ಕೆಜಿಎಫ್ KGF ತಾಲೂಕಿನಲ್ಲಿ ಅಕ್ರಮವಾಗಿ ಜಮೀನು ಮಂಜೂರಾತಿ ಕುರಿತಾಗಿ ಅಧಿಕಾರಿಗಳ ವಿರುದ್ದ ಲೋಕಾಯುಕ್ತದಲ್ಲಿ ದೂರು ದಾಖಲು
ಬಂಗಾರಪೇಟೆ: ಅಕ್ರಮವಾಗಿ ಗೋಮಾಳ ಜಮೀನು ಮಂಜೂರು ಮಾಡಿದ್ದ ಆರೋಪದ ಮೇಲೆ ಬಂಗಾರಪೇಟೆ ಪಟ್ಟಣದ ಹಕ್ಕು ದಾಖಲೆ ಶಿರಸ್ತೇದಾರ್ ಕೆ.ಸಿ.ಸುರೇಶ್ ರನ್ನು ಪ್ರಾದೇಶಿಕ ಆಯುಕ್ತರು ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ.
ಕೆಜಿಎಫ್KGF ತಾಲೂಕಿನಲ್ಲಿ ಒಟ್ಟು 523 ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿರುವ ಬಗ್ಗೆ ಜನವರಿ ೧ ರಂದು ಅಂದು ಕೆಜಿಎಫ್ ತಾಲೂಕು ಕಚೇರಿ ಉಪ ತಹಸೀಲ್ದಾರ್ ಆಗಿದ್ದ ಕೆ.ಸಿ.ಸುರೇಶ್ ಸೇರಿದಂತೆ ಇತರರ ವಿರುದ್ದ ಕೋಲಾರ ಲೋಕಾಯುಕ್ತ ಪೊಲೀಸರಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ನಂತರ ಎಲ್ಲರನ್ನೂ ಸೇವೆಯಿಂದ ಅಮಾನತ್ತು ಮಾಡುವಂತೆ ಜಿಲ್ಲಾ ಲೋಕಾಯುಕ್ತ ಎಸ್ಪಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಪ್ರಾಥಮಿಕ ತನಿಖೆಯನ್ನು ಕೈಗೊಂಡ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ರವರು ಫೆ.4 ರಂದು 2ನೇ ಆರೋಪಿ ಎಂದು ಗುರುತಿಸಿದ್ದ ಹಾಲಿ ಈಗ ಬಂಗಾರಪೇಟೆ ತಾಲ್ಲೂಕು ಕಚೇರಿಯಲ್ಲಿ ಹಕ್ಕು ದಾಖಲೆ ಶಿರಸ್ತೇಧಾರ್ ಆಗಿ ಕೆಲಸ ಮಾಡುತ್ತಿರುವ ಕೆ.ಸಿ.ಸುರೇಶ್ ಇವರು ತನಿಖೆಗೆ ಅಡ್ಡಿ ಉಂಟು ಮಾಡುವ ಹಾಗೂ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಸಾಧ್ಯತೆ ಇರುವುವ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತ್ತು ಮಾಡುವುದು ಸೂಕ್ತ ಎಂದು ತೀರ್ಮಾನಿಸಿ ಕ್ರಮ ಕೈಗೊಂಡಿದ್ದಾರೆ.