ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ವೃತ್ತದಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ಸೇರಿದ ಎ ಟಿ ಎಂ ನಲ್ಲಿ ಕಳ್ಳತನವಾಗಿದೆ.
ಮಂಗಳವಾರ ಮದ್ಯರಾತ್ರಿ ನಡೆದಿರುವ ಕೃತ್ಯದಲ್ಲಿ ಎಟಿಎಂ ಸಿ ಸಿ ಕ್ಯಾಮೆರಾ ಗಳಿಗೆ ಕಪ್ಪು ಬಣ್ಣ ಬಳಿದು ನಂತರ ಗ್ಯಾಸ್ ಕಟರಗಳಿಂದ ಎ.ಟಿ.ಎಂ ಯಂತ್ರದ ಬಾಗಿಲುಗಳನ್ನು ಕತ್ತರಿಸಿ ಹಣ ಕಳ್ಳತನ ಮಾಡಿರುತ್ತಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂ ನಲ್ಲಿ ಸುಮಾರು ಸುಮಾರು 11 ಲಕ್ಷಕ್ಕೂ ಅಧಿಕ ಹಣವನ್ನು ಕಳ್ಳರು ತಗೆದುಕೊಂಡು ಹೋಗಿದ್ದಾರೆ.
ಚಿಂತಾಮಣಿ ವೃತ್ತ ಪಟ್ಟಣದ ಮಧ್ಯಬಾಗದಲ್ಲಿದ್ದು ತಡರಾತ್ರಿ ಕಳೆದರು ಜನ ಸಂಚಾರ ಇರುತ್ತದೆ ಎ ಟಿ ಎಂ ಕಟ್ಟಡಕ್ಕೆ ಹೊಂದಿಕೊಂಡಂತೆ ಮನೆಗಳು ಇವೆ,ಜೊತೆಗೆ ಈ ವೃತ್ತದಲ್ಲಿ ಪೋಲಿಸ್ ಇಲಾಖೆ ವತಿಯಿಂದ ದೊಡ್ಡ ಗಾತ್ರದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಆದರೂ ಎಟಿಎಂ ಕಳ್ಳತನವಾಗಿರುವ ಬಗ್ಗೆ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿರುತ್ತಾರೆ.ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಕಳೆದ ಎರಡು-ಮೂರು ತಿಂಗಳ ಹಿಂದೆ ಚಿಂತಾಮಣಿ ನಗರದಲ್ಲೂ ಇದೆ ರೀತಿ ಒಂದೆ ರಾತ್ರಿಯಲ್ಲಿ ಎರಡು ಕಡೆ ಎಟಿಂ ದರೋಡೆ ಮಾಡಿರುವ ಘಟನೆ ನಡೆದಿರುತ್ತದೆ.