ನ್ಯೂಜ್ ಡೆಸ್ಕ್:ಕನ್ನಡದ ಡಿವೈನ್ ಸ್ಟಾರ್ ಕಾಂತಾರ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ‘ದಿ ಪ್ರೈಡ್ ಆಫ್ ಭಾರತ್. “ಛತ್ರಪತಿ ಶಿವಾಜಿ ಮಹಾರಾಜ್” ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಿದೆ. ಸಂದೀಪ್ ಸಿಂಗ್ ನಿರ್ದೇಶನದ ಈ ಚಿತ್ರ ಶಿವಾಜಿ ಮಹಾರಾಜ್ ಜೀವನಾಧಾರಿತ ಚಿತ್ರವಾಗಲಿದೆ ಎಂದು ಚಿತ್ರ ನಿರ್ಮಾಪಕರು ಹೇಳಿದ್ದಾರೆ. ಈ ಚಿತ್ರವು 2027 ಜನವರಿ 21 ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಮದ್ಯೆ ರಿಷಬ್ ಶೆಟ್ಟಿ ಸದ್ಯ ‘ಕಾಂತಾರ-2’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
