾಗಿದ್ದ ಟಮ್ಯಾಟೊ ಗಿಡಗಳು ನೆಲಕ್ಕೆ ಬಿದ್ದು ಒಣಗಿದೆ ಇದಕ್ಕೆ ಬಂಡವಾಳ ಹಾಕಿದ್ದ ರೈತ ಮಹಿಳೆ ಶಾಂತಮ್ಮ ತಹಶೀಲ್ದಾರ್ ಕಚೇರಿ ಮುಂದೆ ಸಾರ್ವಜನಿಕವಾಗಿ ಗೊಳಿಡುತ್ತಿದ್ದಾಳೆ.
ಇದೆಲ್ಲ ನಡೆದಿರುವುದು ತಾಲೂಕಿನ ನೆರ್ನಹಳ್ಳಿ ಗ್ರಾಮದಲ್ಲಿ ರೈತ ಮಹಿಳೆ ಶಾಂತಮ್ಮ ಗೊಳಿಗೆ ಕಾರಣವಾಗಿದ್ದು ಶ್ರೀನಿವಾಸಪುರ ತಾಲೂಕು ಕಂದಾಯ ಇಲಾಖೆ ಯಲ್ದೂರು ಹೋಬಳಿಯ ಕಂದಾಯ ವೃತ್ತ ನೀರಿಕ್ಷಕ ದುಂಡಾವರ್ತನೆಯ ಪರಿಣಾಮ ಘಟನೆ ನಡೆದಿರುವುದಾಗಿ ಹೇಳಲಾಗಿದೆ.
ನೆರ್ನಹಳ್ಳಿ ಗ್ರಾಮ ಬೌಗೊಳಿಕವಾಗಿ ರೋಣೂರು ಹೋಬಳಿಯ ಸೋಮಯಾಜಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಯಲ್ದೂರು ಹೋಬಳಿಗೆ ಸೇರುತ್ತದೆ ಗ್ರಾಮದ ಅಂಗವಿಕಲ ವ್ಯಕ್ತಿಯ ಪತ್ನಿಯಾದ ಶಾಂತಮ್ಮ ಎಂಬ ಮಹಿಳೆ ಗ್ರಾಮಕ್ಕೆ ತನ್ನ ಸ್ವಂತ ಜಮೀನಿಗೆ ಹೊಂದಿಕೊಂಡಿರುವ ಮಾರುದ್ದದ ಕೆರೆಯ ಅಂಗಳ ಬಳಸಿಕೊಂಡು ಭೂಮಿಯಲ್ಲಿ ಟಮ್ಯಾಟೊ ಬೆಳೆ ಬೆಳೆದಿದ್ದರು ಇವರ ಜೊತೆಗೆ ಗ್ರಾಮದ ಇತರರು ಸಹ ಟಮ್ಯಾಟೊ ಸಾಗುವಳಿ ಮಾಡಿದ್ದರು ಇನ್ನೇನು 10-15 ದಿನಗಳಲ್ಲಿ ಫಸಲು ರೈತನಗೆ ಸಿಗಬೇಕಾಗಿತ್ತು ಇಂತಹ ಸಂದರ್ಭದಲ್ಲಿ ಬೆಳೆಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಮಾನವೀಯತೆ ಮರೆತು ಜೆಸಿಬಿ ಮೂಲಕ ನಾಶ ಮಾಡಿ ಅಹಂಕಾರ ಮೆರೆದಿದ್ದಾರೆ
ನೆರ್ನಹಳ್ಳಿ ಗ್ರಾಮದ ಕೆರೆಯಂಗಳದಲ್ಲಿ ಗ್ರಾಮದ ಬಹುತೇಕ ರೈತರು ಸುಮಾರು 15 ಎಕರೆ ಪ್ರದೇಶದಲ್ಲಿ ಟಮೋಟೊ ಬೆಳೆ ಬೆಳೆದಿದ್ದಾರೆ.ಅವರಂತೆ ಕೆರೆ ಅಂಗಳದ 10 ಗುಂಟೆ ಜಮೀನಿನಲ್ಲಿ ಟಮೋಟೊ ನಾಟಿ ಮಾಡಿದ್ದರು. ಟಮ್ಯಾಟೊ ಬೆಳೆ ಇನ್ನೇನು ಕೇವಲ 15 ದಿನಗಳಲ್ಲಿ ಮಾರುಕಟ್ಟೆಗೆ ತಲುಪಬೇಕಾಗಿತ್ತು. ಇಂದಿನ ಮಾರುಕಟ್ಟೆಯಲ್ಲಿ ಟಮ್ಯಾಟೊಗೆ ಉತ್ತಮ ಬೆಲೆ ಇದೆ.ಮಹಿಳಾ ಸಂಘಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದಿದ್ದ ಶಾಂತಮ್ಮ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು ಆದರೆ ಶನಿವಾರ ಮುಂಜಾನೆ ಕಂದಾಯ ಇಲಾಖೆಯ ಅಧಿಕಾರಿಗಳು ಜೆಸಿಬಿ ಮೂಲಕ ಶಾಂತಮ್ಮನ ಟಮ್ಯಾಟೊ ಬೆಳೆ ಸಂಪೂರ್ಣ ನಾಶಗೊಳಿಸಿದ್ದಾರೆ. ಅದೇ ಕೆರೆಯಂಗಳಲ್ಲಿ ಒತ್ತುವರಿ ಮಾಡಿಕೊಂಡು ಬೆಳೆಯಲಾಗಿದ್ದ ಸುಮಾರು ೨೫ ಎಕರೆ ಜಮೀನಿನಲ್ಲಿರುವ ಬೆಳೆಯನ್ನು ಬಿಟ್ಟು ಶಾಂತಮ್ಮನವರ ಕೇವಲ 10 ಗುಂಟೆ ಜಮೀನಿನಲ್ಲಿರುವ ಬೆಳೆಯನ್ನು ನಾಶಗೊಳಿಸಿದ್ದಾರೆ.
