ನ್ಯೂಜ್ ಡೆಸ್ಕ್: ಬೆಂಗಳೂರು ವಕೀಲರ ಸಹಕಾರ ಸಂಘದ ಅಧ್ಯಕ್ಷರಾಗಿ ತಾಲೂಕಿನ ತಿನ್ನಲಿ ಗ್ರಾಮದ ಟಿ.ಎನ್.ಶಂಕರ್ ಆಯ್ಕೆಯಾಗಿದ್ದಾರೆ.ಬೆಂಗಳೂರು ವಕೀಲರ ಸಹಕಾರ ಸಂಘದ ನಿರ್ದೇಶಕರಾಗಿ ಎರಡನೆ ಬಾರಿಗೆ ಆಯ್ಕೆಯಾಗಿದ್ದ ಅವರು ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದು ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ.
ಟಿ.ಎನ್.ಶಂಕರ್ ವಕೀಲರ ಸಹಕಾರ ಸಂಘದ ಅಧ್ಯಕ್ಷರಾಗಿ ಅಯ್ಕೆಯಾಗಿರುವುದಕ್ಕೆ ಖುಷಿ ಹಾಗು ಹೆಮ್ಮೆ ತರುವಂತ ವಿಷಯವಾಗಿದೆ ಎಂದು ಯಲ್ದೂರು ನ್ಯಾಷನಲ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಬೆಂಗಳೂರಿನಲ್ಲಿ ಉದ್ಯಮಿ ಆಗಿರುವ ಲಕ್ಷ್ಮೀಸಾಗರ ಲೋಕನಾಥಗೌಡ ಶುಭಹಾರೈಸಿದ್ದಾರೆ. ಕೋಲಾರ ಹಾಲು ಒಕ್ಕೂಟದ ಮುಳಬಾಗಿಲು ನಿರ್ದೇಶಕ ಹಾಗು ಹೀರಿಯ ವಕೀಲ ಕಾಡೇನಹಳ್ಳಿ ನಾಗರಾಜಗೌಡ ವಕೀಲರ ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಶುಭಕೋರಿದ್ದಾರೆ.