ಶ್ರೀನಿವಾಸಪುರ:-ಸ್ಥಳಿಯರಿಗೆ ಮಾಹಿತಿ ನೀಡದೆ ಪಟ್ಟಣದ ಕೆಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಿರುತ್ತಾರೆ ಎಂದು ಪಟ್ಟಣದ ಜನತೆ ಆರೋಪಿಸಿದ್ದಾರೆ.ಇದನ್ನು ಯಾಕಾಗಿ ಮಾಡಿರುತ್ತಾರೆ ಯಾವ ಇಲಾಖೆಯವರು ಮಾಡಿದ್ದಾರೆ ಎಂಬ ಕನಿಷ್ಠ ಮಾಹಿತಿ ಸ್ಥಳಿಯ ಜನತೆಗೂ ಇಲ್ಲವಾಗಿದೆ.
ನಾಳೆ ಸಾರ್ವಜನಿಕ ಪ್ರಕಟಣೆ ಮುಖ್ಯಾಧಿಖಾರಿ.
ಈ ಬಗ್ಗೆ vcsnewz ಸುದ್ದಿ ತಂಡ ಪುರಸಭೆ ಪ್ರಭಾರಿ ಮುಖ್ಯಾಧಿಖಾರಿ ಶೇಖರೆಡ್ಡಿ ಅವರನ್ನು ಮಾತನಾಡಿ ಸೀಲ್ ಡೌನ್ ವಿಚಾರ ಪ್ರಸ್ತಾಪಿಸಿದ್ದಕ್ಕೆ, ಆರೋಗ್ಯ ಇಲಾಖೆ ನಿರ್ದೇಶನದ ಮೇರೆಗೆ ಪುರಸಭೆ ವತಿಯಿಂದ ತರಾತುರಿಯಲ್ಲಿ ಸೀಲ್ ಡೌನ್ ಮಾಡಿರುತ್ತೇವೆ ನಾಳೆ ವೇಳೆಗೆ ಅಲ್ಲಿ ಮಾಹಿತಿ ಅಂಟಿಸುತ್ತೇವೆ ಎಂದಷ್ಟೆ ಹೇಳಿದರು.ಹೆಚ್ಚು ಜನ ಸೋಂಕಿತರು ಇರುವ ಕಾರಣ ಮೂರ್ನಾಲ್ಕು ರಸ್ತೆ ಬಂದ್ ಮಾಡಿರುವುದು ಎಂದರು.
ಬಂದ್ ಅದ ರಸ್ತೆಗಳು ಯಾವುವು?
ರಾಮಕೃಷ್ಣ ಬಡಾವಣೆಯ ಒಂದನೇ ಅಡ್ದರಸ್ತೆ ಎರಡನೇಯ ಅಡ್ದರಸ್ತೆ ಹಾಗು ಬಾಲಕೀಯರ ಕಾಲೇಜು ಮುಂಬಾಗದ ರಸ್ತೆಗಳಿಗೆ ಜನರ ಒಡಾಟಕ್ಕೆ ನಿರ್ಭಂದ ವಿಧಿಸಿದ್ದಾರೆ.ಯಾವ ಇಲಾಖೆಯವರು ಯಾಕಾಗಿ ನಿರ್ಭಂದ ವಿಧಿಸಿದ್ದಾರೆ ಎಂಬ ಮಾಹಿತಿ ಸಹ ಅಂಟಿಸದೆ ರಸ್ತೆಗೆ ಬೊರ್ ವೆಲ್ ಪೈಪುಗಳನ್ನು ಕಟ್ಟಿ ಒಡಾಟ ಬಂದ್ ಮಾಡಿರುತ್ತಾರೆ.
ಹೊಸ ಮಾರ್ಗಸೂಚಿಯಂತೆ ಸೀಲ್ ಡೌನ್
ಐದಕ್ಕಿಂತ ಹೆಚ್ಚು ಸೋಂಕಿತರು ಇರುವಂತ ಪ್ರದೇಶವನ್ನು ಹೊಸ ಮಾರ್ಗಸೂಚಿಯಂತೆ ಸೀಲ್ ಡೌನ್ ಮಾಡಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ತಿಳಿಸಿರುತ್ತಾರೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಸೋಂಕಿತರು ಈ ಬಡಾವಣೆಯಲ್ಲಿದ್ದಾರೆ ಎನ್ನಲಾಗಿದ್ದು ಅದರಂತೆ ಕೆಲವರು ಹೋಂ ಐಸೋಲೇಷನ್ ಇರುವುದಾಗಿ ಹೇಳಲಾಗಿದೆ.
ಪಟ್ಟಣದಲ್ಲಿ ಸಮರ್ಪಕವಾಗಿ ಸ್ಯಾನಿಟೈರೈಜರ್ ಮಾಡದೆ ನಿರ್ಲಕ್ಷ್ಯ.
ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ ಏರುತ್ತಿದ್ದರು ಪುರಸಭೆ ವತಿಯಿಂದ ಸಮರ್ಪಕವಾಗಿ ಸ್ಯಾನಿಟೈರೈಜರ್ ಮಾಡುತ್ತಿಲ್ಲ ಎನ್ನುತ್ತಾರೆ.ಪಟ್ಟಣದ ಹಳೇ ಬಸ್ ನಿಲ್ದಾಣದ ಸುತ್ತಲೂ ಬೆಳಗಿನ ಹೊತ್ತು ಮಾರುಕಟ್ಟೆಗೆ ತಾಲೂಕಿನ ವಿವಿಧ ಭಾಗಗಳಿಂದ ಜನ ಬರುತ್ತಾರೆ ಇಲ್ಲಿ ಜನದಟ್ಟಣೆ ಇರುತ್ತದೆ ಈ ಭಾಗದಲ್ಲಿ ಪ್ರತಿನಿತ್ಯವೂ ಸ್ಯಾನಿಟೈರೈಜರ್ ಮಾಡಿದ್ದೆ ಆದಲ್ಲಿ ಜನರ ಆರೋಗ್ಯಕ್ಕೆ ರಕ್ಷಣೆ ನೀಡಿದಂತೆ ಎನ್ನುತ್ತಾರೆ.
ವರದಿ:-ಹರ್ಷವರ್ಧನ