ಯಾಕೆ ಹೀಗೆ ವರ್ತನೆ
ಕಳೆದ ವಾರವಷ್ಟೇ ಜಿಲ್ಲಾಧಿಕಾರಿ ವೆಂಕಟರಾಜು ನೆರ್ನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು ಆಗ ಕೆರೆ ಒತ್ತುವರಿಯ ದೂರುಗಳ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಾಗ ಅವರು ರೈತರು ನಾಟಿ ಮಾಡಿರುವ ಬೆಳೆ ಮುಗಿದ ನಂತರ ಒತ್ತುವರಿಯನ್ನು ತೆರವುಗೊಳಿಸಲು ಸುಚಿಸಿದ್ದರು ಆದರೆ ಯಲ್ದೂರು ಹೋಬಳಿಯ ಕಂದಾಯ ನಿರೀಕ್ಷಕ ವಿನೋದ್ ಮಾತ್ರ ಜಿಲ್ಲಾಧಿಕಾರಿಗಳ ಆದೇಶವನ್ನೂ ಧಿಕ್ಕರಿಸಿ ಬಡವರ ಬೆಳೆಯನ್ನು ನಾಶಗೊಳಿಸಿದ್ದಾನೆ ಎಂದು ಮೊಗಿಲಹಳ್ಳಿಸುಬ್ರಮಣಿ ತೀವ್ರವಾಗಿ ಆರೋಪಿಸಿದ್ದಾರೆ.
ಕೆರೆ ಅಂಗಳದಲ್ಲಿ ಗ್ರಾಮದ ಬಹುತೇಕ ರೈತರು ಸುಮಾರು 2 ಲಕ್ಷಕ್ಕೂ ಹೆಚ್ಚಿನ ಟಮೋಟೊ ನಾರು ನಾಟಿ ಮಾಡಿದ್ದರು ಅದರಂತೆ ನಾನು ಸಹ ಜಮೀನು ಕೂಡ ಕೆರೆಗೆ ಹೊಂದಿಕೊಂಡೇ ಇರುವುದರಿಂದ ನನ್ನ ಜಮೀನಿನಲ್ಲಿ ಮೂರು ಸಾವಿರ ಟಮೋಟೊ ನಾರು ನಾಟಿ ಮಾಡಿ ನನ್ನ ಜಮೀನಿಗೆ ಹೊಂದಿಕೊಂಡಿರುವ ಕೆರೆ ಅಂಗಳದಲ್ಲಿ ಎರಡು ಸಾವಿರ ಟಮೋಟ ನಾರು ಮಾತ್ರ ನಾಟಿ ಮಾಡಿದ್ದೆ, ಆದರೆ ನಮ್ಮ ವ್ಯಾಪ್ತಿಗೆ ಸೇರುವ ಕಂದಾಯ ನಿರೀಕ್ಷಕ ವಿನೋದ್ ಗ್ರಾಮ ಲೆಕ್ಕಿಗ ಜಯಚಂದ್ರ ಎಂಬುವರು ಆಗಾಗ ಬಂದು ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದರು,ಶನಿವಾರ ಮುಂಜಾನೆ ಇದ್ದಕ್ಕಿದ್ದ ಹಾಗೆ ಜೆಸಿಬಿ ಸಮೇತ ಬಂದವರೆ ನಾನು ಬೆಳೆದಿರುವ ಟಮೋಟೊ ಬೆಳೆ ನಾಶ ಮಾಡಲು ಮುಂದಾಗ ಆಗ ನಾನು ಮಹಿಳೆಯಾಗಿ ಆತನ ಕಾಲು ಹಿಡಿದು ಮೂರು ಗಂಟೆಗಳ ಕಾಲಾವಕಾಶ ನೀಡಿ ಡ್ರಿಪ್ ಪೈಪ್ ಹಾಗು ಸಿಡ್ಸ್ ಕಟ್ಟಿಗೆಗಳನ್ನು ತಗೆದುಕೊಳ್ಳುತ್ತೇನೆ ಎಂದು ಬೇಡಿಕೊಂಡೆ ಯಾವುದನ್ನು ಲೆಕ್ಕಿಸದೆ ಟಮ್ಯಾಟೊ ಬೆಳೆ ಅದಕ್ಕೆ ನಾಟಿ ಮಾಡಿದ ಕಟ್ಟಿಗೆ ಡ್ರಿಪ್ ಪೈಪಗಳನ್ನು ನಾಶ ಮಾಡಿದ್ದಾರೆ ಎಂದು ಅಲವತ್ತು ಕೊಳ್ಳುತ್ತಾಳೆ ಶಾಂತಮ್ಮ
ತಹಶೀಲ್ದಾರ್ ಕೆಂಡಾಮಂಡಲ
