ಸಿನಿಡೆಸ್ಕ್:ಸಿನಿಮಾ ರಂಗವೆ ಹಾಗೆ ನಟಿ-ನಟರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಸಾಮಾನ್ಯ ಇಂದು ಜೊತೆ ಜೊತೆಯಲ್ಲಿ ಓಡಾಡ, ಮರು ದಿನವೇ ವಿಚ್ಛೇದನ ಮಾಮೂಲಿಯಂಬಂತಾಗಿದೆ ಕೆಲವರು ವಯಸ್ಸಲ್ಲದ ವಯಸ್ಸಿನಲ್ಲಿ ಮದುವೆಯಾಗಿ ಎಲ್ಲರನ್ನು ನಿಬ್ಬೇರಗಾಗಿಸುತ್ತಾರೆ. ಟ್ರೋಲಿಗರ ಬಾಯಿಗೆ ಆಹಾರವೂ ಆಗುತ್ತಾರೆ. ಇದಕ್ಕೆ ಸ್ಪಷ್ಟ ಉದಾಃರಣೆ ಎಂದರೆ ಮಲಯಾಳಂ ಕಿರುತೆರೆ ನಟ ಕ್ರಿಸ್ ವೇಣುಗೋಪಾಲ್ ಮತ್ತು ನಟಿ ದಿವ್ಯಾ ಶ್ರೀಧರ್ ಮದುವೆಯಾದ್ದಾರೆ.
ಮೊನ್ನೆಯಷ್ಟೇ ಗುರುವಾಯೂರು ದೇವಸ್ಥಾನದಲ್ಲಿ ಕ್ರಿಸ್ ವೇಣುಗೋಪಾಲ್ ಮತ್ತು ದಿವ್ಯಾ ಶ್ರೀಧರ್ ಸಪ್ತಪದಿಯನ್ನು ತುಳಿದು ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ. ಇವರಿಬ್ಬರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹದ್ದು ಮೀರಿದ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಇಬ್ಬರ ನಡುವಿನ ವಯಸ್ಸಿನ ಅಂತರ ಒಂದು ಕಾರಣ ಅನ್ನುವುದಾದರೆ ಹಣ, ಅಂತಸ್ತು ಮತ್ತು ದೈಹಿಕ ಸುಖ ಎಂದು ಕಾರಣ ನೀಡಿ ಚರ್ಚೆ ಮಾಡುತ್ತಿದ್ದಾರೆ.
ಮಲಯಾಳಂ ಕಿರುತೆರೆಯಲ್ಲಿ ಖಳನಾಯಕಿಯ ಪಾತ್ರದಲ್ಲಿ ಖ್ಯಾತರಾದ ದಿವ್ಯಾಶ್ರೀಧರ್ ತಮ್ಮದೇ ಛಾಪು ಮೂಡಿಸಿರುವ ಅಂದಗಾತಿ ಆಕೆ ತಮ್ಮ ಮೊದಲ ಪತಿಯಿಂದ ಇಬ್ಬರು ಮಕ್ಕಳನ್ನು ಪಡೆದಿದ್ದು ಕಾರಣಾಂತರಗಳಿಂದ ಪತಿಯಿಂದ ದೂರವಾಗಿದ್ದ ದಿವ್ಯಾ ಶ್ರೀಧರ್ ಅವರು ಕ್ರಿಸ್ ವೇಣುಗೋಪಾಲ್ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದಾರೆ.
