ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ಶಿವಾಲಯಗಳಲ್ಲಿ ಶಿವರಾತ್ರಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.ಮಹಾಶಿವರಾತ್ರಿ ಅಂಗವಾಗಿ ತಾಲೂಕಿನ ಶಿವನ ದೇವಾಲಯಗಳಲ್ಲಿ ಇಂದು ವಿಶೇಷ ಪೂಜೆ ಹೋಮಗಳು ರುದ್ರಪಾರಾಯಣ,ಶಿವನಾಮಸ್ತುತಿ ಸೇರಿದಂತೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನೆರವೇರಿತು.ಭಕ್ತರು ಸರದಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು. ಪಟ್ಟಣದ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಶಿವನಿಗೆ ರುದ್ರಾಭಿಷೇಕ ಆಯೋಜಿಸಲಾಗಿತ್ತು. ಕಲ್ಲೂರಿನ ಶ್ರೀ ಸಹಮಾನೇಶ್ವರ ದೇವಾಲಯದಲ್ಲಿನ ವಿಶೇಷ ಶಿವಲಿಂಗಕ್ಕೆ ಅಭಿಷೇಕ ಪೂಜೆ ಮಾಡಿದ್ದರು.ಪಟ್ಟಣದ ಶ್ರೀನಗರೇಶ್ವರ ದೇವಾಲದಲ್ಲಿ ರುದ್ರಾಭಿಷೇಕ ಯಾಮದ ಪೂಜೆ ಆಯೋಜಿಸಿದ್ದರು.ಯಲ್ದೂರಿನ ಶ್ರೀ ಶಂಕರನಾರಯಣ ದೇವಾಲಯದಲ್ಲಿ ಹಾಗು ರಾಯಲ್ಪಾಡು ಶ್ರೀ ಕಾಶಿವಿಶ್ವನಾಥ ದೇವಾಲಯಗಳಲ್ಲಿ ಶಿವರಾತ್ರಿ ಸಹಸ್ರ ನಾಮಾವಳಿಗಳೊಂದಿಗೆ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕಗಳನ್ನು ನೆರವೇರಿಸಿ ವಿಶೇಷ ಪೂಜೆ ನಡೆಸಲಾಯಿತು.ಶಿವನಿಗೆ ಇಷ್ಟವಾದ ಬಿಲ್ವಪತ್ರೆ, ತುಂಬೆ ಹೂವು ಸಂಗ್ರಹಿಸಿ ಶಿವನ ಆರಾಧನೆಯಲ್ಲಿ ತೊಡಗಿದ್ದರು.
ನಂದಗೋಕುಲ ಅಶ್ರಮದಲ್ಲಿ ರುದ್ರ ಹೋಮ
ಪುಂಗನೂರು ರಸ್ತೆಯ ಆರ್.ತಿಮ್ಮಸಂದ್ರದ ಬಳಿ ಇರುವಂತ ನಂದಗೋಕುಲ ಅಶ್ರಮದಲ್ಲಿ ಶ್ರೀ ಸುಧೀರಾನಂದಗಿರಿ ಸ್ವಾಮಿ ನೇತೃತ್ವದಲ್ಲಿ ಶ್ರೀಜಗದಾಂಬ ಸಮೇತ ಶ್ರೀಜಗನಾಥ ಮಹಾದೇವನಿಗೆ ರುದ್ರಾಭಿಷೇಕ ಹಾಗು ರುದ್ರ ಹೋಮ ನಡೆಸಲಾಯಿತು.

ಅರಕೇರಿ ನಾಗನಾಥೇಶ್ವರನಿಗೆ ರಥೋತ್ಸವ
ತಾಲೂಕಿನ ಇತಿಹಾಸ ಪ್ರಸಿದ್ಧ ಅರಕೇರಿ ಶ್ರೀನಾಗನಾಥೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಅಲಂಕಾರದಲ್ಲಿ ಕಳೆಗಟ್ಟಿದ್ದು ಮಧ್ಯಾನಃ ನಡೆದ ರಥೋತ್ಸವ ಜನಸಮೂಹದಲ್ಲಿ ವಿಜೃಂಬಣೆಯಿಂದ ನಡೆಯಿತು ದೇವರ ದರ್ಶನ ಪಡೆಯಲು ತಾಲೂಕಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಶ್ರೀನಾಗನಾಥೇಶ್ವರ ದರ್ಶನ ಪಡೆದು ಪುನೀತರಾದರು,ದೇವಾಲಯದ ದರ್ಮಾಧಿಕಾರಿ ರಮೇಶ್ ಬಾಬು ವಿಶೇಷ ಆಸಕ್ತಿ ವಹಿಸಿ ನೂಕು-ನುಗ್ಗಲು ಆಗದಂತೆ ಮತ್ತು ಭಕ್ತರು ಪ್ರಯಾಸ ಪಡೆಯದೆ ದರ್ಶನ ಮಾಡಲು ಸಕಲ ರೀತಿಯ ವ್ಯವಸ್ಥೆಗಳನ್ನು ಮಾಡಿದ್ದರು.