ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ಶ್ರೀ ವೆಂಕಟೇಶ್ವರ ದೇವಾಲಯ ಇಲ್ಲದೆ ಶ್ರೀನಿವಾಸನ ಭಕ್ತರು ಇಲ್ಲಿ ಪರಿತಪಿಸುತ್ತಿದ್ದರು,ಈಗ ಭಕ್ತರ ಬಕುತಿಗೆ ದೇವ ದೇವ ಶ್ರೀನಿವಾಸ ಒಲಿದಿದ್ದಾನೆ, ಶ್ರೀನಿವಾಸಪುರ ಪಟ್ಟಣದ ವಲ್ಲಭಾಯ್ ರಸ್ತೆಯ ಕಟ್ಟೆಕೆಳಗಿನ ಪಾಳ್ಯದಲ್ಲಿ ಶ್ರೀ ನೀಳಾ ಮತ್ತು ಭೂನೀಳಾ ಸಮೇತ ಶ್ರೀ ವೆಂಕಟೇಶ್ವರ ಸ್ವಾಮಿಯ ನೂತನ ಶಿಲಾ ಬಿಂಬದೊಂದಿಗೆ ಜಿರ್ಣೋದ್ಧಾರವಾಗಿ ಇಂದು ಶ್ರಾವಣದ ಪ್ರಥಮ ಶುಕ್ರವಾರ ವೇಧಘೋಷಗಳೊಂದಿಗೆ ಪಂಚಸೂತ್ರಗಳೊಂದಿಗೆಮೂಲಮೂರ್ತಿಗಳಿಗೆ ಪ್ರಾಣ ಪ್ರತಿಷ್ಟಾಪನೆ ಮಾಡಲಾಗಿ ಲೋಕಾರ್ಪಣೆ ಮಾಡಲಾಯಿತು.
ದೇವಾಲಯದ ಆವರಣದಲ್ಲಿ ಶ್ರೀ ಅಭಯಾಂಜನೇಯಸ್ವಾಮಿ,ಮಹಾಗಣಪತಿ ಮತ್ತು ಗರುಡ ದೇವರುಗಳು ಸೇರಿದಂತೆ ಶ್ರೀನಿವಾಸ ದೇವರ ದ್ವಾರಪಾಲಕರಾದ ಜಯ-ವಿಜಯ ವಿಗ್ರಹಗಳ ನೂತನ ಶಿಲಾ ಬಿಂಬಗಳ ಪ್ರತಿಷ್ಠಾಪನೆಯಾಗಿದೆ.ಕಳೆದ ಮೂರು ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಹೋಮ ಹವನ ಆಯೋಜಿಸಲಾಗಿತ್ತು.
ದೇವಾಲಯ ಜಿರ್ಣೋದ್ಧಾರ ಕಾರ್ಯಕ್ರಮದಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್,ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎ.ಎನ್.ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್,ಕೈವಾರ ಕ್ಷೇತ್ರ ಮಠದ ಸಂಚಾಲಕ ಬಾಲಕೃಷ್ಣ ಭಾಗವತರ್,ಬಿ.ಎಲ್. ಕುಟುಂಬದ ಹಿರಿಯ ಸದಸ್ಯರಾದ ಬಿ.ಎಮ್.ರಾಮಚಂದ್ರಯ್ಯ, ಬಿ.ಎಲ್.ಸೂರ್ಯನಾರಾಯಣ, ಬಿ.ಎಂ.ಪ್ರಕಾಶ್, ಸ್ಥಳೀಯ ಮುಖಂಡರಾದ ಪ್ರಸಾದ್, ಹೇಮಂತ್,ಗೌತಮ್, ಶ್ರೀನಾಥ್, ಹೊದಲಿ ಶ್ರೀನಿವಾಸ್, ಪುರಸಭಾ ಸದಸ್ಯ ಬಿ.ಎಂ.ಭಾಸ್ಕರ್, ಮುಖಂಡರಾದ ಕೆ.ಕೆ.ಮಂಜು, ನಾಗದೇನಹಳ್ಳಿ ಸೀತರಾಮರೆಡ್ಡಿ, ಆಟೋ ಜಗದೀಶ್, ನೆತ್ತೋಳ್ಳ ಕೃಷ್ಣಪ್ಪ, ನಾಗರಾಜ್, ಯಾಮಾರೆಡ್ಡಿ ಕೊಲಮಿಮಂಜು, ಮುಂತಾದವರು ಇದ್ದರು.