ಆಧ್ಯಾತ್ಮಿಕ ಗುರುವಿನೊಂದಿಗೆ ಸ್ನೇಹ
ಕ್ರಿಸ್ ವೇಣುಗೋಪಾಲ್ ಮಲಯಾಳಂ ಕಿರುತೆರೆ ನಟ ತಮ್ಮ ಮೊದಲ ಪತ್ನಿಯಿಂದ ಮಾನಸಿಕ ಕಿರುಕುಳ ಅನುಭವಿಸಿರುವ ಬಗ್ಗೆ ಸ್ವತಃ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದ ಅವರು 2019ರಲ್ಲಿ ಮೊದಲ ಪತ್ನಿಯಿಂದ ದೂರವಾಗಿ ವಿಚ್ಛೇದನವನ್ನು ಪಡೆದಿದ್ದರು ನಂತರ ಕ್ರಿಸ್ ವೇಣುಗೋಪಾಲ್ ಆಧ್ಯಾತ್ಮಿಕದತ್ತ ಮುಖಮಾಡಿದ್ದ ಅವರು ಆದ್ಯಾತ್ಮಿಕ ಗುರು ಎಂದು ಖ್ಯಾತರಾಗಿ ಮತ್ತು ಕಿರುತೆರೆಯಲ್ಲೂ ನಟರಾಗಿ ಮುಂದುವರೆದಿದ್ದಾರೆ ಈಗ ದಿವ್ಯಾ ಶ್ರೀಧರ್ ಅವರನ್ನು ಪ್ರೀತಿಸಿ ಮದುವೆಯಾದ ಬೆನ್ನಲ್ಲೇ ಅನೇಕರು ದಿವ್ಯಾ ಶ್ರೀಧರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಕೆಟ್ಟ-ಕೊಳಕು ಪದಗಳಿಂದ ದಿವ್ಯಾ ಶ್ರೀಧರ್ ಅವರನ್ನು ನಿಂದಿಸುತ್ತಿದ್ದಾರೆ. ತಮ್ಮ ಲೈಂಗಿಕ ವಾಂಛನೆಗಳನ್ನು ಈಡೇರಿಸಿಕೊಳ್ಳಲು 65 ವರ್ಷದ ಮುದುಕನೆ ಬೇಕಾಯಿತ ಎಂದು ಹದ್ದು ಮೀರಿ ಟೀಕಿಸಿದ್ದಾರೆ ದಿವ್ಯಾ ಇನ್ಸ್ಟಾಗ್ರಾಮ್ ಅಕೌಂಟ್ಗೆ ಬಂದು ಕಾಮೆಂಟ್ ಕೂಡ ಮಾಡುತ್ತಿದ್ದಾರೆ.
ಸಹಜವಾಗಿ ವ್ಯಕ್ತವಾದ ಈ ಟೀಕೆ ಟಿಪ್ಪಣಿ ಮತ್ತು ಟ್ರೋಲ್ಗಳಿಂದ ಕೊಂಚ ನೊಂದವರಂತೆ ಮಾತನಾಡಿರುವ ದಿವ್ಯಾಶ್ರೀಧರ್ ತಮ್ಮ ಕುರಿತು ಜಾಲತಾಣಗಳಲ್ಲಿ ನಡೆಯುತ್ತಿರುವ ಕೆಟ್ಟ ಟ್ರೋಲ್ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಮದುವೆ ಕೇವಲ ಹಾಸಿಗೆ ಮೇಲೆ ಎರಡು ದೇಹಗಳ ನಡೆಯುವ ಪ್ರಕ್ರಿಯೆಗಲ್ಲ ಅದರಾಚಗಿನ ಎರಡು ಆತ್ಮಗಳ ಮಿಲನ ಎಂದಿದ್ದಾರೆ.
ಮಕ್ಕಳ ಭವಿಷ್ಯಕ್ಕಾಗಿ ಮದುವೆಯಾದೆ
ನನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಾಗು ನನ್ನ ಏಕಾಂಗಿತನವನ್ನು ದೂರ ಮಾಡಲು ಮದುವೆಯಾಗಿರುವುದಾಗಿ ದಿವ್ಯಾ ಶ್ರೀಧರ್ ಹೇಳಿಕೊಂಡಿದ್ದಾರೆ. ದಾಂಪತ್ಯದಲ್ಲಿ ಹೆಣ್ಣಿನ ಮನಸ್ಸು ಸೆಕ್ಯೂರಿಟಿ ಬಯಸುತ್ತದೆ, ಗಂಡನ ಆಸರೆ ಬಯಸುತ್ತದೆ ಸಮಸ್ಯೆ ಬಂದಾಗ ಆಕೆಯ ಮನಸು ಅನಾಮತ್ತಾಗಿ ಗಂಡನತ್ತ ಹೊರಳುತ್ತದೆ ಎನ್ನುವ ದಿವ್ಯಾಶ್ರೀಧರ್ ಜನ ಟ್ರೋಲ್ ಮಾಡುತ್ತಾರೆ ಎಂದು ನಾನು ನಿರೀಕ್ಷೆ ಮಾಡಿದ್ದೆ, ಆದರೆ ಇಷ್ಟೊಂದು ಕೀಳಾಗಿ ನಮ್ಮ ವಿರುದ್ದ ಮಾತನಾಡುತ್ತಾರೆ ಅಂದುಕೊಂಡಿರಲಿಲ್ಲ ಎಂದಿದ್ದಾರೆ. ವಯಸ್ಸಾದ ನಂತರ ಮದುವೆಯಾಗುವುದು ತಪ್ಪಾ ಎಂದು ದಿವ್ಯಾ ಶ್ರೀಧರ್ ಪ್ರಶ್ನೆ ಕೇಳಿದ್ದಾರೆ. ಕ್ರಿಸ್ ಅವರ ವಯಸ್ಸು 67 ಅಲ್ಲ ಬದಲಿಗೆ 49 ಎಂದು ಸ್ಪಷ್ಟೀಕರಣವನ್ನು ನೀಡಿ ನನಗೆ ಈಗ 40ರ ಪ್ರಾಯ ಎಂದು ಕೂಡ ಹೇಳಿದ್ದಾರೆ
