ಶ್ರೀನಿವಾಸಪುರ: ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀನಿವಾಸಪುರದಾದ್ಯಂತ ಹಳ್ಳಿ ಹಳ್ಳಿಗಳಲ್ಲಿ, ವಾರ್ಡುಗಳಲ್ಲಿ, ಗಲ್ಲಿಗಳು ಸೇರಿದಂತೆ ಎಲ್ಲಾ ರಸ್ತೆಗಳು ಕೆಸರಿಮಯವಾಗಿ ಸರ್ವವೂ ರಾಮಮವಾಗಿತ್ತು ಎತ್ತನೋಡಿದರು ಶ್ರೀರಾಮನ ಚಿತ್ರಹೊತ್ತ ಎತ್ತರದ ಬ್ಯಾನರಗಳು ರಾಜಾಜಿಸುತ್ತ ಇದ್ದರೆ,ಮೈಕುಗಳಲ್ಲಿ ಶ್ರೀರಾಮನ ಹಾಡುಗಳು ಅಬ್ಬರದ ಸಂಗೀತದಲ್ಲಿ ಕೇಳಿಬರುತಿತ್ತು ಒಟ್ಟಾರೆಯಾಗಿ ತಾಲೂಕಿನಾದ್ಯಂತ ರಾಮನಜಪ ನಿರಂತರವಾಗಿತ್ತು.ವಿಶೇಷವಾಗಿ ಗ್ರಾಮೀಣ ಭಾಗದ ಜನರು ಅತ್ಯಂತ ಉತ್ಸಾಹದಿಂದ ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಅನ್ವಯ ಮಹಿಳೆಯರು ತಮ್ಮ ಮನೆಗಳ ಮುಂದೆ ಬಣ್ಣ ಬಣ್ಣದ ಚಿತ್ತಾರದ ರಂಗೋಲಿಗಳನ್ನು ಬಿಡಿಸಿ ಹಬ್ಬದ ಅಡುಗೆ ಮಾಡಿ ಸಡಗರದಿಂದ ರಾಮೋತ್ಸವ ಆಚರಿಸಿದರು.
ಮಧ್ಯಾಹ್ನದ ಹೊತ್ತಿಗೆ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಆಗುತ್ತಿದ್ದಂತೆ ದೀಪಾವಳಿಯನ್ನು ನೆನಪಿಸುವಂತೆ ಪಟಾಕಿ ಸಿಡಿಸಿ ಕೆಸರಿಶಾಲು ಹಾಕಿ ಯುವಕರು ಕುಣಿದು ಕುಪ್ಪಳಿಸಿ ಹರ್ಷೋದ್ಘಾರದೊಂದಿಗೆ ಸಂಬ್ರಮಿಸಿದರು.
ತಾಲೂಕಿನ ಅರಿಕೇರಿಯ ಪುರಾಣ ಪ್ರಸಿದ್ಧ ಶ್ರೀ ಕೋದಂಡರಾಮ ದೇವರ ಮೆರವಣಿಗೆಯನ್ನು ಶ್ರೀನಿವಾಸಪುರ ಪಟ್ಟಣದ ರಥಬೀದಿಗಳಲ್ಲಿ ನಡೆಸಿದ ದೇವಾಲಯದ ಅಧ್ಯಕ್ಷ ಇಂದಿರಾಭವನ್ ರಾಜಣ್ಣ, ದೇವಾಲಯದಲ್ಲಿ ಶ್ರೀ ರಾಮತಾರಕ ಹೋಮ ಹವನ ಮಾಡಿ ಅನ್ನ ಸಂತರ್ಪಣೆ ನಡೆಸಿದರು. ಯಲ್ದೂರಿನ ಐತಿಹಾಸಿಕ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಊರಿನ ಜನತೆ ವಿಶೇಷ ಪೂಜೆ ಆಯೋಜಿಸಿ ಸಿಹಿ ನೀಡುವ ಮೂಲಕ ಸಂಭ್ರಮಿಸಿದರು.ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಬೃಹತ್ ಟಿವಿ ಪರದೆ ಇಟ್ಟು ಪ್ರದರ್ಶಿಸಲಾಯಿತು ಸಂಜೆ ವಾಸವಿ ದೇವಾಲಯದಲ್ಲಿ ಶ್ರೀರಾಮರ ಪಟ್ಟಾಭಿಷೇಕ ಆಯೋಜಿಸಲಾಗಿತ್ತು.ವಾಸವಿ ಯುವಕ ಮಂಡಳಿಯವರು ಹೆಸರಬೆಳೆ ಪಾನಕ ಹಂಚಿವ ಮೂಲಕ ರಾಮನವಮಿಯನ್ನು ನೆನಪಿಸಿದರು,ಎಂ.ಜಿ.ರಸ್ತೆಯ ತರಕಾರಿ ಮಾರುಕಟ್ಟೆ ವೃತ್ತದಲ್ಲಿ ಬಾಳೆಯಲೆ ಸಿದ್ದಾರೆಡ್ಡಿ ಹಾಗು ಬಾಲಜಿ ಸ್ನೇಹಿತರು ಅನ್ನಸಂತರ್ಪಣೆ ನಡೆಸಿದರೆ, ನೇತಾಜಿ ಟ್ರಸ್ಟ್ ವತಿಯಿಂದ ಸಿಹಿ ಹಂಚಿ ಅಯೋಧ್ಯೆ ಬಾಲರಾಮನ ಪ್ರತಿಷ್ಟಾಪನೆಯನ್ನು ಸಂಭ್ರಮಿಸಿದರು.ವಲ್ಲಭಾಯ್ ರಸ್ತೆಯ ಶ್ರೀ ಕೋದಂಡರಾಮ ದೇವರ ಆಲಯದಲ್ಲಿ ವಿಶೇಷ ಅಲಂಕಾರ ಪೂಜೆ ಏರ್ಪಡಿಸಲಾಗಿತ್ತು, ಡಿ.ವಿ.ಗುಂಡಪ್ಪವೃತ್ತದಲ್ಲಿ ದೊಡ್ದಮಟ್ಟದಲ್ಲಿ ಯುವಕರ ಬಳಗ ಸಂಭ್ರಮಾಚರಣೆ ನಡೆಸಿ ಅನ್ನ ಸಂಪರ್ಪಣೆ ಮಾಡಿದರು.ನಲ್ಲಪಲ್ಲಿ ಹೊಸಬಡಾವಣೆಯಲ್ಲಿ ನೂತನ ರಾಮಭಜನಾ ಮಂದಿರ ಪ್ರಾರಂಭಿಸಲಾಯಿತು. ಚಿರುವನಹಳ್ಳಿಯ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಊರ ಜನರು ಸೇರಿ ಹಬ್ಬ ಅಚರಿಸಿ ಸಂಭ್ರಮಿಸಿದರೆ.ಶಂಕರಮಠ ವೃತ್ತದಲ್ಲಿರುವ ಬಳೆ ಆಂಜನೇಯ ದೇಗುಲದಲ್ಲಿ ವೀಶೇಷ ವಿದ್ಯತ್ ದೀಪಾಲಂಕಾರ ಮಾಡಲಾಗಿದ್ದು ಮಹಿಳೆಯರು ಸಂಜೆ ಮಣ್ಣಿನ ಹಣತೆಗಳನ್ನು ಬೆಳಗಿಸಿ ಸಂಭ್ರಮ ಪಟ್ಟರು.ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು.ಕೊಟ್ರಗೂಳಿ ಗ್ರಾಮದ ಮಹಿಳೆಯರು ಬೆಳಗಿನಿಂದಲೆ ಊರೆಲ್ಲ ಸಾರಿಸಿ ರಂಗವಲ್ಲಿಗಳನ್ನು ಹಾಕಿ ಗ್ರಾಮದಲ್ಲಿ ಹಬ್ಬವನ್ನು ನೆನಪಿಸುವಂತ ವಾತವರಣ ಸೃಷ್ಟಿಸಿ ಶ್ರೀರಾಮನ ಫೋಟೊದೊಂದಿಗೆ ಮಹಿಳೆಯರು ಕಲಶ ಹೊತ್ತು ಊರಿನಲ್ಲಿ ಮೆರವಣಿಗೆ ನಡೆಸಿದರು.
ಸಂಜೆ ಸಂಸದರ ಟೆಂಪಲ್ ರನ್
ನಿಲಟೂರು ಗ್ರಾಮದ ಶ್ರೀವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ಸೀತಾ ರಾಮರ ಕಲ್ಯಾಣೋತ್ಸವ ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಗ್ರಾಮದ ಮುಖಂಡರಾದ ನಿಲಟೂರುಚಿನ್ನಪ್ಪರೆಡ್ಡಿ,ಚಂದ್ರಶೇಖರೆಡ್ಡಿ ಮುಂತಾದವರು ಭಾಗವಹಿಸಿದ್ದರು.
ಕಛೇರಿಗಳಲ್ಲಿ ಸಿಹಿ ಹಂಚಿಕೊಂಡ ಉದ್ಯೋಗಿಗಳು
ರಾಜ್ಯ ಸರ್ಕಾರ ರಜಾ ಘೋಷಿಸದ ಹಿನ್ನಲೆಯಲ್ಲಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸಿದ ಉದ್ಯೋಗಿಗಳು ಅಧಿಕಾರಿಗಳು ರಾಮಮಂದಿರ ಪ್ರಾಣಪ್ರತಿಷ್ಠಾಪನೆಯಾದ ಘಳಿಗೆಯಲ್ಲಿ ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಶ್ರೀ ಮುದ್ರಾ ಪತಂಜಲಿ ಯೋಗ ಶಿಕ್ಷಣ ಸಮಿತಿ ಪದಾಧಿಕಾರಿಗಳು ಬೆಳ್ಳಂ ಬೆಳಿಗ್ಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶ್ರೀರಾಮನ ಫೋಟೋ ಹಿಡಿದು ರಾಮಭಜನೆ ಯಾತ್ರೆ ನಡೆಸಿದರು.
ಡಿಪಾವಳಿಯ ನೆನೆಪಿಸಿದ ರಾಮ ದೀಪೋತ್ಸವ
ರಾಮ ಮಂದಿರ ಉದ್ಘಾಟನೆಯ ಶುಭ ಸಂದರ್ಭದಲ್ಲಿ ರಾಮ ಜ್ಯೋತಿಗಳನ್ನು ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಹಿನ್ನಲೆಯಲ್ಲಿ ಸೋಮವಾರ ಸಂಜೆ ತಾಲೂಕಿನಾದ್ಯಂತ ಮನೆ ಮನೆಗಳಲ್ಲೂ ರಾಮ ದೀಪೋತ್ಸವದ ಸಂಭ್ರಮ ಮನೆಮಾಡಿತ್ತು. ಬೆಳಗಿನಿಂದ ಪುಜೆ ಹೋಮಗಳಲ್ಲಿ ತಲ್ಲಿನರಾಗಿದ್ದ ಜನತೆ ರಾಮ ಮಂದಿರ ಉದ್ಘಾಟನೆಯ ಐತಿಹಾಸಿಕ ದಿನವನ್ನು ಸ್ಮರಣೀಯವಾಗಿಸಲು ಪ್ರತಿ ಮನೆಯಲ್ಲೂ ರಾಮ ಜ್ಯೋತಿ ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆಯ ಮೇರೆಗೆ ದೇವಾಲಯಗಳು,ಸಾರ್ವಜನಿಕ ವೃತ್ತಗಳು ಭಜನೆ ಮನೆಗಳು ಸೇರಿದಂತೆ ಮನೆಗಳ ಮುಂಬಾಗದಲ್ಲಿ ಜನರು ಹಣತೆಯ ದೀಪಗಳನ್ನು ಬೆಳಗಿಸಿ ರಾಮನ ಸ್ಮರಣೆ ಮಾಡಿದರು.