ಯಾವುದೇ ಕಾರಣಕ್ಕೂ ರೈತರ ಬೆಳೆ ನಾಶಗೊಳಿಸಬೇಡಿ ರೈತರ ಬೆಳೆ ಮುಗಿದ ಮೇಲೆ ಒತ್ತುವರಿಯಾಗಿರುವ ಜಮೀನನ್ನು ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿಗಳು ಸ್ವಷ್ಟವಾಗಿ ಹೇಳಿದ್ದರೂ ಯಾವುದನ್ನು ಯಾರ ಗಮನಕ್ಕೂ ತಾರದೆ ತೆರವು ಗೊಳಿಸಿರುವ ಬಗ್ಗೆ ನನಗೆ ತೀವ್ರ ಬೆಸರ ವ್ಯಕ್ತಪಡಿಸಿರುವ ತಹಶಿಲ್ದಾರ್ ಶಿರೀನ್ ತಾಜ್ ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮಾನವೀಯತೆ ಇಲ್ಲದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ
ಬಡ ಮಹಿಳೆಯ ಬದುಕು ಕಿತ್ತುಕೊಂಡಿರುವ ಕಂದಾಯ ಇಲಾಖೆ ಅಧಿಕಾರಿಗಳನ್ನು ಈ ಕೂಡಲೆ ಸಸ್ಪೆಂಡ್ ಮಾಡುವಂತೆ ಮಾಜಿ ಶಾಸಕ ವೆಂಕಟಶಿವಾರೆಡ್ದಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿರುತ್ತಾರೆ. ನೆರ್ನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಮಾಜಿಶಾಸಕ ಘಟನಾ ಸ್ಥಳವನ್ನು ವಿಕ್ಷಿಸಿ ಸಂತ್ರಸ್ತ ಮಹಿಳೆಯನ್ನು ಮಾತನಾಡಿ ಸಂತೈಸಿದರು ಅಧಿಕಾರಿಗಳು ಬಡವರ ವಿಚಾರದಲ್ಲಿ ತಾಳ್ಮೆ ಮತ್ತು ಸಹನೆಯಿಂದ ವರ್ತಿಸಬೇಕು ಎಂದ ಅವರು ಇನ್ನೊಂದು ಹದಿನೈದು ದಿನಗಳ ಕಾಲಾವಾಕಶ ನೀಡಿದ್ದರೆ ಅಕಾಶ ಕಳಚಿ ಬಿಳುತ್ತಿರಲಿಲ್ಲ ಎಂದು ಕಂದಾಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಆರ್ಥಿಕ ನೆರವು
ಅಧಿಕಾರಿಗಳ ದೌರ್ಜನ್ಯಕ್ಕೆ ಒಳಗಾಗಿ ಸಾಲ ಸೋಲಮಾಡಿ ಟಮ್ಯಾಟೊ ಬೆಳೆ ಬೆಳೆದು ನಷ್ಟಕ್ಕೆ ಒಳಗಾಗಿರುವ ಮಹಿಳೆಗೆ ಮಾಜಿ ಶಾಸಕರ ತಂಡ ಆರ್ಥಿಕ ನೆರವು ನೀಡಿತು ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಳೇಪೆಟೆಮಂಜುನಾಥರೆಡ್ದಿ,ಪೂಲುಶಿವಾರೆಡ್ದಿ, ಕಲ್ಲೂರುಸುರೇಶ್,ಜಗನ್,ರಾಜ್ ಸೌಂಡ್ ಶ್ರೀನಿವಾಸ್,ಗೊರವಿಮಾಕಲಹಳ್ಳಿಶ್ರೀನಿವಾಸ್, ಗುಮ್ಮಗುಂಟೆ ಮಹೇಶ್ ಶ್ರೀಕಾಂತ್,ಮುಂತಾದವರು ಇದ್ದರು.