ಶ್ರೀನಿವಾಸಪುರ: ಅಕ್ರಮವಾಗಿ ರಕ್ತಚಂದನ ಗೋಸಾಕಾಣಿಕೆ ಗೋ ಕಳ್ಳತನ, ಗಾಂಜ ಡ್ರಗ್ಸ್ ಕಾನೂನು ಭಾಹಿರವಾಗಿ ಅಂತರಾಜ್ಯ ಹಾಗು ಅಂತರ್ ಜಿಲ್ಲಾ ಮಟ್ಟದಲ್ಲಿ ಇನ್ನಿತರೆ ಅಕ್ರಮ ಸಾಗಾಣಿಕೆಗಳನ್ನು ತಡೆಯುವುದು, ಅಬ್ಕಾರಿ ಕಾಯ್ದೆ, ಅಪರಿಚಿತ ಮೃತದೇಹಗಳ ಮಾಹಿತಿ ಹಂಚಿಕೆ, ವಾರೆಂಟ್ ಇರುವಂತ ಅಸಾಮಿಗಳ ಪತ್ತೆಗೆ ಸಹಕಾರ, ಕಾಣೆಯಾದವರ ಕುರಿತಾಗಿ ಪತ್ತೆಹಚ್ಚಲು ಪರಸ್ಪರ ಸಹಕಾರ, ಹಾಗು ಸಾಗಾಣಿಕೆ ಚಟುವಟಿಕೆಗಳನ್ನು ತಡೆಯಲು ಕರ್ನಾಟಕ ಮತ್ತು ಆಂಧ್ರ ಪೋಲಿಸರು ಜಂಟಿಯಾಗಿ ಕಾರ್ಯಚರಣೆ ನಡೆಸುವುದಾಗಿ ಕೋಲಾರ ಪೋಲಿಸ್ ವರಿಷ್ಠಾಧಿಕಾರಿ ದೇವರಾಜ್ ಹೇಳಿದರು ಅವರು ತಾಲೂಕಿನ ಹೊಗಳಗೆರೆ ತೋಟಗಾರಿಕೆ ಭವನದಲ್ಲಿ ನಡೆದ ಅಂತರಾಜ್ಯ ಪೋಲಿಸ್ ಅಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಗಡಿದಾಟುವ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಅವರು ಅಂತರ್ಜಿಲ್ಲೆ ಹಾಗು ಅಂತರರಾಜ್ಯ ಪೋಲಿಸರ ನಡುವೆ ಸಮನ್ವಯತೆ ಮತ್ತು ಪರಸ್ಪರ ಸಹಕಾರ ಅಗತ್ಯ ಇದಕ್ಕಾಗಿ ಇಂದು ಕೋಲಾರ ಜಿಲ್ಲೆಯ ಗಡಿಯಾಚಗೆ ಬರುವಂತ ಆಂಧ್ರಪ್ರದೇಶದ ಅನ್ನಮಯ್ಯ ಹಾಗು ಚಿತ್ತೂರು ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆಗಳ ಮತ್ತು ಕೆಜಿಎಫ್ ಭಾಗದ ಪೋಲಿಸ್ ಅಧಿಕಾರಿಗಳು ಪಾಲ್ಗೋಂಡಿದ್ದರು.
ಕೋಲಾರ ಪೋಲಿಸ್ ವರಿಷ್ಠಾಧಿಕಾರಿ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು ಕೋಲಾರ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಸಚಿನ್ ಘೋರ್ಪಡೆ,ಆಂಧ್ರಪ್ರದೇಶದ ಪ್ರತಿನಿಧಿಗಳಾಗಿ ಮದನಪಲ್ಲಿ ಡಿ.ವೈ.ಎಸ್.ಪಿ ರವಿಮನೋಹರಾಚಾರಿ,ಪಲಮನೇರು ಡಿ.ವೈ.ಎಸ್.ಪಿ ಗಂಗಯ್ಯ,ಮದನಪಲ್ಲಿ ಟೂಟೌನ್ ವೃತ್ತನೀರಿಕ್ಷಕ ಮುರಳಿಕೃಷ್ಣ, ಮದನಪಲ್ಲಿ ರೂರಲ್ ವೃತ್ತನೀರಿಕ್ಷಕ ಸತ್ಯನಾರಯಣ ಕುಪ್ಪಂ ವೃತ್ತನೀರಿಕ್ಷಕ ಮೋಹನ್ ರಾವ್, ವಿ.ಕೋಟ ವೃತ್ತನೀರಿಕ್ಷಕ ಪ್ರಸಾದ್ ಬಾಬು ಚಿತ್ತೂರು ಸೈಬರ್ ಕ್ರೈಂ ವೃತ್ತನೀರಿಕ್ಷಕ ಶರತ್ ಚಂದ್ರ,ರಾಮಸಮುದ್ರಂ ಎಸ್.ಐ ರವೀಂದ್ರ,ಗಂಗಾವರಂ ಸಿ.ಐ ಆಶೋಕ್ ಕುಮಾರ್,ಕೋಲಾರ ಡಿ.ವೈ.ಎಸ್.ಪಿ ರಮೇಶ್,ಮುಳಬಾಗಿಲು ಡಿ.ವೈ.ಎಸ್.ಪಿ ಜೈ ಶಂಕರ್, ಬಟ್ಲಪಲ್ಲಿ ಎಸ್.ಐ ನಾರಯಣಸ್ವಾಮಿ,ಬೆತಮಂಗಲ ವೃತ್ತನೀರಿಕ್ಷಕ ವೆಂಕಟೇಶ್, ಗೌನಿಪಲ್ಲಿ ಸಿ.ಪಿ.ಐ. ದಯಾನಂದ್, ನಂಗಲಿ ಎಸ್.ಐ ವರಲಕ್ಷ್ಮಿ ಸೇರಿದಂತೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಬಹುತೇಕ ಪೋಲಿಸ್ ಅಧಿಕಾರುಗಳು ಪಾಲ್ಗೋಂಡಿದ್ದರು.