- ಸಮಾಜವಾದಿ ಸಿದ್ದಾಂತದ ಸಿದ್ದರಾಮಯ್ಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ
- ನಾನು ನಾಸ್ತಿಕನಲ್ಲ, ಆದರೆ ಆಷಾಢಭೂತಿತನದ ಭಕ್ತಿ ನನ್ನದಲ್ಲ
- ವಿಶೇಷ ಪೂಜೆ ಬಳಿಕ ಸಿದ್ದರಾಮಯ್ಯ ಅವರನ್ನು ಸ್ಮಾನಿಸಿದ ಮಠದ ಆಡಳಿತ ಮಂಡಳಿ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ಉತ್ತರಹಳ್ಳಿ ಪೂರ್ಣಪ್ರಜ್ಞ ಲೇಔಟ್ನಲ್ಲಿರುವ ಕಲ್ಪವೃಕ್ಷ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ವಿಶೇಷ ಆಹ್ವಾನದ ಮೇರೆಗೆ ಮಠಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ(ಮಠ) ನಡೆಯುತ್ತಿರುವ ಶ್ರೀ ರಾಘವೇಂದ್ರ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಶ್ರೀ ರಾಯರ ಬೃಂದಾವನಕ್ಕೆ ಆರತಿ ಬೆಳಗಿ,ಪೂಜೆ ಸಲ್ಲಿಸಿ, ಸಾಮನ್ಯ ಭಕ್ತನಂತೆ ನಿಂತು ನಮಸ್ಕಾರ ಮಾಡಿದ ಅವರುಹೂವು ಸಮರ್ಪಣೆ ಮಾಡಿರುತ್ತಾರೆ.ಈ ಸಂದರ್ಭದಲ್ಲಿ ಶ್ರೀ ಮಠದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು ಇದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಿದ್ದರಾಮಯ್ಯ, ನಾನು ನಾಸ್ತಿಕನಲ್ಲ. ನನಗೆ ದೇವರ ಮೇಲೆ ಭಕ್ತಿಯಿದೆ. ಮನುಷ್ಯನಿಗೆ ದೇವರ ಮೇಲೆ ನಿಜ ಭಕ್ತಿ ಇರಬೇಕು.ಆಷಾಢಭೂತಿತನದ ಭಕ್ತಿ ಒಳ್ಳೆಯದಲ್ಲ.ನಾನು ದೇವರನ್ನು ನಂಬಿದ್ದೇನೆ. ಆದರೆ,ದೇವರೊಬ್ಬ ನಾಮ ಹಲವು ಎಂದುಕೊಂಡಿದ್ದೇನೆ. ಹೀಗಾಗಿ, ದೇವರು ಎಲ್ಲರಲ್ಲೂ ಇದ್ದಾನೆ. ಮನುಷ್ಯನಲ್ಲಿ ದೇವರನ್ನು ಕಾಣುವ ಮನಸ್ಥಿತಿ ಇದ್ದರೆ ಸಾಕು ದೇವರು ಕಾಣುತ್ತಾನೆ” ದೇವಸ್ಥಾನಕ್ಕೆ ಹೋದವರೆಲ್ಲ ಆಸ್ತಿಕರಲ್ಲ, ದೇವಸ್ಥಾನಕ್ಕೆ ಹೋಗಲಿಲ್ಲ ಎಂದ ಮಾತ್ರಕ್ಕೆ ನಾಸ್ತಿಕರೂ ಅಲ್ಲ. ಮತ್ತೊಬ್ಬರಿಗೆ ಒಳ್ಳೆಯದನ್ನು ಬಯಸಿ, ಒಳ್ಳೆಯದನ್ನು ಮಾಡಿದರೆ ಸಾಕು ದೇವರು ಮೆಚ್ಚುತ್ತಾನೆ” ಎಂದು ಹೇಳಿದರು.
ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಅವರೊಂದಿಗೆ ಹೆಬ್ಬಾಳದ ಶಾಸಕ ಬೈರತಿ ಸುರೇಶ್, ಮಾಜಿ ಶಾಸಕ ಶ್ರೀನಿವಾಸ್, ಅಶೋಕ್ ಪಟ್ಟಣ್, ಹಿರಿಯ ಪತ್ರಕರ್ತ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಮತ್ತಿತರರು ಜೊತೆಗಿದ್ದರು.
ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗಿ ಪೂಜೆ ಸಲ್ಲಿಸಿರುವ ಬಗ್ಗೆ ಸ್ವತಹಃ ಸಿದ್ದಯಾಮಯ್ಯನವರು ತಮ್ಮ ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಫೋಟೋ ಸಮೇತ ಹಂಚಿಕೊಂಡಿರುತ್ತಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಜನರಿಂದ ವಿಶೇಷ ವ್ಯಾಖ್ಯಾನಗಳು ವ್ಯಕ್ತವಾಗುತ್ತಿದೆ.ಕಳೆದವಾರ ಸಿದ್ದರಾಮಯ್ಯ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮಲೆ ಮಹದೇಶ್ವರ ದೇವಾಲದಲ್ಲಿ ಪೂಜೆ ಸಲ್ಲಿಸಿದ್ದರು