- ಡಾ.ವಿಷ್ಣುವರ್ಧನ್ ಅಂತ್ಯಸಂಸ್ಕಾರವಾದ
- ಪುಣ್ಯಭೂಮಿ ಇರುವಂತ ಜಾಗವನ್ನು
- ಅಭಿಮಾನ್ ಸ್ಟೂಡಿಯೋ ಮಾಲಿಕರು
- ಮಾರಟ ಮಾಡಲು ಸನ್ನಾಹ
ಬೆಂಗಳೂರು: ಕನ್ನಡ ಸಿನಿಮಾರಂಗದ ಮೇರು ನಟ ಸಾಂಸೃತಿಕ ರಾಯಬಾರಿ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ಸೆಪ್ಟೆಂಬರ್ 18 ಸಂಬ್ರಮದ ಹಬ್ಬ ತಮ್ಮ ಅಭಿಮಾನ ನಟ ಸಾಹಸಸಿಂಹ ಅಭಿನಯಬಾರ್ಗವ ಡಾ.ವಿಷ್ಣುವರ್ಧನ್ ಜನುಮದಿನದ ಆಚರಣೆ ಅದಕ್ಕಾಗಿ ಇಡಿ ರಾಜ್ಯಾದ್ಯಂತ ಇರುವಂತ ಲಕ್ಷಾಂತರ ಜನರು ಡಾ.ವಿಷ್ಣುವರ್ಧನ್ ಅಂತ್ಯಸಂಸ್ಕಾರವಾದ ಪುಣ್ಯಭೂಮಿ ಇರುವಂತ ಅಭಿಮಾನ್ ಸ್ಟೂಡಿಯೊ ಆವರಣಕ್ಕೆ ಆಗಮಿಸಿ ತಮ್ಮ ನೆಚ್ಚಿನ ನಟನಿಗೆ ಅಭಿಮಾನದಿಂದ ಪೂಜೆ ಸಲ್ಲಿಸಿ ಸಂಬ್ರಮದಿಂದ ವಾಪಸ್ಸಾಗುತ್ತಿದ್ದರು ಇಂದು ಸಹ ನೂರಾರು ಮೈಲಿಗಳ ದೂರದೂರುಗಳಿಂದ ಬೆಳ್ಳಂಬೆಳಗ್ಗೆಯೇ ಬಂದು ಸಾಲುಗಟ್ಟಿ ನಿಂತಿದ್ದರಾದರೂ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ನಟ ಬಾಲಣ್ಣ ಅವರ ಮಕ್ಕಳು ತಡೆಯೊಡ್ಡಿದ್ದಾರೆ. ಸ್ಟುಡಿಯೋ ಗೇಟ್ ಬೀಗ ಹಾಕಿ ಸ್ಮಾರಕ ಮೈಸೂರಿನಲ್ಲಿ ಆಗಿದೆ ಹೋಗಿ ಪೂಜೆ ಮಾಡುವಂತೆ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಸ್ಮಾರಕದ ಗೇಟ್ ಬಳಿ ಪ್ರತಿಭಟನೆ ನಡೆಸಿ ಅಭಿಮಾನ್ ಸ್ಟೂಡಿಯೋ ಮಾಲಿಕರ ವಿರುದ್ದ ಅಸಮಧಾನ ವ್ಯಕ್ತಪಡಿದ್ದಾರೆ.
ಡಾ.ವಿಷ್ಣುವರ್ಧನ್ ಜನುಮದಿನದ ಪ್ರಯುಕ್ತ ಸಂಘ ಸಂಸ್ಥೆಗಳು ಅಭಿಮಾನಿಗಳು ರಕ್ತಧಾನ ಶಿಭಿರ ಅನ್ನಧಾನ ಶಿಭಿರ ಆರೋಗ್ಯ ತಪಾಸಣೆ ಶಿಭಿರಗಳನ್ನು ಆಯೋಜಿಸಿ ಪುನಿತರಾಗುತ್ತಿದ್ದರು ಆದರೆ ಈ ಬಾರಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ತಮ್ಮ ಅಭಿಮಾನದ ನಟನ ಪುಣ್ಯಭೂಮಿ ಹೂವ ಇಡಲು ಅಭಿಮಾನ ಸ್ಟೂಡಿಯೋ ಮಾಲಿಕರು ಅಂದರೆ ಹಿರಿಯ ನಟ ದಿವಂಗತ ಬಾಲಕೃಷ್ಣನ ಮೊಮ್ಮಕ್ಕಳು ಅಭಿಮಾನಿಗಳನ್ನು ಸ್ಟೂಡಿಯೊ ಆವರಣಕ್ಕೆ ಅನುಮತಿಸದೆ ಪೂಜೆಗೂ ಅವಕಾಶ ಕಲ್ಪಿಸದೆ ಸಾಕಷ್ಟು ತೊಂದರೆ ಕೊಟ್ಟು ಅಭಿಮಾನಿಗಳನ್ನು ನೋಯಿಸಿದ್ದಾರೆ.
ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಂದ ದೂರಾಗಿ ಬಾರದಲೋಕಕ್ಕೆ ಹೋಗಿ 14 ವರ್ಷ ಕಳೆದರೂ ಇಂದಿಗೂ ಅಭಿಮಾನಿಗಳ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ ಹಾಗಾಗಿ ಅಭಿಮಾನಿಗಳು ಇಂದಿಗೂ ಡಾ.ವಿಷ್ಣು ಪುಣ್ಯಭೂಮಿಗೆ ಆಗಮಿಸುತ್ತಾರೆ.
ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಗಳು
ನೆಚ್ಚಿನ ನಟನಿಗೆ ಹುಟ್ಟು ಹಬ್ಬದ ದಿನ ಗೌರವಿಸೋದಕ್ಕೆ ಆಗಲ್ಲ ಅಂದ್ರೆ ಏನ್ ಅರ್ಥ ಅಭಿಮಾನ ಸ್ಟೂಡಿಯೋ ಜಾಗವನ್ನು ಸರ್ಕಾರ ನಟ ದಿವಂಗತ ಬಾಲಕೃಷ್ಣ ಅವರಿಗೆ ಉಚಿತವಾಗಿ ನೀಡಿದ್ದು ಅವರು ಅದನ್ನು ಅಭಿಮಾನ ಸ್ಟೂಡಿಯೋ ಮಾಡಿದ್ದರು ಈಗ ನಟ ದಿವಂಗತ ಬಾಲಕೃಷ್ಣ ಅವರ ಮೊಮ್ಮಕ್ಕಳು ಸ್ಟೂಡಿಯೋ ಮುಚ್ಚಿ ಜಾಗವನ್ನು ಮಾರಾಟ ಮಾಡುತ್ತಿದ್ದು ವ್ಯವಸ್ಥಿತವಾಗಿ ವ್ಯವಹಾರ ನಡೆಸಿದ್ದಾರೆ ಅಲ್ಲಿದ್ದ ಡಾ.ವಿಷ್ಣುವರ್ಧನ್ ಅಂತ್ಯಸಂಸ್ಕಾರವಾದ ಪುಣ್ಯಭೂಮಿಗೂ ಸಂಚಕಾರ ತರುವ ನಿಟ್ಟಿನಲ್ಲಿ ಅಭಿಮಾನಿಗಳನ್ನು ಸ್ಥಳಕ್ಕೆ ಬಾರದೆ ತಡೆಯೊಡ್ಡುವ ಮೂಲಕ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಡಾ.ವಿಷ್ಣುವರ್ಧನ್ ಸೇನಾ ಸಮಿತಿ ಮುಖ್ಯಸ್ಥರಾದ ವೀರಕಪುತ್ರ ಶ್ರೀನಿವಾಸ್ ಅವರನ್ನು ಪುಣ್ಯಭೂಮಿ ಅವರಣಕ್ಕೆ ಹೋಗದಂತೆ ಕಾನೂನಾತ್ಮಕವಾಗಿ ಆದೇಶ ತಂದಿದ್ದಾರೆ ಈ ನೆಲದ ಭಾಷೆ ಮತ್ತು ಅಭಿಮಾನದ ಪ್ರಜ್ಞಾವಂತಿಗೆ ಹೊಡೆತ ಬಿದ್ದು ಸತ್ತುಹೋಗಿದೀಯಾ ಇದೊಂದು ದುರಂತ ಎಂದು ಅತ್ಯಂತ ನೋವಿನಿಂದ ವೀರಕಪುತ್ರ ಶ್ರೀನಿವಾಸ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದೆಂತ ದುರಂತ ವಿಷ್ಣು ದಾದಾ ಬದುಕಿದ್ದಾಗ್ಲೂ ಅವರ ಜೀವನ ಹೋರಾಟವೆ ಆಗಿತ್ತು,ಅವರ ಸತ್ತ ಮೇಲೂ ಅವರ ಮೇಲೆ ಹಗೆ ಸಾಧಿಸಿದಂತೆ ಕಾಡುತ್ತಿದ್ದಾರೆ,ವಿಷ್ಣುಸೇನಾ ಸಮಿತಿ ವತಿಯಿಂದ ವೀರಕಪುತ್ರ ಶ್ರೀನಿವಾಸ್ ಎಷ್ಟು ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ ಅವರನ್ನು ತಡೆಯುವಂತ ಕೆಲಸ ಆಗಿದೆ ವಿಶ್ವದ ಯಾವುದೇ ನಟನ ಅಭಿಮಾನಿಗಳಿಗೂ ಕೂಡ ಇಂತಹ ಪರಿಸ್ಥಿತಿ ಬಂದಿಲ್ಲ ಎಂದು ಹೆಸರಾಂತ ಆಂಕರ್ ದಿವ್ಯಾಆಲೂರ್ ಹೇಳಿದ್ದಾರೆ.
ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿ ಸಮಸ್ಯೆ ಬಗೆಹರೆಸದ ಸರ್ಕಾರಗಳ ಮತ್ತು ಫಿಲಂ ಛೇಂಬರ್ ವಿರುದ್ದ ವಿಷ್ಣು ಸೇನಾನಿಗಳು ತೀವ್ರವಾಗಿ ಆರೋಪಿಸಿದ್ದಾರೆ.