ಸೋಮಯಾಜಲಹಳ್ಳಿ ಗ್ರಾಮ ದಶಕಗಳ ಹಿಂದೆ ರಾಜಕೀಯ ಕುರುಕ್ಷೇತ್ರವಾಗಿದ್ದು ಮಚ್ಚು ಕೊಡಲಿ ಕತ್ತಿ ದಾಳಿ ಪ್ರತಿ ದಾಳಿ ಕೊಲೆ ಸುಲಿಗೆ ದ್ವೇಷ ಪ್ರತಿಕಾರದರಕ್ತಚರಿತ್ರೆಯ ದಾಹಕ್ಕೆ ನರಳಿ ನರಳಿ ನಲುಗಿ ಹೋಗಿತ್ತು,ಹೊಸ ಪೀಳಿಗೆಯ ಒಡಾಟದ ಕಾಲಘಟ್ಟದಲ್ಲಿ ಇಲ್ಲಿನ ಜನ ಹಲವಾರು ವರ್ಷಗಳಕರಾಳ ಘಟನೆಗಳನ್ನು ಹಾಗು ಹಳೆಯ ಮುನಿಸನೆಲ್ಲ ಮರೆತು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದರು.ಬದುಕು ಕಟ್ಟಿಕೊಳ್ಳಲು ಮುಂದಾದ ಯುವಜನತೆ ಸಾಮಾಜಿಕವಾಗಿ ವ್ಯವಹಾರಿಕವಾಗಿ ಅಭಿವೃದ್ಧಿಯಾಗುತ್ತ ಸಾಗಿದ್ದರು ಆದರೆ ಸೋಮವಾರ ರಾತ್ರಿ ಹಣದ ವಿಚಾರದಲ್ಲಿ ನಡೆದ ಜಗಳದಲ್ಲಿ ಕೊಲೆಯೊಂದು ನಡೆದು ಇಲ್ಲಿನ ಜನರ ನೆಮ್ಮದಿಗೆ ಕೊಳ್ಳಿ ಇಟ್ಟಂತಾಗಿದೆ ಈ ಬಗ್ಗೆ ಜಿಲ್ಲಾಡಳಿತ ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡು ಇಂತಹ ಘಟನೆಗಳನ್ನುಮೊಳಕೆಯಲ್ಲೆ ಚಿವುಟಿ ಹಾಕಿದಾಗಷ್ಟೆ ಶಾಂತವಾದ ಸೋಮಯಾಜಲಹಳ್ಳಿ ಕಾಣಲು ಸಾಧ್ಯ.….
ಶ್ರೀನಿವಾಸಪುರ:ಚಾಕು ಇರಿತದಿಂದ ನಡೆದ ಕೊಲೆಯಿಂದ ಸೋಮಯಾಜಲಹಳ್ಳಿ ಗ್ರಾಮ ಈಗ ಬೂದಿ ಮುಚ್ಚಿದ ಕೆಂಡದಂತಾಗಿದೆ ಗ್ರಾಮದಲ್ಲಿ ಎಲ್ಲೆಲ್ಲೂ ಪೋಲಿಸರೆ ತುಂಬಿದ್ದಾರೆ ಗ್ರಾಮದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ಏರ್ಪಟ್ಟಿದೆ. ಹಣದ ವಿಚಾರವಾಗಿ ಸೋಮಯಾಜಲಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ನ್ಯಾಯ ಪಂಚಾಯಿತಿ ಮಾಡುವ ಸಲುವಾಗಿ ಸೇರಿದ್ದವರ ನಡುವೆ ನಡೆದ ಜಗಳದ ಸಂದರ್ಭದಲ್ಲಿ ಚಾಕುವಿನಿಂದ ಇರಿಯಲಾಗಿದ್ದು ಮಂಜುನಾಥ್(32) ಎಂಬ ವ್ಯಕ್ತಿ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಇಂದು ಸೋಮವಾರ ರಾತ್ರಿ 8 ಗಂಟೆ ಸಮಯದಲ್ಲಿ ನಡದಿತ್ತು.
ಹೊಸ ಮನೆಗೆ ಬೆಂಕಿ ಹತ್ಯೆ ಆರೋಪ ಹೊತ್ತಿರುವ ಕೂಳಗುರ್ಕಿಶಿಮೂರ್ತಿ ಮನೆ ಮೇಲೆ ಮೃತ ಮಂಜುನಾಥ್ ಕಡೆಯವರು ಗುಂಪು ಕಟ್ಟಿಕೊಂಡು ಕೂಳಗುರ್ಕಿಯಲ್ಲಿನ ಶಿಮೂರ್ತಿ ಹೊಸಮನೆ ಮೇಲೆ ದಾಳಿಮಾಡಿದ್ದಾರೆ ತೀರಾ ಇತ್ತಿಚಿಗಷ್ಟೆ ಮನೆ ನಿರ್ಮಿಸಿಕೊಂಡಿದ್ದ ಹೊಸ ಮನೆ ಹಚ್ಚಿದ ಬೆಂಕಿಗೆ ಸಂಪೂರ್ಣವಾಗಿ ಸುಟ್ಟುಕರಕರವಾಗಿದೆ.