ಶ್ರೀನಿವಾಸಪುರ:ಪಟ್ಟಣದ ಹೊರವಲಯದ ಹೋದಲಿ ಪಂಚಾಯಿತಿ ವ್ಯಾಪ್ತಿಯ ಹೊಗಳಗೆರೆ ರಸ್ತೆಯಲ್ಲಿನ ಗುಡ್ಡದ ಮೇಲಿನ ಗವಿಗಟ್ಟು ಶ್ರೀ ಕಾಲಭೈರವೇಶ್ವರ ದೇವಾಲಯದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮದ ಅಂಗವಾಗಿ ಶ್ರೀಪಂಚಶಿರ(ಐದು ತಲೆ)ನಾಗಮ್ಮ ದೇವಿ ಪ್ರತಿಷ್ಠಾಪನೆ ಮತ್ತು ಧ್ವಜಾರೋಹಣ ಕಾರ್ಯಕ್ರಮ ಶನಿವಾರ ನೇರವೇರಿತು ಇಂದು ಭಾನುವಾರ ಘಟ್ಟುಶ್ರೀ ಗಂಗಮ್ಮ ದೇವಿ,ಶ್ರೀ ಕಾಲಭೈರವೇಶ್ವರ,ಶ್ರೀ ಚಂದ್ರಮೌಳೇಶ್ವರ.ಶ್ರೀಪಾತಾಳೇಶ್ವರ ಹಾಗು ಶ್ರೀ ಅಭಯಾಂಜನೇಯ ಸೇರಿದಂತೆ ಐದು ದೇವರುಗಳ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆಡೆಯಿತು ದೇವಾಲಯ ಸ್ಥಾಪಕ ಅಧ್ಯಕ್ಷ ಗಾರೆಮೇಸ್ತ್ರೀ ದೊಡ್ಡನಾಗಣ್ಣ ಮತ್ತು ಸಂಚಾಲಕ ಪುರ್ನಹಳ್ಳಿ ಬುಲೇಟ್ ವೆಂಕಟರೆಡ್ದಿ ನೇತೃತ್ವದಲ್ಲಿ ಭಕ್ತಾದಿಗಳ ನೆರವಿನಿಂದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು ವಿವದಡೆಯಿಂದ ಯಲ್ದೂರು,ಹೊದಲಿ,ಸೋಮಯಾಜಲಹಳ್ಳಿ ಆವಲಕುಪ್ಪ,ಹೊಗಳಗೆರೆ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೋಂಡು ಪುನಿತರಾದರು.
ಕೇಂದ್ರ ಸರ್ಕಾರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ದಂಪತಿ, ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಪುರಸಭೆ ಮಾಜಿ ಅಧ್ಯಕ್ಷ ಮುನಿಯಪ್ಪ,ಡಾ.ಮಂಜುನಾಥ್,ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ನಾರಯಣಸ್ವಾಮಿ,ಹೊದಲಿರಾಮಮೂರ್ತಿ ಮುಳಬಾಗಿಲು ಹಿರಿಯ ಕಾಂಗ್ರೆಸ್ ಮುಖಂಡ ರಾಮಪ್ರಸಾದ್,ಮುಂತಾದವರು ಇದ್ದರು.
Breaking News
- ಶ್ರೀನಿವಾಸಪುರ:ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ಪ್ರಕ್ಷಬ್ದ ಪರಿಸ್ಥಿತಿ!
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
Saturday, April 5