ಶ್ರೀನಿವಾಸಪುರ :ಮಹಾನ್ ವ್ಯಕ್ತಿಗಳ ತತ್ವ-ಆದರ್ಶಗಳು ಸರ್ವಕಾಲಿಕವಾಗಿದ್ದು ಅದನ್ನು ಜನರು ಜೀವನದಲ್ಲಿ ಅಳವಡಿಸಿಕೊಂಡಾಗ, ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ತಹಶೀಲ್ದಾರ್ ಸುದೀಂದ್ರ ಹೇಳಿದರು ಅವರು ತಹಶೀಲ್ದಾರ್ ಕಛೇರಿ ಆವರಣದಲ್ಲಿ Srinivaspur ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ಸವಿತಾ ಮಹರ್ಷಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು.
ಪ್ರತಿಯೊಬ್ಬರು ತಮ್ಮ ಕುಲ ಕಸುಬುಗಳಿಗೆ ಆದ್ಯತೆ ನೀಡುವುದರೊಂದಿಗೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷ ಣದಿಂದ ಸ್ವಾವಲಂಬನೆ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದೆ.ಜೊತೆಗೆ ಸರ್ಕಾರ ಸೌಲಭ್ಯಗಳನ್ನು ಬಳಸಿಕೊಂಡು ಅಭಿವೃದ್ಧಿಯಾಗುವಂತೆ ತಿಳಿಸಿದರು.

ಕಾರ್ಯಕ್ರಮಕ್ಕೂ ಮುಂಚಿತವಾಗಿ ಕಚೇರಿ ಮುಂಭಾಗದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಸವಿತಾ ಸಮಾಜದ ಬಂಧುಗಳೊಂದಿಗೆ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಆರ್.ಶ್ರೀನಿವಾಸ್, ಸಮುದಾಯದ ಮುಖಂಡರಾದ ಶ್ರೀರಾಮಪ್ಪ, ಕೆ.ಆರ್.ಮುನಿರಾಜು, ಕೆ.ಸುಂದರ್, ಕೆ.ಗೋವಿಂದು,ಮಂಜುನಾಥ್, ಅರಕೇರಿ ಜಗನ್ನಾಥ್,
ಮಂಜುನಾಥ್, ರಾಮಕೃಷ್ಣ, ರಾಮಪ್ಪ, ರಾಮದಾಸು,ನಟರಾಜು, ಮುನಿರಾಜು, ವೆಂಕಟೇಶ್, ಅರಕೇರಿಶಿವರಾಜು, ರಮೇಶ್ ಬಾಬು,ನರಸಿಂಹ,ಕೆ.ನಾಗರಾಜು, ಕೆ.ಗಂಗಾದರ್, ಎಚ್.ಕೆ.ರಾಜೇಶ್, ಶ್ರೀರಾಮಯ್ಯ, ನಟರಾಜು, ನಾರಾಯಣಸ್ವಾಮಿ,ರಾಜಶೇಖರ ಮುಂತಾದವರು ಇದ್ದರು.
https://www.vcsnewz.com/ambigara-chowdaryas-philosophy-is-still-followed-by-the-current/