- ಮಾಜಿ ಸಂಸದ ಮುನಿಯಪ್ಪ ಮುನಿಸು ಶಮನಕ್ಕೆ ಸ್ವತಃ ಅಖಾಡಕ್ಕೆ ಇಳಿದ ಸಿದ್ದರಾಮಯ್ಯ
- ಕೋಲಾರದ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಜಿ ಸಂದೇಶ ರವಾನಿಸಿದ ಸಿದ್ದರಾಮಯ್ಯ
- ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ದಿಸುವುದು ಬಹುತೇಕ ಖಚಿತ
ನ್ಯೂಜ್ ಡೆಸ್ಕ್: ಕೋಲಾರದಲ್ಲಿ ಸೋಮವಾರ ಆಯೋಜಿಸಿರುವ ಮಾಜಿ ಮುಖ್ಯಮಂತ್ರಿ,ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ದಿಸುವ ಕುರಿತಾಗಿ ಶಕ್ತಿ ಪ್ರದರ್ಶನದ ಸಭೆಗೆ ಮಾಜಿ ಸ್ಪೀಕರ್ ರಮೇಶಕುಮಾರ್ ಶ್ರೀನಿವಾಸಗೌಡ ನೇತೃತ್ವದಲ್ಲಿ ಭರದ ಸಿದ್ದತೆ ನಡೆಯುತ್ತಿದ್ದರೆ ಅತ್ತ ಕೋಲಾರದ ಸಭೆಗೆ ಬರವುದಕ್ಕೂ ಮುಂಚಿತವಾಗಿ ಸಿದ್ದರಾಮಯ್ಯ ಕೋಲಾರದ ಮಾಜಿ ಸಂಸದ ಮುನಿಯಪ್ಪ ಅವರ ಬೆಂಗಳೂರಿನ ಸಂಜಯ್ ನಗರದ ಮನೆಗೆ ತೆರಳಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.ಈ ಮೂಲಕ ಮಾಜಿ ಸಂಸದ ಮುನಿಯಪ್ಪನವರ ಮುನಿಸು ಶಮನ ಮಾಡುವ ಪ್ರಯತ್ನದ ಮೂಲಕ ಕೋಲಾರದ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಖಂಡರ ನಡುವೆ ಯಾವುದೆ ಭಿನ್ನಮತ ಇಲ್ಲ ಎಂಬ ಸಂದೇಶ ರವಾನಿಸಿ ಕೋಲಾರಕ್ಕೆ ಬರುತ್ತಿರುವುದು ಸಿದ್ದರಾಮಯ್ಯ ಕೋಲಾರದಲ್ಲಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎನ್ನುವಂತಾಗಿದೆ.
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದ ಮಾಜಿ ಸಂಸದ,ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಆರ್. ಸೀತಾರಾಂ,ಮಾಜಿ ಸಂಸದ ಚಂದ್ರಪ್ಪ,ಮಾಜಿ ಶಾಸಕ ನಾರಾಯಣ ಸ್ವಾಮಿ,ವಿಧಾನಪರಿಷತ್ ಸದಸ್ಯ ನಾರಯಣಸ್ವಾಮಿ ಕೋಲಾರ ವಿಧಾನಸಭೆ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು,ಉದಯಶಂಕರ್,ದಳಸನೂರು ಗೋಪಾಲಕೃಷ್ಣ ಮುಂತಾದವರು ಇದ್ದರು.