ಶ್ರೀನಿವಾಸಪುರ:ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪ್ರಮುಖ ಗುತ್ತಿಗೆದಾರ ರೋಣೂರು ಭಾಗದ ಪ್ರಭಾವಿ ಮುಖಂಡ ಮಾಜಿ ಪಂಚಾಯಿತಿ ಅಧ್ಯಕ್ಷ ರೋಣೂರುಚಂದ್ರಶೇಖರ್ ಶ್ರೀನಿವಾಸಪುರ ಮಂಡಲದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ರೋಣೂರುಚಂದ್ರಶೇಖರ್ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು ಅರಣ್ಯ ತೆರವು ಕಾರ್ಯಚರಣೆ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ನಡೆಸಿದ ಹೋರಾಟಕ್ಕೆ ರೈತರನ್ನು ಒಗ್ಗೂಡಿಸಿ ಸರ್ಕಾರದ ವಿರುದ್ದ ಪರಣಾಮಕಾರಿಯಾಗಿ ಹೋರಾಟಮಾಡಲು ಸಂಸದರಿಗೆ ಸಾತ್ ನೀಡಿದ್ದರು ಈ ಎಲ್ಲಾ ಬೆಳವಣಿಗೆಯ ಹಿನ್ನಲೆಯಲ್ಲಿ ಅವರ ಕ್ರೀಯಾಶಿಲ ರಾಜಕಾರಣವನ್ನು ಗುರುತಿಸಿ ಅವರಿಗೆ ಬಿಜೆಪಿ ತಾಲೂಕು ಅಧ್ಯಕ್ಷ ಪದವಿ ಜವಾಬ್ದಾರಿ ನೀಡಿದೆ ಎನ್ನುತ್ತಾರೆ ರೋಣೂರುಚಂದ್ರು ಅಭಿಮಾನಿಗಳು.
ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ,ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ,ಕೋಲಾರ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ತಾಲೂಕು ಉಪಾಧ್ಯಕ್ಷ ನಲ್ಲಪಲ್ಲಿರೆಡ್ಡೆಪ್ಪ ಹಾಗು ರೈತ ಮೊರ್ಚಾ ಮುಖಂಡ ಚಿರುವುನಹಳ್ಳಿಲಕ್ಷ್ಮಣಗೌಡ ಮುಂತಾದವರು ಇದ್ದರು.
ಪದಗ್ರಹಣ ಕಾರ್ಯಕ್ರಮದಲ್ಲಿ ತಾಲೂಕು ವಕ್ಕಲಿಗರ ಸಂಘದ ವೇಣುಗೋಪಾಲರೆಡ್ಡಿ,ನಿಲಟೂರುಚಿನ್ನಪ್ಪರೆಡ್ಡಿ,ಆನಂದರೆಡ್ಡಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಧಾಧಿಕಾರಿಗಳು ಮತ್ತು ಪ್ರಸನ್ನಕುಮಾರ್ ಅವರು ನೂತನ ಬಿಜೆಪಿ ಅಧ್ಯಕ್ಷ ರೋಣೂರುಚಂದ್ರಶೇಖರ್ ಅವರನ್ನು ಗೌರವಿಸಿ ಸನ್ಮಾನಿಸಿದರು