ಶ್ರೀನಿವಾಸಪುರ:ಬೆಂಗಳೂರು-ಚನೈ ರಾಷ್ಟ್ರೀಯ ಹೆದ್ದಾರಿಯ ರಾಣಿಪೇಟೆ ಜಿಲ್ಲೆಯ ಸಿಪ್ಕಾಟ್ ಎಮರಾಲ್ಡ್ ಇನ್ ಹೋಟೆಲ್ ಬಳಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶ್ರೀನಿವಾಸಪುರದಿಂದ ಚೆನೈಗೆ ತರಕಾರಿ ಸಾಗಿಸುತ್ತಿದ್ದ ಕ್ಯಾಂಟರ್ ಗೆ ಕರ್ನಾಟಕ ರಾಜ್ಯ ಸಾರಿಗೆ ಬಸ್ಸು ಮತ್ತು ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ನಲ್ಲಿದ್ದ ಶ್ರೀನಿವಾಸಪುರದ ನಾಲ್ವರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿನಲ್ಲಿದ್ದ 40 ಕಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮೃತರನ್ನು ಶ್ರೀನಿವಾಸಪುರ ತಾಲೂಕಿನ ಯಲ್ದೂರಿನ ಶೀಗಪಲ್ಲಿ ಗ್ರಾಮದ ಕ್ಯಾಂಟರ್ ಚಾಲಕ ವಿ. ಮಂಜುನಾಥ್ (31) ಸಹಾಯಕ ಸಿ. ಶಂಕರ (32),ಎನ್.ಸೋಮಶೇಖರನ್(30),ವೆಂಕಟೇಶನಗರದ ವಿ.ಕೃಷ್ಣಪ್ಪ(65) ಎಂದು ಗುರುತಿಸಲಾಗಿದೆ,ತರಕಾರಿಗಳನ್ನು ಸಾಗಿಸಿಕೊಂಡು ಚನೈ ನಗರಕ್ಕೆ ಶೀಗಪಲ್ಲಿ ಗ್ರಾಮದಿಂದ ಪ್ರತಿನಿತ್ಯ ಕ್ಯಾಂಟರ್ ಗಳು ಹೋಗುವುದು ಸಾಮಾನ್ಯ ಅದರಂತೆ ಬುಧವಾರ ಮೃತರಾಗಿರುವರು ಎಂದಿನಂತೆ ಕ್ಯಾಂಟರ್ ನಲ್ಲಿ ತರಕಾರಿ ತುಂಬಿಕೊಂಡು ಚನೈಗೆ ಹೋರಟಿದ್ದಾರೆ ಅಪಘಾತ ಸ್ಥಳದಲ್ಲಿ ಟಿಪ್ಪರ್ ಲಾರಿಯನ್ನು ಹಿಂದಿಕ್ಕುವ ಪ್ರಯತ್ನದಲ್ಲಿ ಮೇಲ್ಮರುವತ್ತೂರಿನ ಆಧಿಪರಾಶಕ್ತಿ ದೇವಸ್ಥಾನದಿಂದ ದರ್ಶನ ಮುಗಿಸಿ ಮುಳಬಾಗಿಲು ಭಕ್ತಾಧಿಗಳನ್ನು ಕರೆದುಕೊಂಡು ಕರ್ನಾಟಕಕ್ಕೆ ವಾಪಸ್ಸು ಬರುತ್ತಿದ್ದ ಕರ್ನಾಟಕ ರಾಜ್ಯ ಸರ್ಕಾರಿ ಬಸ್ ಅತಿಯಾದ ವೇಗದಿಂದ ಬಂದು ಕ್ಯಾಂಟರ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು ಡಿಕ್ಕಿಹೋಡೆದಿದೆ ಇತ್ತ ಪಕದಲ್ಲೆ ಸಾಗುತ್ತಿದ್ದ ಟಿಪ್ಪರ್ ಲಾರಿ ಬಸ್ ಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿಯಾದ ರಭಸಕ್ಕೆ ಬಸ್ ಪಲ್ಟಿಯಾಗಿದೆ.
ಗಾಯಾಳುಗಳನ್ನು ವಾಲಾಜಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಗಂಬೀರ ಸ್ಥಿತಿಯಲ್ಲಿದ್ದ ಏಳು ಪ್ರಯಾಣಿಕರನ್ನು ಹಾಗು ಬಸ್ ಚಾಲಕ ಮುಳಬಾಗಿಲು ತಾಲೂಕು ನೆರ್ನಹಳ್ಳಿಬಾಬು ಬಸ್ ನಲ್ಲಿದ್ದ ಒರ್ವಮಹಿಳೆ ಚಿಂತಾಜನಕ ಪರಿಸ್ಥಿತಿಯಲ್ಲಿದ್ದು ಅವರನ್ನುಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರು ಆಸ್ಪತ್ರೆ ಮತ್ತು ರಾಣಿಪೇಟೆಯ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ
ಗುರುವಾರ ಬೆಳಿಗ್ಗೆ, ರಾಣಿಪೇಟೆ ಜಿಲ್ಲಾಧಿಕಾರಿ ಚಂದ್ರಕಲಾ, ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಶುಕ್ಲಾ ಮತ್ತು ರಾಣಿಪೇಟೆ ಶಾಸಕ ಹಾಗು ತಮಿಳುನಾಡು ಜವಳಿಖಾತೆ ಸಚಿವ ಅರ್.ಗಾಂಧಿ ಅವರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಭೇಟಿ ಮಾಡಿ ವಿಚಾರಿಸಿದ್ದಾರೆ.ಅಪಘಾತ ಪ್ರಕರಣ ಸಿಪ್ ಕಾಟ್ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.