ಕೋಲಾರ: ಶ್ರೀನಿವಾಸಪುರದ ಯುವಕ,ಮುಳಬಾಗಿಲು ಶಾಸಕ, ಸಮೃದ್ಧಿ ಸಮೂಹ ಸಂಸ್ಥೆಗಳ ಮಾಲಿಕ ಸಮೃದ್ಧಿ ಮಂಜುನಾಥ್ ಅವರು ಬಂಗಾರದ ಅಂಗಡಿ ಸಿರಿ ಸಮೃದ್ಧಿ ಗೋಲ್ಡ್ ಪ್ಯಾಲೆಸ್ ಅನ್ನು ಕೋಲಾರ ನಗರದಲ್ಲಿ ಎರಡನೆಯ ಮಳಿಗೆಯನ್ನು ಸೋಮವಾರ ಆರಂಭಿಸಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವತಃ ಶಿರಡಿಸಾಯಿನಾಥನಿಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಗೂ ಸಮರ್ಪಕ ತೂಕ, ಕಡಿಮೆ ಬೆಲೆಯ ಹೊಸ ಹೊಸ ವಿನ್ಯಾಸದ ಆಭರಣಗಳನ್ನು ಕೋಲಾರದ ಜನತೆಗೆ ನೀಡುವ ಮೂಲಕ ಉತ್ತಮವಾಗಿ ವ್ಯಾಪಾರ ಮಾಡಲಿ ಎಂದು ಶುಭಕೋರಿದರು.
ಸಿರಿಸಮೃದ್ಧಿ ಗೋಲ್ಡ್ ಪ್ಯಾಲೇಸ್ ಮಾಲಿಕ ಸಮೃದ್ಧಿ ಮಂಜುನಾಥ್ ಮಾತನಾಡಿ ಬೆಂಗಳೂರಿನ ಯಲಹಂಕದಲ್ಲಿ ಪ್ರಥಮ ಮಳಿಗೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಭಿನ್ನ ಹಾಗೂ ವಿಶೇಷವಾಗಿ ತಯಾರಾದ ಹೊಸ ವಿನ್ಯಾಸದ ಪರಿಶುದ್ಧ ಹಾಗೂ ಬಿಐಎಸ್ ಹಾಲ್ಮಾರ್ಕ್ ಒಳಗೊಂಡ ಆಭರಣಗಳು, ಇಂದಿನ ಕಾಲಘಟ್ಟಕ್ಕೆ ತಕ್ಕಂತಹ ವಿನೂತನ ಶೈಲಿಯ ವಿನ್ಯಾಸದ ಆಭರಣಗಳು, ಚಿನ್ನ ಬೆಳ್ಳಿ ಹಾಗೂ ವಜ್ರದ ಆಭರಣಗಳ ಬೃಹತ್ ಭಂಡಾರ, ಕಡಿಮೆ ಬೆಲೆಯ ಹೆಚ್ಚು ಆಕರ್ಷಕ ಆಭರಣಗಳು, ಪರಿಶುದ್ಧ ಹಾಗೂ ಆಕರ್ಷಕ ವಿನ್ಯಾಸದ ಸೀರೆಗಳ ಭಂಡಾರ, ವಿನೂತನ ಗ್ರಾಹಕಸ್ನೇಹಿ ಉಳಿತಾಯ ಯೋಜನೆಗಳಿಂದ ಪ್ರತಿಯೊಬ್ಬರು ಆಭರಣ ಖರೀದಿಸಲು ಅವಕಾಶ ನೀಡಿದರಿಂದಾಗಿ ಶುಭಾರಂಭಗೊಂಡ ಕೆಲವೇ ದಿನಗಳಲ್ಲಿ ಮನೆಮಾತಾಗಿದೆ. ಗುಣಮಟ್ಟದ ಆಭರಣಗಳನ್ನು ಮಾರಾಟ ಮಾಡುತ್ತ ಜನಮನ್ನಣೆಗೆ ಪಾತ್ರವಾಗಿದೆ, ಈಗ ಕೋಲಾರದಲ್ಲಿ ಎರಡನೆಯ ಮಳಿಗೆ ಆರಂಭಿಸಿರುವುದಾಗಿ ಹೇಳಿದ ಅವರು ತವರು ಜಿಲ್ಲೆಯ ಜನರಿಗೆ ಉತ್ತಮ ಹಾಗು ಗುಣಮಟ್ಟದ ಹಾಲ್ ಮಾರ್ಕ್ ನ ನವ ನವೀನ ಮಾದರಿಯ ಆಭರಣಗಳ ಭಂಡಾರವನ್ನು ನೀಡುವ ಸಲುವಾಗಿ ಕೋಲಾರ ನಗರದ ಕಾಳಮ್ಮ ಗುಡಿ ರಸ್ತೆಯಲ್ಲಿ ಆರಂಭಿಸಿರುವುದಾಗಿ ಹೇಳಿದರು.
ಸಿರಿಸಮೃದ್ಧಿ ಗೋಲ್ಡ್ ಪ್ಯಾಲೆಸ್ ಮಳಿಗೆ ಶುಭಾರಂಭದಲ್ಲಿ ಸಿನಿಮಾ ನಟ ಧನ್ವಿರ್,ನಟಿ ಸಂಜನಾ ಆನಂದ್, ಶ್ರೀನಿವಾಸಪುರದ ಶಾಸಕ ವೆಂಕಟಶಿವಾರೆಡ್ಡಿ,ಚಿಂತಾಮಣಿ ಮಾಜಿ ಶಾಸಕ ಕೃಷ್ಣಾರೆಡ್ಡಿ,ಕೋಲಾರದ ಶಾಸಕ ಕೊತ್ತೂರುಮಂಜುನಾಥ್,ಎಂ.ಎಲ್.ಸಿ ಅನಿಲ್ ಕುಮಾರ್ ಮಾಜಿ ಎಂ.ಎಲ್.ಸಿ ತೂಪಲ್ಲಿಚೌಡರೆಡ್ಡಿ,ಕೋಮುಲ್ ಮುಳಬಾಗಿಲು ನಿರ್ದೇಶಕ ಕಾಡೇನಹಳ್ಳಿನಾಗರಾಜ್, ಸಿಎಂಆರ್ ಶ್ರೀನಾಥ್, ಮಲ್ಲೇಶ್ ಬಾಬು, ಶೇಷಾಪುರಗೋಪಾಲ್ ಸೇರಿದಂತೆ ಹಲವು ಗಣ್ಯರು ಹಾಗೂ ಸಿನಿ ತಾರೆಯರು ಪಾಲ್ಗೊಂಡಿದ್ದರು.