ಸದ್ಯಕ್ಕೆ ದಿವ್ಯಾ ಶ್ರೀಧರ್ ಅವರ ಈ ಖಂಡ ತುಂಡ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ದಿವ್ಯಾ ಶ್ರೀಧರ್ ಅವರ ಈ ನೇರ ಉತ್ತರವನ್ನು ಅನೇಕರು ಮೆಚ್ಚಿಕೊಂಡು ಟ್ರೋಲ್ಗಳಿಗೆಲ್ಲ ಹೆದರದೆ ನೆಮ್ಮದಿಯಾಗಿ ಸಾಂಸಾರಿಕ ಜೀವನ ಮಾಡುವಲ್ಲಿ ಗಮನ ಹರಿಸಿ ಎಂದು ಶುಭಹಾರೈಸಿದ್ದಾರೆ. ಕ್ರಿಸ್ ವೇಣುಗೋಪಾಲ್ ಪರಿಚಯ ಕ್ರಿಸ್ ವೇಣುಗೋಪಾಲನ್ ಬಹುಮುಖ ಪ್ರತಿಭೆ ಸೃಜನಶೀಲತೆಯ ವ್ಯಕ್ತಿತ್ವ ಕ್ರಿಸ್ ವೇಣುಗೋಪಾಲ್ ಅವರ ಶಿಕ್ಷಣ ವಿಭಿನ್ನವಾಗಿದೆ.
ಅವರು ಸಿವಿಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದರು ಮತ್ತು ನಂತರ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಮ್ಯಾನೇಜ್ಮೆಂಟ್ನಲ್ಲಿ ಡಿಪ್ಲೊಮಾ ಪಡೆದರು. ಕ್ರಿಸ್ ಅಪ್ಲೈಡ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದು, ಇಂಡಿಯನ್ ಅಸೋಸಿಯೇಶನ್ ಆಫ್ ಕ್ಲಿನಿಕಲ್ ಮತ್ತು ಅಕಾಡೆಮಿಕ್ ಹಿಪ್ನಾಸಿಸ್ನ ಸದಸ್ಯರಾಗಿದ್ದಾರೆ
ಬಹು ಭಾಷಾ ತಜ್ಞ
ಇಂಗ್ಲಿಷ್, ಹಿಂದಿ, ಮಲಯಾಳಂ, ಉರ್ದು ಮತ್ತು ತಮಿಳು ಬಹು ಭಾಷೆಗಳಲ್ಲಿ ಅವರ ನಿರರ್ಗಳತೆ ಅವರ ವೃತ್ತಿಜೀವನದುದ್ದಕ್ಕೂ ವೈವಿಧ್ಯಮಯ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಿತು.
ಉತ್ಸಾಹ ತುಂಬಿದ ವೃತ್ತಿ
ಕ್ರಿಸ್ ವೇಣುಗೋಪಾಲ್ ಅವರ ವೃತ್ತಿಜೀವನವು ಅವರ ಪ್ರತಿಭೆ ಮತ್ತು ಜ್ಞಾನದ ಮಿಶ್ರಣವಾಗಿದೆ. ಅವರು ರೇಡಿಯೋ ಜಾಕಿಯಾಗಿ ಜೀವನ ಪ್ರಾರಂಭಿಸಿದ್ದು,ಅವರ ಧ್ವನಿಯು ಅದರ ಮನರಂಜನೆ ಮತ್ತು ಆಕರ್ಷಕ ಕಥೆ ಹೇಳುವಿಕೆಗಾಗಿ ಜನಪ್ರಿಯವಾಯಿತು. ಹನ್ನೊಂದು ವರ್ಷಗಳ ಕಾಲ, ಅವರು ರೇಡಿಯೊದಲ್ಲಿ ತಮ್ಮದೇ ಆದ ಹೆಸರನ್ನು ಮಾಡಿದರು, ಪ್ರೋಗ್ರಾಮಿಂಗ್ ಹೆಡ್ ಆಗಿ ಕೆಲಸ ಮಾಡಿದರು ಮತ್ತು ಮೂರು ಭಾಷೆಗಳಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು.