ಶ್ರೀನಿವಾಸಪುರ: ತಾಲ್ಲೂಕಿನ ಅರಿಕೆರೆ ಗ್ರಾಮದಲ್ಲಿ ಪುನರ್ ನಿರ್ಮಾಣ ಮಾಡಲಾಗಿರುವ ಭವ್ಯ ದೇಗುಲ ಶ್ರೀ ಕೋದಂಡರಾಮ ದೇವರ ದೇವಾಲಯ ಈ ತಿಂಗಳು ಮೂರು ದಿನಗಳ ಕಾಲ ನಡೆಯುವ ವಿಮಾನಗೋಪುರ,ಸಂಪ್ರೋಕ್ಷಣ ಹಾಗು ಕುಂಬಾಭೀಷೇಕ ಪೂಜಾ ಕಾರ್ಯಕ್ರಮಗಳ ಮೂಲಕ ಲೋಕಾರ್ಪಣೆಯಾಗಲಿದೆ.
ಮೇ 20 ರಂದು ಪಂಚಮಿ ತಿಥಿಯಂದು ಸಂಜೆ 5 ಗಂಟೆಗೆ ದೇವತಾ ಪ್ರಾರ್ಥನೆ ವಿಶ್ವಸೇಕ್ಸನ ಪೂಜಾ ಶುದ್ದ ಪುಣ್ಯಾಹ, ಅಂಕುರ್ಪಾಣೆ ವಾಸ್ತುಹೋಮ ಮೂಲಕ ಪ್ರಾರಂಭವಾಗುವ ಪೂಜಾ ಕಾರ್ಯಕ್ರಮಗಳು ಮೇ 21 ರಂದು ಶನಿವಾರ ಅಕ್ಲ್ಮಶ ಹೋಮ ದಾದಾದಿ ಹೋಮ ಸರ್ವ ದೈತ್ಯಹೋಮ ಅಷ್ಟಬಂಧನ ನಡೆಯಲಿದ್ದು,ಸುಂದರವಾಗಿ ರೂಪಗೊಂಡಿರುವ ಪುರಾತನ ಮೂಲದೇವರು ಶ್ರೀ ಲಕ್ಷ್ಮಣ ಸಮೇತ ಶ್ರೀ ಸೀತಾ ಶ್ರೀ ಕೋದಂಡ ರಾಮರ ವಿಗ್ರಹಗಳಿಗೆ ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ರತ್ನನ್ಯಾಸ ಅಷ್ಟಬಂಧನ ಸಂಜೆ ವಿಮಾನ ಗೋಪುರದ ಮೇಲೆ ಕಳಸ ಸ್ಥಾಪನೆ ಶಯ್ಯಾಧಿವಾಸ ಹೌತ್ರಪ್ರಸಂಶ ಮಹಾಶಾಂತಿ ಜಪ್ಯ ನಡೆಯಲಿದ್ದು ಮೇ 22 ರಂದು ಭಾನುವಾರ ಮೂಲದೇವರಿಗೆ ಪಂಚಾಮೃತ ಅಭಿಷೇಕ ಹಾಗು ಚತುರ್ದಶ ಮಹಾಶಾಂತಿ ಸ್ಥಿರಬಿಂಬ ಪ್ರತಿಷ್ಠಾಪನೆ, ಹಾಗು ಬೆಳಿಗ್ಗೆ ಶುಭ ಮಿಥುನ ಲಗ್ನದಲ್ಲಿ ಮೂಲ ದೇವರಿಗೆ ಕುಂಭಾಭಿಷೇಕ ಮತ್ತು ಸಂಪ್ರೋಕ್ಷಣೆ ಮಾಡುವ ಮೂಲಕ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಪರಿವಾರ ಸಮೇತ ಶ್ರೀ ಕೋದಂಡರಾಮ ದೇವರ ಭವ್ಯ ದೇವಾಯಲ ಲೋಕಾರ್ಪಣೆಯಾಗಲಿದೆ ಎಂದು ದೇವಾಲಯದ ಮಹಾ ಪೋಷಕರಾದ ಇಂದಿರಾಭವನ್ ರಾಜಣ್ಣ ತಿಳಿಸಿದ್ದಾರೆ.